ಡಾ. ಉಳಿಯಾರು ಪದ್ಮನಾಭ ಉಪಾಧ್ಯಾಯ

Author : ಅರುಣಕುಮಾರ್ ಎಸ್. ಆರ್.

Pages 48

₹ 33.00




Year of Publication: 2007
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಮೂರನೇ ಪುಸ್ತಕ. ಡಾ. ಉಳಿಯಾರು ಪದ್ಮನಾಭ ಉಪಾಧ್ಯಾಯರು ಭಾರತೀಯ ಭಾಷಾ ಶಾಸ್ತ್ರ, ಕಾತರ. ಹಾಗೂ ನಿಘಂಟು ರಚನಾ ಕ್ಷೇತ್ರದಲ್ಲಿ ಅಚ್ಚಳಿಯದ ಹೆಸರು. ಉಡುಪಿ ಜಿಲ್ಲೆಯ ಕಾಂತ. ಸಮೀಪದ ಉಳಿಯಾರುನವರಾದ ಉಪಾಧ್ಯಾಯರು ಸಂಸ್ಕೃತ, ಕನ್ನಡ, ಹಿಂದಿ, ಭಾಷಾಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿಗಳೊಂದಿಗೆ ಭಾಷಾಶಾಸ್ತ್ರದಲ್ಲಿ ಪಿಎಚ್‌.ಡಿ ಪದವಿಯನ್ನು ಗಳಿಸಿದವರು. ತುಳು, ಕನ್ನಡ, ಸಂಸ್ಕೃತ, ಹಿಂದಿ ಮೊದಲಾದ ಹಲವಾರು ಭಾರತೀಯ ಭಾಷೆಗಳಲ್ಲದೆ ಇಂಗ್ಲೀಷ್, ಆಫ್ರಿಕನ್ ಹಾಗೂ ಫ್ರೆಂಚ್ ಮುಂತಾದ ರಾಶ್ಚಾತ್ಯ ಭಾಷೆಗಳಲ್ಲಿ ಸಮಾನ ಪ್ರೌಢಿಮೆ ಹೊಂದಿದವರು. 18 ವರ್ಷಗಳ ಸತತ ಪರಿಶ್ರಮದೊಂದಿಗೆ ಅವರು ಸಂಪಾದಿಸಿದ 6 ಸಂಪುಟಗಳ ವಿಶ್ವಕೋಶ ಮಾದರಿಯ ಬೃಹತ್ ತುಳು ನಿಘಂಟು ತುಳುನಾಡಿಗೆ ಸಂದ ಅನರ್ಥ್ಯ ಕೊಡುಗೆ, ಭಾಷಾಬೋಧನಾ ಮಾಲಿಕೆಗಳು, ಜಾನಪದ ಸಂಬಂಧೀ ಸಂಶೋಧನಾ ಗ್ರಂಥಗಳಲ್ಲದೇ ಹಲವೆಡೆ ಒಡಮೂಡಿದ ವೈಚಾರಿಕ ಲೇಖನಗಳು ಅವರ ಬಹುಮುಖ ಪ್ರತಿಭೆಗೆ ಕನ್ನಡಿಯಾಗಿವೆ.

About the Author

ಅರುಣಕುಮಾರ್ ಎಸ್. ಆರ್.

ಅರುಣಕುಮಾರ್ ಎಸ್.ಆರ್. ಅವರು ಮೂಲತಃ ಧರ್ಮಸ್ಥಳ ಸಮೀಪದ ಕನ್ಯಾಡಿಯವರು. ಉಜಿರೆ ಮತ್ತು ಮೈಸೂರಿನಲ್ಲಿ ಶಿಕ್ಷಣ ಪಡೆದು, ಕನ್ನಡ ಮತ್ತು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ತುಳುನಾಡಿನ ಸಿರಿ ಆಲಡೆಗಳ ಅಧ್ಯಯನದೊಂದಿಗೆ ಪಿ.ಹೆಚ್.ಡಿ ಪಡೆದಿದ್ದಾರೆ. ಜಾನಪದದಷ್ಟೇ ಶಿಷ್ಟಸಾಹಿತ್ಯದಲ್ಲೂ ಗಂಭೀರ ಅಧ್ಯಯನ ಆಸಕ್ತರು. ಮುಲ್ಕಿಯ ವಿಜಯ ಕಾಲೇಜು, ಉಡುಪಿಯ ಎಂ.ಜಿ.ಎಂ. ಕಾಲೇಜು, ಕಾರ್ಕಳದ ಭುವನೇಂದ್ರ ಕಾಲೇಜು, ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲೂ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಜಾವಾಣಿಯಲ್ಲಿ 2 ವರ್ಷ ಕಾಲ  'ಸಿರಿದೊಂಪ' ಅಂಕಣ ಬರೆದಿದ್ದಾರೆ. ಉಡುಪಿಯಲ್ಲಿ ಜರುಗಿದ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ...

READ MORE

Related Books