ಡಿವಿಜಿಯವರ ಮಂಕುತಿಮ್ಮನ ಕಗ್ಗ

Author : ಕವಿತಾ ಕೃಷ್ಣ

Pages 336

₹ 250.00




Year of Publication: 2016
Published by: ತನು ಮನು ಪ್ರಕಾಶನ
Address: 'ಅಂಬಾರಿ', 1267, 1ನೇ ತಿರುವು, ಶ್ರೀರಾಂಪುರ 2ನೇ ಹಂತ, ಮೈಸೂರು-570 023
Phone: 0821-2363001

Synopsys

'ಮಂಕುತಿಮ್ಮನ ಕಗ್ಗ' ಕವಿ ಡಿ.ವಿ.ಜಿ.ಯವರ ಮೇರು ಕೃತಿ. ಕನ್ನಡ ಸಾರಸ್ವತಲೋಕದಲ್ಲಿ ತನ್ನದೇ ಛಾಪು ಮೂಡಿಸಿದ ಕೃತಿ. ಸಾರ್ವಕಾಲಿಕ ಸತ್ಯ, ಸರ್ವಾಂಗೀಣ ಸತ್ವ ಗರ್ಭಿಕರಿಸಿಕೊಂಡು ಒಡಮೂಡಿ, ಕಾಲ ದೇಶಗಳ ಗಡಿ ಮೀರಿದ ಈ ಕೃತಿಯನ್ನು ’ಕನ್ನಡದ ಭಗವದ್ಗೀತೆ' ಎಂದು ಗುರುತಿಸಲಾಗುತ್ತದೆ. ಸಾಮಾನ್ಯರ ಮನಸೂರೆಗೊಳ್ಳುವ ಮೂಲಕ ಮನುಕುಲಕ್ಕೊಂದು ಕೈದೀವಿಗೆಯಾಗಿದೆ. ಸಮಾಜಕ್ಕೆ ಸಾಹಿತ್ಯದ ಮೂಲಕ ಅಪಾರ ಡಿ ಸತ್ಪರಿಣಾಮವನ್ನುಂಟುಮಾಡುತ್ತಿರುವ ಈ ಕೃತಿಯನ್ನು ಸರಳೀಕರಿಸಿ (ಮೂಲದ ಜೊತೆಗೆ) ಕನ್ನಡಿಗರ ಒದಗಿಸಲಾಗಿದೆ. ಖ್ಯಾತ ಕವಿಗಳಾದ  ಕವಿತಾಕೃಷ್ಣ ಅವರು ವ್ಯಾಖ್ಯಾನ ಸಮೇತ ಈ ಕೃತಿ ಪುಸ್ತಕ ಅರ್ಥೈಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

About the Author

ಕವಿತಾ ಕೃಷ್ಣ
(08 September 1945)

ಕವಿ, ನಾಟಕಕಾರ ಹಾಗೂ ಸಂಶೋಧಕ ಕವಿತಾ ಕೃಷ್ಣ ಜನಿಸಿದ್ದು 1945 ಸೆಪ್ಟೆಂಬರ್‌ 8ರಂದು. ತುಮಕೂರಿನ ಕ್ಯಾತಸಂದ್ರ ಹುಟ್ಟೂರು. ತಂದೆ ಕೆಂಚಯ್ಯ, ತಾಯಿ ಸಂಜೀವಮ್ಮ. ಎಂ.ಎ. ಬಿ.ಇಡಿ ಪದವೀಧರರು. ಶಿಕ್ಷಣ ತಜ್ಞರು.  ಕವಿತಾ ಪ್ರಕಾಶನ ಮಾಲೆಯ ಪ್ರಕಾಶಕರು. ಕನ್ನಡ ಪರ ಹೋರಾಟಗಾರರು.  ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ತುಮಕೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ,  ಕೃತಿಗಳು: (ಕವನ ಸಂಕಲನ-20), ಕಾವ್ಯಾಂಜಲಿ,2. ಕಾವ್ಯ ಚಿಲುಮೆ, 2. ಕವನ ತರಂಗ 4. ಕವನ ಮಂಜರಿ, 5. ಕೃಷ್ಣನ ಕೊಳಲು 6. ಕನ್ನಡ ಕಹಳೆ ( ಲಾವಣಿ ಸಂಕಲನ), 7. ತೇರನೇರ ಬಾ ತಾಯಿ ...

READ MORE

Related Books