ಡಾ. ಎಸ್.ಎಲ್. ಭೈರಪ್ಪ ಅವರ ಕಾದಂ-ಕಥನಗಳು

Author : ಶ್ರೀನಿವಾಸ ಹಾವನೂರ

Pages 220

₹ 60.00




Year of Publication: 1999
Published by: ಪ್ರಸಾಧನ ಪ್ರಕಾಶನ
Address: ಮಂಗಳೂರು-4

Synopsys

‘ಡಾ. ಎಸ್.ಎಲ್. ಭೈರಪ್ಪ ಅವರ ಕಾದಂ-ಕಥನಗಳು’ ಕೃತಿಯನ್ನು ಲೇಖಕ ಶ್ರೀನಿವಾಸ ಹಾವನೂರ ಸಂಪಾದಿಸಿದ್ದಾರೆ. ಇಲ್ಲಿ ಭೈರಪ್ಪನವರ ವಂಶವೃಕ್ಷ: ಸಾಕ್ಷಿ: ತಂತು: ದಾಟು ಮತ್ತು ಪರ್ವ ಈ ಕಾದಂಬರಿಗಳಲ್ಲಿಯ ರಸವತ್ತಾದ ಕಥಾನಕಗಳನ್ನು ಒಳಗೊಂಡಿದೆ. ಕೃತಿ ರಚನೆಯ ಕುರಿತು ತಿಳಿಸುತ್ತಾ ಕೆಲವು ವರ್ಷಗಳ ಹಿಂದೆ ಕಸ್ತೂರಿ- ಮಾಸಪತ್ರಿಕೆಯಲ್ಲಿ ಡಾ. ಭೈರಪ್ಪ ಅವರ ದ ಮೂರು ಕಾದಂಬರಿಗಳ ಕಥನಗಳನ್ನು ಪ್ರಕಟಿಸಿದ್ದೆ. ಅದಕ್ಕೆ ಇನ್ನೆರಡನ್ನು ಸೇರಿಸಿ ಈ ಸಂಕಲನವನ್ನು ಹೊರತರಲಾಗಿದೆ. ಭೈರಪ್ಪನವರ ಅಧ್ಯಕ್ಷತೆಯ ಸಾಹಿತ್ಯ ಸಮ್ಮೇಳನದ ಕಾಲಕ್ಕೆ ಇಂಥ ಸಂಕಲನವನ್ನು ಪ್ರಕಟಿಸಬೇಕು. ಅದರಿಂದ ಅವರ ಕಾದಂಬರಿಗಳನ್ನ ಆಮೇಲೆ ಓದತಕ್ಕುದು ಎಂಬುದಕ್ಕೆ ಪ್ರಚೋದನೆ ದೊರೆಯುತ್ತದೆ ಎಂಬುದಾಗಿ ಪ್ರೊ.ಜಿ. ಅಶ್ವತ್ಥನಾರಾಯಣರು ಸೂಚಿಸಿದರು. ಇನ್ನೊಬ್ಬ ಮಿತ್ರ ಡಾ.ನಾ. ದಾಮೋದರ ಶೆಟ್ಟಿ ಅವರು ದನಿಗೂಡಿಸಿ ಅದರ ಮುದ್ರಣ, ಪ್ರಕಾಶನ ಕಾರ್ಯದಲ್ಲಿ ಕೈಗೂಡಿಸಿದರು ಎಂದಿದ್ದಾರೆ. ಜೊತೆಗೆ ಕಾದಂ-ಕಥನ ಎನ್ನುವುದಕ್ಕೆ ತುಸು ವಿವರಣೆ ಕೊಡಬೇಕು ಎಂದಿರುವ ಅವರು ಇಲ್ಲಿಯವು ಮೂಲ ಕೃತಿಗಳ ಸಂಗ್ರಹ ರೂಪವೇನಲ್ಲ. ಕಾದಂಬರಿಕಾರರ ಶಬ್ದಗಳಲ್ಲಿಯೇ ಆ ಕೃತಿಗಳ ರಸವತ್ತಾದ ಭಾಗಗಳನ್ನು ಕಥನಿಸುವುದು ಇವುಗಳ ಆಶಯವಾಗಿದೆ. ಇಡಿಯಾಗಿ ಕಾದಂಬರಿಯನ್ನು ಓದುವುದಕ್ಕೆ ಇವು ಪ್ರವೇಶಿಕೆ ಇದ್ದಂತೆ ಎಂದಿದ್ದಾರೆ. ಇಲ್ಲಿ ವಂಶವೃಕ್ಷದಿಂದ ಕಾತ್ಯಾಯನಿ, ಸಾಕ್ಷಿ ಕಾದಂಬರಿಯಿಂದ ಮಂಡಿ ಸಾಹುಕಾರ, ತಂತು ಕಾದಂಬರಿಯಿಂದ ರ್ಯಾಗಿಂಗ್, ದಾಟು ಕಾದಂಬರಿಯಿಂದ ಮಾತಂಗಿ, ಪರ್ವದಿಂದ ನಿಯೋಗ ಭಾಗಗಳು ಸಂಕಲನಗೊಂಡಿವೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books