ಡಿ. ಆರ್. ನಾಗರಾಜ್

Author : ನಟರಾಜ ಹುಳಿಯಾರ್

Pages 150

₹ 50.00




Year of Publication: 2022
Published by: ಸಾಹಿತ್ಯ ಅಕಾಡೆಮಿ ನವದೆಹಲಿ
Address: ರಬೀಂದ್ರಾ ಭವನ್‌, 35, ಫೆರೋಝೆಶಾಹ್‌ ರಸ್ತೆ, ನವದೆಹಲಿ-110001

Synopsys

ಭಾರತೀಯ ಸಾಹಿತ್ಯ ನಿರ್ಮಾಪಕರು ಡಿ. ಆರ್. ನಾಗರಾಜ್ ಕುರಿತು ಲೇಖಕ ನಟರಾಜ್ ಹುಳಿಯಾರ್ ಅವರು ಬರೆದಿರುವ ಜೀವನ ಚಿತ್ರಣ ಡಿ. ಆರ್. ನಾಗರಾಜ್ . ಡಾ. ಡಿ. ಆರ್. ನಾಗರಾಜ್ (1954-1998) ಭಾರತದ ಮಹತ್ವದ ಸಂಸ್ಕೃತಿ ಚಿಂತಕರು, ವಿಮರ್ಶಕರು. ಸಾಹಿತ್ಯ ವಿಮರ್ಶೆ, ಸಂಶೋಧನೆ, ಸಂಸ್ಕೃತಿ ವಿಮರ್ಶೆ, ಸಾಮಾಜಿಕ ಸಿದ್ಧಾಂತಗಳು, ಚಳುವಳಿಗಳು, ಥಿಯರಿ ಮುಂತಾದ ಹಲವು ವಲಯಗಳಲ್ಲಿ ಅವರು ಆಳವಾಗಿ ತೊಡಗಿದ್ದರು. ಕನ್ನಡದಲ್ಲಿ ಅನನ್ಯ ಚಿಂತನಾ ಮಾರ್ಗಗಳನ್ನು ರೂಪಿಸಿದ ಡಿ.ಆರ್. ನಾಗರಾಜ್ ಇಂಗ್ಲಿಷ್‌ನಲ್ಲೂ ಬರೆದರು. ಅವರ ಕೃತಿಗಳು ಸಾಹಿತ್ಯ ವಿಮರ್ಶೆ, ಸಂಸ್ಕೃತಿ ಚಿಂತನೆ ಹಾಗೂ ಸಂಶೋಧನಾ ವಲಯಗಳಲ್ಲಿ ಮಹತ್ವದ ಸ್ಥಾನ ಪಡೆದಿವೆ. ಮಾರ್ಕ್ಸವಾದ, ಗಾಂಧೀವಾದ, ಲೋಹಿಯಾವಾದ, ಅಂಬೇಡ್ಕರ್‌ವಾದಗಳ ಗಂಭೀರ ಅನುಸಂಧಾನದಿಂದ ರೂಪುಗೊಂಡಿದ್ದ ಡಿ.ಆರ್. ಚಿಂತನೆ ಎಲ್ಲ ಕಾಲಕ್ಕೂ ಪ್ರಬುದ್ಧವಾದ ಸಂಸ್ಕೃತಿ ನಿರ್ಮಾಣದ ಸಖನಂತಿದೆ. ವಿಮರ್ಶೆಗೆ ಸೃಜನಶೀಲತೆ, ಕಥನ, ಬಹುಜ್ಞಾನ ಶಿಸ್ತುಗಳನ್ನು ಬೆಸೆದ ಡಿ.ಆರ್. ಅವೈದಿಕ ಚಿಂತನೆ, ನಿರ್ವಸಾಹತೀಕರಣ ಚಿಂತನೆಗಳ ಹೊಸ ಮಾರ್ಗಗಳನ್ನು ಸೃಷ್ಟಿಸಿದರು ಎಂಬ ಮಾತುಗಳು ಬೆನ್ನುಡಿಯಲ್ಲಿದೆ.

About the Author

ನಟರಾಜ ಹುಳಿಯಾರ್

ಕತೆಗಾರ-ಲೇಖಕ ನಟರಾಜ ಹುಳಿಯಾರ್ ಅವರು ತುಮಕೂರು ಜಿಲ್ಲೆಯ ಹುಳಿಯಾರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಅವರು'ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ. ಮತ್ತೊಬ್ಬ ಸರ್ವಾಧಿಕಾರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು, ಮಾಯಾಕಿನ್ನರಿ (ಕಥಾಸಂಕಲನಗಳು), ರೂಪಕಗಳ ಸಾವು (ಕವಿತೆಗಳು), ಗಾಳಿಬೆಳಕು (ಸಾಂಸ್ಕತಿಕ ಬರಹಗಳು), ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ (ತೌಲನಿಕ ಅಧ್ಯಯನ), ಇಂತಿ ನಮಸ್ಕಾರಗಳು (ಲಂಕೇಶ್‌-ಡಿ.ಆರ್. ನಾಗರಾಜ್ ಕುರಿತ ...

READ MORE

Reviews

ನಾಗರಿಕತೆಯ ನಿರೂಪಕನ ಚಿಂತನೆಗಳು( ಪ್ರಜಾವಾಣಿ, 04 ಡಿಸೆಂಬರ್ 2022)

---

Related Books