ದುಶ್ಚಟಗಳಿಂದ ದೂರವಿರಿ

Author : ಕೆ.ಆರ್. ಶ್ರೀಧರ

Pages 142

₹ 70.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಆಧುನಿಕತೆ, ಜಾಗತೀಕರಣ, ನಗರೀಕರಣದ ಪ್ರಭಾವವು ಸಾಮಾನ್ಯ ಜನರ ಮೇಲೆ ಬಿದ್ದ ಪ್ರಭಾವ. ನಗರೀಕರಣ ದುಪ್ಪಟವಾದಂತೆಲ್ಲಾ ದುಶ್ಚಟಗಳ ಆವಿಷ್ಕಾರವೂ ಹೆಚ್ಚಾಗುತ್ತಾ ಹೋಯಿತು. ಹೊಸಹೊಸ ರೂಪಗಳಲ್ಲಿ ದುಶ್ಚಟಗಳು ವಿದ್ಯಾರ್ಥಿ ಪೀಳಿಗೆಯನ್ನು ಆಹುತಿ ತೆಗೆದುಕೊಳ್ಳಲು ಆರಂಭಿಸಿದೆ. ಲೇಖಕರಾದ ಡಾ.ಕೆ.ಆರ್. ಶ್ರೀಧರ್‌ರವರು , ದುಶ್ಚಟಗಳು ಸಮಾಜದ ಮೇಲೆ ಯಾವೆಲ್ಲ ರೀತಿಯಲ್ಲಿ ಪರಿಣಾಮ ಬೀಳಬಹುದು. ಇವುಗಳಲ್ಲಿ ಕೌಟುಂಬಿಕ ಮತ್ತು ಪೋಷಕರ ಪಾತ್ರ ಏನು? ಈ ಸಂಗತಿಗಳ ಬಗ್ಗೆ ವಿವರಗಳನ್ನು ಈ ಕೃತಿಯಲ್ಲಿ ಒದಗಿಸಿದ್ದಾರೆ.

About the Author

ಕೆ.ಆರ್. ಶ್ರೀಧರ

ಡಾ. ಕೆ.ಆರ್ .  ಶ್ರೀಧರ್ ಅವರು ಮನೋವೈದ್ಯರು. ಹದಿನಾಲ್ಕು ವರ್ಷಗಳ ಸರ್ಕಾರೀ ಸೇವೆಯ ನಂತರ ಕಳೆದ ಮೂವತ್ತು ವರ್ಷಗಳಿಂದ ಶಿವಮೊಗ್ಗೆಯಲ್ಲಿ ಖಾಸಗೀ ವೈದ್ಯ ವೃತ್ತಿಯಲ್ಲಿ ನಿರತರಾಗಿದ್ದಾರೆ. 30 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ 'ಗ್ರಾಮೀಣ ಉಚಿತ ಮಾನಸಿಕ ಆರೋಗ್ಯ ಶಿಬಿರಗಳು' ಈ ಕ್ಷೇತ್ರದಲ್ಲಿ ಇವರು ಸಾಧಿಸಿದ ಒಂದು ದಾಖಲೆ. ಕಳೆದ ಹನ್ನೊಂದು ವರ್ಷಗಳಿಂದ ಇವರು  ಇತರೇ ವೈದ್ಯ ಸಮೂಹದೊಂದಿಗೆ ನಡೆಸುತ್ತಿರುವ ಕ್ಷೇಮ ಟ್ರಸ್ಟ್ (ರಿ.), 'ಒಂದು ಸಮಗ್ರ ಉಚಿತ ಆರೋಗ್ಯ ಆಪ್ತ ಸಲಹಾ ಕೇಂದ್ರ'. ಇದರ ಮೂಲಕ ಸಾರ್ವಜನಿಕರಿಗೆ ಇವರು ಹಮ್ಮಿಕೊಳ್ಳುವ ಉಚಿತ ಆರೋಗ್ಯ ಕಾರ್ಯಕ್ರಮಗಳು ಬಹಳ ಅರ್ಥಪೂರ್ಣವಾಗಿವೆ ...

READ MORE

Related Books