ಡುಂಡಿಮ

Author : ಎಚ್. ಡುಂಡಿರಾಜ್

Pages 144

₹ 95.00




Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
Phone: 26617100, 26617755

Synopsys

ಕನ್ನಡದ ದಿನಪತ್ರಿಕೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಹನಿಕವನಗಳನ್ನೊಳಗೊಂಡ ಡುಂಡಿರಾಜ್‍ರವರ ಲೇಖನಗಳ ಸಂಗ್ರಹ ‘ಡುಂಡಿಮ’. ಕನ್ನಡ ಸಾಹಿತ್ಯ, ಕ್ರೀಡೆ, ಸಿನೆಮಾ, ರಾಜಕೀಯ ಹೀಗೆ ಹಲವು ಕಥಾವಸ್ತುಗಳನ್ನೊಳಗೊಂಡ ಲೇಖನಗಳ ಸರಮಾಲೆ ಈ ಪುಸ್ತಕ. ನಾಡಿನ ವಿದ್ಯಾಮಾನಗಳನ್ನು ಕಲೆಹಾಕಿ, ಅವುಗಳಿಗೆ ಅಕ್ಷರಗಳ ರೂಪ ನೀಡಿ ಕನ್ನಡ ಡಿಂಡಿಮ ಬಾರಿಸಿದರ ಫಲವೇ ಡುಂಡಿಮ. ಪ್ರಜಾವಾಣಿಯಲ್ಲಿ ಜನಮನ್ನಣೆ ಗಳಿಸಿ ಎಲ್ಲಾ ಲೇಖನಗಳು ಒಂದೆಡೆ ಸೇರಿಸುವ ಡುಂಡಿರಾಜ್‍ರ ಪ್ರಯತ್ನ ಈ ಪುಸ್ತಕದ ಮೂಲಕ ಸಂಪೂರ್ಣಗೊಂಡಿದೆ.

About the Author

ಎಚ್. ಡುಂಡಿರಾಜ್
(18 August 1956)

ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ.  ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್‍ ಬ್ಯಾಂಕ್‍ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ.  2011ರಲ್ಲಿ ನಡೆದ ಸಂಯುಕ್ತ ಅರಬ್‍ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ...

READ MORE

Related Books