ಡಾ. ಇಂದಿರಾ ಹೆಗ್ಗಡೆ

Author : ಜ್ಯೋತಿ ಚೇಳ್ಯಾರು

Pages 56

₹ 45.00




Year of Publication: 2018
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ  'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 236 ನೇ ಪುಸ್ತಕ ಡಾ. ಇಂದಿರಾ ಹೆಗ್ಗಡೆ. ಸಮಾಜಮುಖಿ ಚಿಂತಕಿ ಡಾ. ಇಂದಿರಾ ಹೆಗ್ಗಡೆ ಖ್ಯಾತ ಸಾಹಿತಿ-ಸಂಶೋಧಕಿ ಡಾ. ಇಂದಿರಾ ಹೆಗ್ಗಡೆಯವರು ಸಣ್ಣ ಕಥೆಗಳನ್ನು ಬರೆಯುವ ಮೂಲಕ ತಮ ೩೩ನೆಯ ವಯಸಿನಲ್ಲಿ ಸಾಹಿತ್ಯಲೋಕಕ್ಕೆ ಪಾದಾರ್ಪಣೆ ಮಾಡಿದರು. ಮೂರು ಕಥಾ ಸಂಕಲನಗಳನ್ನು, 'ಬದಿ' ಮುಂತಾದ ನಾಲ್ಕು ಕಾದಂಬರಿಗಳನ್ನು, ಒಂದು ಕವನ ಸಂಕಲನವನ್ನು ಹೊರತಂದಿದ್ದಾರೆ. 'ಗುತ್ತಿನಿಂದ ಸೈನಿಕ ಜಗತ್ತಿಗೆ' ಎಂಬ ಅನುಭವ ಕಥನವನ್ನು ತಮ್ಮ ಪತಿ ಎಸ್. ಆರ್.ಹೆಗ್ಡೆಯವರೊಂದಿಗೆ ಸೇರಿ ರಚಿಸಿದ್ದಾರೆ. ಎಸ್‌.ಆರ್‌. ಹೆಗ್ಡೆ ಯವರ ಕುರಿತಾಗಿ ನಾಡಿಗೆ ನಮಸ್ಕಾರ ಮಾಲೆಗಾಗಿ ಕೃತಿ ರಚಿಸಿಕೊಟ್ಟಿದ್ದಾರೆ.. 'ಬಂಟರು: ಒಂದು ಸಮಾಜೋ ಸಾಂಸ್ಕತಿಕ ಅಧ್ಯಯನ' ಇವರಿಗೆ ಬಹಳ ಹೆಸರು ತಂದ ಕೃತಿ. ಅವರ ಡಿ.ಲಿಟ್. ಸಂಪ್ರಬಂಧ 'ತುಳುವರ ಮೂಲತಾನ ಆದಿ ಆಲಡೆ : ಪರಂಪರೆ ಮತ್ತು ಪರಿವರ್ತನೆ', ಸಂಶೋಧನೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಇವರು ಹಲವು ಪ್ರಶಸ್ತಿ, ಸನ್ಮಾನ, ಗೌರವಗಳಿಂದ ಅಲಂಕೃತರು.

About the Author

ಜ್ಯೋತಿ ಚೇಳ್ಯಾರು

ಲೇಖಕಿ ಜ್ಯೋತಿ ಚೇಳ್ಯಾರು ಕನ್ನಡ ತುಳು ಎರಡೂ ಭಾಷೆಗಳಲ್ಲಿ ಬರೆಯುವ ಕವಯತ್ರಿ ಮತ್ತು ವಿಮರ್ಶಕಿ, ಜ್ಯೋತಿ ಚೇಳ್ಯಾರು ಅವರು ಕನ್ನಡ ಉಪನ್ಯಾಸಕರಾಗಿದ್ದರು; ಪ್ರಸ್ತುತ ಉಡುಪಿ ಜಿಲ್ಲೆಯ ಪದವಿಪೂರ್ವ ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿದ್ದಾರೆ. 'ಭಾವನಾ' (ಕನ್ನಡ ಕವನ ಸಂಕಲನ), 'ಗೆಜ್ಜೆ' (ತುಳು ಕವನ ಸಂಕಲನ), 'ಕೃಷಿ ಸಂಸ್ಕೃತಿಯಲ್ಲಿ ಕರಾವಳಿಯ ಮಹಿಳೆ' (ಸಂಶೋಧನಾ ಕೃತಿ ಕ.ಸಾ.ಪ. ದತ್ತಿನಿಧಿ ಪ್ರಶಸ್ತಿ ಪಡೆದಿದೆ), ಪನ್ನತಿಕೆ (ಪ್ರಜಾವಾಣಿಯ ಅಂಕಣ ಬರಹ), 'ಕೆಸರು ತುಳಿದು ಹಸಿರು ಬೆಳೆದ ಗುಲಾಬಿಯಕ್ಕ' (ಸಂಶೋಧನೆ) ಇವರ ಪ್ರಕಟಿತ ಕೃತಿಗಳು. 'ಗಂಗಾರತ್ನ ಪ್ರಶಸ್ತಿ ವಿಜೇತರಾಗಿರುವ ಜ್ಯೋತಿ ಚೇಳ್ಯಾರು ತುಳು ಸಾಹಿತ್ಯ ಅಕಾಡೆಮಿಯ ಸಂಶೋಧನಾ ...

READ MORE

Related Books