ದುರ್ಜನರ ಸಂಗದಿಂದ ದುರದೃಷ್ಟ

Author : ಸಂಧ್ಯಾ ಎಸ್. ಪೈ

Pages 137

₹ 63.00




Year of Publication: 2019
Published by: ಸ್ನೇಹ ಬುಕ್‌ ಹೌಸ್.
Address: 165, 10ನೇ ಮುಖ್ಯ ರಸ್ತೆ, ಶ್ರೀನಗರ ಬೆಂಗಳೂರು-560050

Synopsys

ದುರ್ಜನರ ಸಂಗದಿಂದ ದುರದೃಷ್ಟ ಮಕ್ಕಳ ಚಿತ್ರಕಥಾ ಸಂಕಲನವನ್ನು ಲೇಖಕಿ ಸಂಧ್ಯಾ ಪೈ ಅವರು ರಚಿಸಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಈ ಪುಸ್ತಕವು ಹೊರಬಂದಿದೆ. ಬ್ಯಾಡ್‌ ಕಂಪೆನಿ ಬ್ರಿಂಗ್ಸ್‌ ಬಾಡ್‌ ಲಕ್‌ ಎಂಬ ಅಡಿಬರಹದೊಂದಿಗೆ ಈ ಪುಸ್ತಕವನ್ನು ರಚಿಸಲಾಗಿದೆ. ಮಕ್ಕಳಲ್ಲಿ ಓದುವ ಪ್ರೀತಿಯನ್ನು ಹೆಚ್ಚಿಸುವ ಸಲುವಾಗಿ ಚಿತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ನೀತಿಕತೆಗಳನ್ನು ಹೊಂದಿರುವ ಈ ಪುಸ್ತಕವು ಸರಳ ಭಾಷೆಯಲ್ಲಿ ರಚಿತವಾಗಿದೆ.

About the Author

ಸಂಧ್ಯಾ ಎಸ್. ಪೈ
(26 February 1947)

ಮಣಿಪಾಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ವಿಭಾಗದ ಗೌರವ ನಿರ್ದೇಶಕಿಯಾಗಿರುವ  ಸಂಧ್ಯಾ ಎಸ್. ಪೈ ಅವರು ಪತ್ರಿಕೋದ್ಯಮಿ, ಲೇಖಕಿ. ತರಂಗ ವಾರಪತ್ರಿಕೆ ಸೇರಿದಂತೆ ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌‌ನ ನಾಲ್ಕು ಪತ್ರಿಕೆಗಳಿಗೆ ಸಂಪಾದಕಿ ಆಗಿದ್ದಾರೆ. ಸಂಧ್ಯಾ ಅವರು ಜನಿಸಿದ್ದು ಚಿಕ್ಕಮಗಳೂರಿನಲ್ಲಿ 1947ರ ಫೆಬ್ರುವರಿ 26ರಂದು. ತಂದೆ ಬಿ. ನಾರಾಯಣ ಬಾಳಿಗಾ ಹಾಗೂ ತಾಯಿ ಸುಮಿತ್ರಾದೇವಿ. ಇದು ಈಜಿಪ್ಟ್‌ ಇದು ಇಸ್ರೇಲ್  (ಪ್ರವಾಸ ಕಥನ), ಸಂಪಾದಕೀಯ ಅಂಕಣಗಳಾದ ’ಪ್ರಿಯ ಓದುಗರೇ’ ಬರಹಗಳ 10 ಸಂಪುಟಗಳು ಪ್ರಕಟವಾಗಿವೆ. ಕೊಂಕಣಿ ರಾಂದಪ (ಕನ್ನಡ, ಇಂಗ್ಲಿಷ್ ಆವೃತ್ತಿ). ಯಕ್ಷಪ್ರಶ್ನೆ, ಪರಂಪರೆಯ ಪುಟಗಳಿಂದ (ಭಾರತೀಯ ಧಾರ್ಮಿಕ-ಸಾಂಸ್ಕೃತಿಕ ಮೌಲ್ಯಗಳ ...

READ MORE

Related Books