ಡಾ. ಕೆ. ಪ್ರಭಾಕರ ಆಚಾರ್‌

Author : ಸದಾನಂದ ನಾರಾವಿ

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ ’ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ’ಯ 216 ನೇ ಪುಸ್ತಕ ಡಾ. ಕೆ. ಪ್ರಭಾಕರ ಆಚಾರ್. ಜೀವ ಪರಿಸರ ಪ್ರೇಮಿ ಡಾ. ಕೆ. ಪ್ರಭಾಕರ ಆಚಾರ್  ಅವರು ಜೀವವಿಜ್ಞಾನದ ವಿದ್ಯಾರ್ಥಿಯಾಗಿ, ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಲೇಖಕರಾಗಿ ಪರಿಸರಲೋಕಕ್ಕೆ ಸಲ್ಲಿಸಿದ ಕಾಣಿಕೆ ಅಪ್ರತಿಮ. ಪ್ರಾಣಿಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಅವರ ಆಸಕ್ತಿ ಸಹಜವಾಗಿ ಪ್ರಾಣಿ ಪಕ್ಷಿಗಳ ಕುರಿತಾಗಿದ್ದರೂ ಸಸ್ಯಲೋಕದ ಬಗ್ಗೆಯೂ ಅಷ್ಟೇ ಆಸಕ್ತಿಯನ್ನು ಅವರು ಬೆಳೆಸಿಕೊಂಡಿದ್ದರು. ಕಾರ್ಕಳದ ಆನೆಕೆರೆಯಿಂದ ಹಿಡಿದು ಕರಾವಳಿ ಕರ್ನಾಟಕದ ಮತ್ತು ಪಶ್ಚಿಮ ಘಟ್ಟದ ಜೀವವೈವಿಧ್ಯವನ್ನು ಕುರಿತಂತೆ ಮಾತ್ರವಲ್ಲದೆ ವಿಶ್ವದ ಅನೇಕ ದೇಶಗಳಿಗೆ ಭೇಟಿ ನೀಡಿ ಅಲ್ಲಿಯೂ ಅಧ್ಯಯನ ನಿರತರಾಗಿ, ಕಾರ್ಯಗಾರಗಳಲ್ಲಿ ಭಾಗಿಗಳಾಗಿ ತನ್ನ ಜ್ಞಾನಸಂಪತ್ತನ್ನು ವೃದ್ಧಿಸಿಕೊಂಡ ಡಾ.ಪ್ರಭಾಕರ ಆಚಾರ್ಯರು ಮಾಡಿರುವ ಪರ್ಯಟನ, ನಡೆಸಿದ ಅಧ್ಯಯನ, ಸಂಶೋಧನೆಗಳು ಮತ್ತು ಅವುಗಳನ್ನೆಲ್ಲ ಲೇಖನಕ್ಕಿಳಿಸಿ ದಾಖಲೀಕರಿಸಿದ ಕಾರ್ಯಗಳೆಲ್ಲವೂ ಶ್ಲಾಘನೀಯವಾದದ್ದು. ಈ ಕಾರಣಕ್ಕಾಗಿಯೇ ರಾಜ್ಯದ ಜೀವವೈವಿಧ್ಯ ಮಂಡಳಿಯ 'ಜೀವವೈವಿಧ್ಯ ಪ್ರಶಸ್ತಿ'ಯು ಅವರನ್ನರಸಿಕೊಂಡು ಬಂದು ಅವರ ಮುಡಿಗೇರಿತ್ತು. ವಿಜ್ಞಾನ ಸಾಹಿತ್ಯದಲ್ಲಿ ಪ್ರಸಿದ್ದರಾದ ಅನೇಕರ ಸಾಲಿನಲ್ಲಿ ಡಾ.ಆಚಾರ್ಯರು ಒಂದು ಗೌರವದ ಸ್ಥಾನವನ್ನು ಗಳಿಸಿಕೊಂಡವರು. ಅವರನ್ನು ಕುರಿತ ಪರಿಚಯಾತ್ಮಕ ಕೃತಿ.

About the Author

ಸದಾನಂದ ನಾರಾವಿ

ಸದಾನಂದ ನಾರಾವಿಯವರು ಅಂಚೆ ಇಲಾಖೆಯಲ್ಲಿ 29 ವರ್ಷ ಸೇವೆಸಲ್ಲಿಸಿ ನಿವೃತ್ತರಾಗಿ ಪ್ರಸ್ತುತ ಕಾಂತಾವರ ಕನ್ನಡ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಕತೆ, ಕವನ, ಲೇಖನಗಳನ್ನು ಬರೆಯುವ ಸದಾನಂದ ನಾರಾವಿಯವರು 'ಮುತ್ತುಮಲ್ಲಿಗೆ', 'ಸಂರಚನೆಯ ಸುತ್ತಮುತ್ತ' (ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಶಸ್ತಿ ವಿಜೇತ ಕೃತಿ), 'ಉಜ್ರೆ ಈಶ್ವರ ಭಟ್', 'ಡಾ.ಕೆ, ಪ್ರಭಾಕರ ಆಚಾರ್' ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನ ವಿಶ್ವೇಶ್ವರಯ್ಯ ಪ್ರಶಸ್ತಿ, ತುಳು ಕತೆಯೊಂದಕ್ಕೆ ತುಳು ಒಕ್ಕೂಟದ ಪ್ರಥಮ ಬಹುಮಾನ ಇತ್ಯಾದಿ ಗೌರವಗಳಿಗೆ ಪಾತ್ರರಾಗಿದ್ದಾರೆ. ತುಳು ಭಾಷೆ ಹಾಗೂ ಸಂಸ್ಕೃತಿಗೆ ಸದಾನಂದ ನಾರಾವಿಯವರ ...

READ MORE

Related Books