ಡಾ.ಬಿ.ಆರ್‌. ಹಿರೇಮಠರ ಶಾಸನ ಅಧ್ಯಯನ

Author : ಅಶೋಕ ನರೋಡೆ

Pages 276

₹ 200.00




Year of Publication: 2012
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ಡಾ.ಬಿ.ಆರ್.ಹಿರೇಮಠ ಅವರು ಉತ್ತಮ ಸಂಶೋಧಕರು, ಶಾಸನಗಳ ವಿಸ್ತಾರವಾದ ಓದು, ಆಳವಾದ ಪಾಂಡಿತ್ಯವಿತ್ತು. ಬಿ.ಆರ್. ಅವರ ಲೇಖನಗಳು ಶಾಸನಮೂಲವಾದ ಸಂಸ್ಕೃತಿಯನ್ನು ಪರಿಚಯಿಸುತ್ತದೆ ಈ ಕೃತಿ. ಗ್ರಂಥದಲ್ಲಿ 34 ಲೇಖನಗಳು ಮರೆತುಹೋದ ಪ್ರಾಚೀನ ಕನ್ನಡ ಸಾಂಸ್ಕೃತಿಕ ವೈವಿಧ್ಯಮಯ  ಬದುಕನ್ನುವಿವಿಧ ನೆಲೆಗಳನ್ನು ಪರಿಚಯಿಸುತ್ತವೆ.

ಪ್ರಾಚೀನ ಹಾಗೂ ಮಧ್ಯಕಾಲದ ಕನ್ನಡಿಗರ ವೃತ್ತಿಸ್ವರೂಪವನ್ನು ವಿವರಿಸಿದ್ದಾರೆ. ಪ್ರಮುಖವಾಗಿ ವರ್ತಕರ ಸಂಘಟನೆ, ಸಮುದಾಯ ಪ್ರೀತಿ, ಧಾರ್ಮಿಕ ನೆಲೆಟ್ಟುಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಅಂದಿನ ಸುಂಕಪದ್ಧತಿ, ವ್ಯಾಪಾರ ಪದ್ಧತಿ ಮೊದಲಾದ ವಿವರಗಳನ್ನು ನೀಡಿದ್ದಾರೆ. ಡಾ.ಬಿ.ಆರ್.ಹಿರೇಮಠ ಅವರ ಬರಹ ಸರಳ ಹಾಗೂ ನೇರ. ಅವರ ಲೇಖನಗಳು ಮಾಹಿತಿಪೂರ್ಣ.

ವೃತ್ತಿ, ಧರ್ಮ ಹಾಗೂ ಜಾತಿಮೂಲದಿಂದ ಬಂದಿರಬಹುದಾದ, ಆನ್ವಯಿಕವಾಗಿ ಹುಟ್ಟಿರಬಹುದಾದ ವ್ಯಕ್ತಿನಾಮಗಳು ಅಂತೆಯೇ ವಿವಿಧ ಸುಂಕಗಳ ವಿವಿಧತೆ ಕುರಿತು ವಿಶಿಷ್ಟ ಮಾಹಿತಿ ಒದಗಿಸುತ್ತವೆ. ನಾಲ್ವರು ಲೇಖಕರು ಇವುಗಳನ್ನು ಸಂಪಾದಿಸಿದ್ದಾರೆ.

 

About the Author

ಅಶೋಕ ನರೋಡೆ
(01 March 1965)

ಅಶೋಕ ನರೋಡೆ ಎಂದೇ ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರಾದ ಅಶೋಕ ಮುರಿಗೆಪ್ಪ ನರೋಡೆ, ಬೆಳಗಾವಿಯ ಅಥಣಿಯಲ್ಲಿ 1965 ಮಾರ್ಚಿ 01 ರಲ್ಲಿ ಜನಿಸಿದರು. ಕನ್ನಡ ಪ್ರಾಧ್ಯಾಪಕರು, ಕವಿಗಳು, ಸಂಶೋಧಕರು. ಮಹಾಲಿಂಗಪುರದ ಕಲಾ ಹಾಗೂ ಡಿ.ಡಿ.ಎಸ್, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ‘ಏಕಲವ್ಯನ ಪಾತ್ರ : ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಕರ್ನಾಟಕ ವಿ.ವಿಯಿಂದ ಪಿಎಚ್.ಡಿ ಪಡೆದಿದ್ದಾರೆ. ‘ರನ್ನ ವಿಚಾರ ವೇದಿಕೆ, ಕಾವ್ಯ ಕಾರಂಜಿ, ಅಪೂರ್ವ ಪ್ರಕಾಶನಗಳಂತಹ ಸಂಸ್ಥೆಗಳ - ಸಂಘಟಕರು. ಸಾಹಿತ್ಯ- ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅವರ ಹೊಸಗನ್ನಡ ಕಾವ್ಯ ಸಂಚಯ ಪಠ್ಯಗ್ರಂಥವೂ ಆಗಿದೆ.  ‘ಬೇಡಿಕೆ, ಆಸ್ಫೋಟ, ನದಿ ಮತ್ತು ನಾನು, ಮಧುರ ...

READ MORE

Related Books