ಡಾ. ಶಾಂತಿನಾಥ ದೇಸಾಯಿ ಸಮಗ್ರ ಕತೆಗಳು

Author : ಶಾಂತಿನಾಥ ದೇಸಾಯಿ

Pages 582

₹ 325.00




Year of Publication: 2013
Published by: ಸಪ್ನ ಬುಕ್‌ ಹೌಸ್‌
Address: #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

ಕಾದಂಬರಿಕಾರ, ಚಿಂತಕ ಶಾಂತಿನಾಥ ದೇಸಾಯಿ ಅವರ ಸಮಗ್ರ ಕತೆಗಳ ಸಂಕಲನವಿದು. ಮಂಜುಗಡ್ಡೆ, ಕ್ಷಿತಿಜ, ದಂಡೆ, ರಾಕ್ಷಸ, ಪರಿವರ್ತನೆ, ಕೂರ್ಮಾವತಾರ, ಈಚಿನ ಕಥೆಗಳು ಸಂಕಲನದ ಕವಿತೆಗಳು -ಈ ಕೃತಿಯಲ್ಲಿ ಒಳಗೊಂಡಿವೆ.. 

ಮಂಜುಗಡ್ಡೆ ಕತೆಯ ಕುರಿತು ಲೇಖಕರು ಬರೆಯುತ್ತಾ ‘ಮುಂಬಯಿ ಜೀವನದ ಹಿನ್ನೆಲೆಯಲ್ಲಿ ಜೀವನ ಮೌಲ್ಯಗಳನ್ನು ಕಳೆದುಕೊಳ್ಳುತ್ತ, ಮಂಜುಗಡ್ಡೆಯಾಗುತ್ತ ನಡೆದ ಒಂದು ತರುಣ ಜೀವದ ಆತಂರಿಕ ದರ್ಶನವಿಲ್ಲದೆ, ಸಂಜ್ಞಾಪ್ರವಾಹದ ಶೈಲಿಯನ್ನು ಉಪಯೋಗಿಸಿದೆ’ ಎಂದಿದ್ದಾರೆ. ಇದು ಕತೆಯ ಸಾರಾಂಶವನ್ನು ವಿವರಿಸುತ್ತದೆ. 

ಮಂಜುಗಡ್ಡೆ ಸಂಕಲನದ ಮಂಜುಗಡ್ಡೆ, ಚಂದೂ, ಶೋಭನೆಯ ಹಾದಿ, ಮಳೆ!, ಇದೂ ಒಂದು ರೀತಿ, ಹೊಸ್ತಿಲದಾಚೆಗೆ ಕತೆಗಳು ಈ ಸಂಕಲನದಲ್ಲಿವೆ.  ಹಾಗೆಯೇ ಕ್ಷಿತಿಜ ಕತಾ ಸಂಕಲನದ ಕ್ಷಿತಜ, ಅಂಟಿದ ನಂಟು, ದಿಗ್ಭ್ರಮೆ, ಗಂಡ ಸತ್ತ ಮೇಲೆ, ಅಕಾಲ, ಬೇಸರ ಕತೆಗಳಿವೆ. ದಂಡೆ ಕತಾ ಸಂಕಲನದ ದಂಡೆ, ಏಕಾಂಗಿ, ಅವರು, ಕಾರು ಮತ್ತು ನಗೆ, ತೃಪ್ತ, ನೀಚ, ನಿರ್ಣಯ, ‘ನಾನಾ’ನ ತೀರ್ಥಯಾತ್ರೆ ಕತೆಗಳು. 

ರಾಕ್ಷಸ ಕತಾ ಸಂಗ್ರಹದ ರಾಕ್ಷಸ, ಸಹೋದರ, ನದಿಯ ನೀರು, ಯಥಾ ಕಾಷ್ಠಂಚ, ನೀ ನನ್ನ ನಗೆ ಬಾಯೆಂದು, ತನ್ನ ಹಿಂದೆ ಬಿಟ್ಟುಹೋಗಿದ್ದಾಳೆ, ಬಿಡುಗಡೆ, ರಾಜೀನಾಮೆ, ಇಲಿಗಳು ಕತೆಗಳು ಹಾಗೆಯೇ, ಪರಿವರ್ತನೆ ಕಥಾ ಸಂಕಲನದ ಪರಿವರ್ತನೆ, ಯಾಕೆ?, ಶಿವೂನ ಬಂಡಾಯ, ಸೇಡು-ಗೀಡು, ದುಃಸ್ವಪ್ನ, ಹುಚ್ಚ ಪ್ರಯಾಣ ಕತೆಗಳಿವೆ.

ಕೂರ್ಮಾವತಾರ ಸಂಕಲನದ ಕೂರ್ಮಾವತಾರ, ಭರಮ್ಯಾ ಹೋಗಿ ನಿಳನಾದದ್ದು, ಅಂತರ, ಮಧ್ಯಸ್ಥರು, ಪ್ರತಿಕೃತಿ, ಐವತ್ತು ತುಂಬಿದಾಗ, ಯಶಸ್ಸಿನ ವಾಸನೆ ಹಾಗೂ ಈಚಿನ ಕತೆಗಳು ಸಂಕಲನದ ವಿಯೋಗ ಜವಾಬ್ದಾರಿ, ಕಾಡುಕೋಣ ಮತ್ತು ಮನುಷ್ಯ, ಎಲ್ಲಾದರೂ ಎಂತಾದರು ಇರು, ಪ್ರವೃತ್ತಿ ನಿವೃತ್ತಿ, ಹೀರೊ ಹಾಗೂ ಲಗ್ನ ಕತೆಗಳು ಈ ಸಮಗ್ರ ಕೃತಿಯಲ್ಲಿ ಒಳಗೊಂಡಿವೆ. 

About the Author

ಶಾಂತಿನಾಥ ದೇಸಾಯಿ
(22 July 1929 - 26 March 1998)

ನವ್ಯಕಾದಂಬರಿಕಾರರು, ವಿಮರ್ಶಕರು, ಕಥೆಗಾರರೆಂದೇ ಪ್ರಸಿದ್ಧರಾಗಿದ್ದ ಶಾಂತಿನಾಥ ದೇಸಾಯಿಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ. ಪ್ರಾಥಮಿಕ ಮತ್ತು ಮೆಟ್ರಿಕ್ ವಿದ್ಯಾಭ್ಯಾಸವನ್ನು ಧಾರವಾಡದಲ್ಲಿ ಮುಗಿಸಿದರು. ಮುಂದೆ ಮುಂಬಯಿಯ ವಿಲ್ಸನ್ ಕಾಲೇಜಿನಿಂದ ಬಿ.ಎ. ಹಾಗೂ ಎಂ.ಎ. ಪದವಿ ಪಡೆದರು. ಆನಂತರ ಬ್ರಿಟಿಷ್ ಸ್ಕಾಲರ್‌ಷಿಪ್ ಪಡೆದು ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಅಧ್ಯಯನ ಮಾಡಿದರು.ಅಲ್ಲಿಂದ  ಹಿಂದಿರುಗಿ ಬಂದನಂತರ ಕರ್ನಾಟಕ ವಿಶ್ವವಿದ್ಯಾಲಯ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಉಪ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ನಂತರ 1988ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸಲ್ಲಿಸಿದ ಸೇವೆಸಲ್ಲಿಸಿದರು. ಕರ್ನಾಟಕ ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಮತ್ತು ಜ್ಞಾನಪೀಠ ...

READ MORE

Related Books