ಡಾ. ಎಂ.ಎಂ. ಕಲಬುರ್ಗಿ

Author : ಕಲ್ಯಾಣರಾವ ಜಿ. ಪಾಟೀಲ

Pages 88

₹ 40.00




Year of Publication: 2016
Published by: ಪ್ರಸಾರಾಂಗ
Address: # ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ

Synopsys

ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರು (30.08.2015) ಹತ್ಯೆಯಾದ ನಂತರ ನಾಡಿನಾದ್ಯಂತ ಅವರ ಬಗೆಗೆ ನುಡಿನಮನ ಕಾರ್ಯಕ್ರಮಗಳು ನಡೆದವು. ಈ ನಿಟ್ಟಿನಲ್ಲಿ, ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗವು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶ್ರೀಯುತರಿಗೆ ಶ್ರದ್ಧಾಂಜಲಿ ಸಲ್ಲಿಸುವುದರ ಜೊತೆಗೆ ವಿಶೇಷ ಪ್ರಚಾರೋಪನ್ಯಾಸ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲಿ ಲೇಖಕ ಕಲ್ಯಾಣರಾವ ಜಿ. ಪಾಟೀಲ ಅವರು ನೀಡಿದ ಉಪನ್ಯಾಸದ ಬರಹ ರೂಪವೇ ಈ ಕಿರು ಹೊತ್ತಿಗೆ. ಈ ಕೃತಿಯಲ್ಲಿ 1. ಹಿನ್ನೆಲೆ 2. ಹೆಜ್ಜೆ ಗುರುತುಗಳು 3. ಶಾಸ್ತ್ರ-ಶೋಧಗಳು 4. ದೇಶಿ-ಮಾರ್ಗ ಶೋಧಗಳು ಮತ್ತು 5. ಸಮಾರೋಪ ಎಂಬ ಐದು ಅಧ್ಯಾಯಗಳಲ್ಲಿ ವಿಷಯ ವಿಶ್ಲೇಷಣೆ ಮಾಡಲಾಗಿದೆ. ಅನುಬಂಧಗಳಲ್ಲಿ ಡಾ. ಎಂ.ಎಂ. ಕಲಬುರ್ಗಿಯವರ ಜೀವನ-ವಿವರ, ಕೃತಿ-ವಿವರ ಮತ್ತು ಸಹೃದಯ-ಸ್ಪಂದನಗಳನ್ನು ಕೊಡಲಾಗಿದೆ. ಹೊಸಗನ್ನಡ ಸಾಹಿತ್ಯದಲ್ಲಿ ಸಂಶೋಧನೆ ನಡೆದು ಬಂದ ದಾರಿ, ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಹಿರಿಯ ವಿದ್ವಾಂಸರು ಸಲ್ಲಿಸಿದ ಸೇವೆಯನ್ನು ಸ್ಮರಿಸಲಾಗಿದೆ. ಹೆಜ್ಜೆ ಗುರುತುಗಳು- ಅಧ್ಯಾಯದಲ್ಲಿ ಡಾ. ಎಂ.ಎಂ. ಕಲಬುರ್ಗಿಯವರ ಮನೆತನ, ಬಾಲ್ಯಜೀವನ, ಶೈಕ್ಷಣಿಕ ಮತ್ತು ವೃತ್ತಿ ಜೀವನದ ಮಹತ್ವದ ಅಂಶಗಳನ್ನು ದಾಖಲಿಸಲಾಗಿದೆ. ಶಾಸ್ತ್ರ-ಶೋಧಗಳು-ಅಧ್ಯಾಯದಲ್ಲಿ ಎಂ.ಎಂ. ಕಲಬುರ್ಗಿಯವರು ಕನ್ನಡ ಸಂಶೋಧನಾಶಾಸ್ತ್ರ, ಕನ್ನಡ ಗ್ರಂಥ ಸಂಪಾದನಾಶಾಸ್ತ್ರ, ಕನ್ನಡ ಹಸ್ತಪ್ರತಿಶಾಸ್ತ್ರ, ಕನ್ನಡ ನಾಮವಿಜ್ಞಾನ ಕ್ಷೇತ್ರಗಳಲ್ಲಿ ಗೈದ ಸಂಶೋಧನೆಯನ್ನು ವಿಶ್ಲೇಷಿಸಲಾಗಿದೆ. ದೇಶಿ-ಮಾರ್ಗ ಶೋಧಗಳು ಎಂಬ ಅಧ್ಯಾಯದಲ್ಲಿ ಕಲಬುರ್ಗಿ ಯವರು ಕೈಗೊಂಡ ವಚನ ಪರಿಷ್ಕರಣೆಗಳು, ಸ್ವರವಚನ ಶೊಧಗಳು, ಶಾಸನ ಅನ್ವೇಷಣೆಗಳು, ಕನ್ನಡ ಶಿಷ್ಟ ಸಾಹಿತ್ಯದಲ್ಲಿ ಬರುವ ಕವಿ-ಕೃತಿಗಳ ಶೋಧಗಳನ್ನು ಹಾಗೂ ಕೊನೆಗೆ ಸಮಾರೋಪದಲ್ಲಿ ಕಲಬುರ್ಗಿಯವರ ವ್ಯಕ್ತಿತ್ವ ಮತ್ತು ಸಾಹಿತ್ಯದ ಮಹತ್ವವನ್ನು ಸಂಕ್ಷಿಪ್ತವಾಗಿ ಸಮೀಕ್ಷಿಸಲಾಗಿದೆ. ಅನುಬಂಧಗಳಲ್ಲಿ ಕಲಬುರ್ಗಿಯವರ ಜೀವನ, ಕೃತಿಗಳ ವಿವರಗಳನ್ನು ಕೊಡಲಾಗಿದೆ. ಕನ್ನಡದ ಹಿರಿಯ ಸಂಶೋಧಕರೊಬ್ಬರ ಆದರಣೀಯ ವ್ಯಕ್ತಿತ್ವ ಮತ್ತು ಮಹತ್ವದ ಸಾಹಿತ್ಯಕ ಸಾಧನೆಗಳನ್ನು ಕರಿಯನ್ನು ಕನ್ನಡಿಯಲ್ಲಿ ಹಿಡಿದಂತೆ ಈ ಕೃತಿಯಲ್ಲಿ ಹಿಡಿದಿಟ್ಟಿರುವುದು ಗಮನಾರ್ಹ.

About the Author

ಕಲ್ಯಾಣರಾವ ಜಿ. ಪಾಟೀಲ

ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಸಮೀಪದ ಸರಪೋಷ್ ಕಿಣಗಿ ಗ್ರಾಮದವರು. ತಂದೆ- ಗುರುಪಾದಪ್ಪ ಮಾಲಿಪಾಟೀಲ, ತಾಯಿ- ಮಹಾದೇವಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ  ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದೂರಾದ ಚೇಂಗಟಾದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಂತರ  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಕಾಲೇಜಿಗೆ ಪ್ರಥಮ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್‍ಯಾಂಕಿನೊಂದಿಗೆ ಬಿ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎರಡನೆಯ ರ್‍ಯಾಂಕಿನೊಂದಿಗೆ ಎಂ.ಎ ಪದವಿ ಹಾಗೂ ಮೂರನೇ ರ್‍ಯಾಂಕಿನೊಂದಿಗೆ ಎಂ.ಫಿಲ್ ಪದವಿ  ಹಾಗೂ ಡಾ. ಎಂ.ಎಂ. ...

READ MORE

Related Books