ಡಾ.ಎಂ.ಎಚ್. ಮರಿಗೌಡ

Author : ಆರ್. ವಸಂತ್ ಕುಮಾರ್

Pages 78

₹ 60.00




Year of Publication: 2015
Published by: ಉದಯಭಾನು ಕಲಾಸಂಘ
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ಒಣ ತೋಟಗಾರಿಕೆ ಪ್ರವರ್ತಕ, ಬಹುಮಹಡಿ ಕೃಷಿಯ ಉತ್ತೇಜಕ ಎಂದೇ ಪ್ರಸಿದ್ಧರಾದವರು ಡಾ. ಎಂ. ಎಚ್‌. ಮರಿಗೌಡ. ನಾಡಿನ ತೋಟಗಾರಿಕೆ ಕ್ಷೇತ್ರದ ದಂತಕತೆ ಎಂದೇ ಅವರನ್ನು ಕರೆಯಲಾಗುತ್ತದೆ. ತೋಟಗಾರಿಕೆ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಾ ಹಂತಹಂತವಾಗಿ ಮೇಲಿನ ಹುದ್ದೆಗೆ ಏರಿದವರು. ವೈಜ್ಞಾನಿಕ ತೋಟಗಾರಿಕೆಗೆ ಒತ್ತು ಕೊಡುತ್ತಾ ಸುಸಜ್ಜಿತ ಮಣ್ಣು-ನೀರು ಪ್ರಯೋಗಾಲಯ, ಮತ್ತು ಸಸ್ಯ ಸಂರಕ್ಷಣೆ ಪ್ರಯೋಗಶಾಲೆಗಳನ್ನು ಸ್ಥಾಪಿಸಿದರು. ತೋಟಗಾರಿಕೆಯ ಮೂಲಕ, ಒಣ ಭೂಮಿಯಲ್ಲಿ ಬರಗಾಲದ ಬವಣೆ ಮತ್ತು ಅರ್ಥಿಕ ಸಂಕಷ್ಟಗಳಿಂದ ತಪ್ಪಿಸಬಹುದೆಂದು ಯೋಚಿಸಿ, ರಾಜ್ಯಾದ್ಯಂತ ಅದಕ್ಕೆ ಒತ್ತು ಕೊಟ್ಟರು. ಸರ್ಕಾರ ಕೃಷಿ ಇಲಾಖೆಯಿಂದ ತೋಟಗಾರಿಕೆಯನ್ನು ಬೇರ್ಪಡಿಸಿ, ಪ್ರತ್ಯೇಕ ಇಲಾಖೆಯನ್ನು ರಚಿಸಿದಾಗ ಡಾ.ಮರಿಗೌಡರು ತೋಟಗಾರಿಕೆ ಇಲಾಖೆಗೆ ನಿರ್ದೇಶಕರಾಗಿ, ನೇಮಕವಾದರು.ಇವರ ಪರಿಚಯ ರೂಪದ ಕೃತಿಯನ್ನು ಉದಯಭಾನು ಕಲಾಸಂಘ ಪ್ರಕಟಿಸಿದೆ. 

About the Author

ಆರ್. ವಸಂತ್ ಕುಮಾರ್

ಆರ್. ವಸಂತ್ ಕುಮಾರ್ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದವರು.  ವಿಜಯ ಕರ್ನಾಟಕ ಪತ್ರಿಕಾ ಬಳಗದಲ್ಲಿ ಉಪ ಸಂಪಾದಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು. ಪ್ರಸ್ತುತ ಜೈನ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಹ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕನ್ನಡ ಪುಸ್ತಕ ಪ್ರಾಧಿಕಾರದ 'ಪುಸ್ತಕ ಲೋಕ' ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸುತ್ತಿರುವ 'ವಾರ್ತಾಪತ್ರ' ದೈಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಹಮ್ಮಿಕೊಂಡಿದ್ದ 'ಗ್ರಾಮ ಚರಿತ್ರಕೋಶದ ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ. - ಪ್ರಸಕ್ತ ಕನ್ನಡ ಸಾಹಿತ್ಯ ಪರಿಷತ್ತಿನ 'ಕನ್ನಡ ನುಡಿ' ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ...

READ MORE

Related Books