ಈ ಪರಿಯ ಸೊಬಗು

Author : ಜಿ.ಎನ್. ಮೋಹನ್

Pages 166

₹ 170.00




Year of Publication: 2016
Published by: ಪಲ್ಲವ ಪ್ರಕಾಶನ
Address: ಪಲ್ಲವ ಪ್ರಕಾಶನ, ಚನ್ನಪಟ್ಟಣ

Synopsys

ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲಾರದೆ ಅರಣ್ಯದಲ್ಲಿ ಅನಾಮಿಕರಂತೆ, ಅನಾಥರಂತೆ ಬದುಕುತ್ತಿರುವ ಆದಿವಾಸಿಗಳ ಕುರಿತು ಮಾತನಾಡುತ್ತಿರುವ ಪಿ.ಸಾಯಿನಾಥ್ ಅವರ ಚಿಂತನೆಗಳನ್ನು ಕನ್ನಡಿಗರಿಗೆ ಜಿ.ಎನ್.ಮೋಹನ್‌ರವರು ಪರಿಚಯಪಡಿಸಿದ್ದಾರೆ.ಪತ್ರಕರ್ತ ಪಿ.ಸಾಯಿನಾಥ್ ಹಾಗೂ ಅವರ ಸಂಗಡಿಗರು ದೇಶದ ಹಲವು ಊರುಗಳಲ್ಲಿ ಸುತ್ತಾಡಿ ಬರೆದ ಲೇಖನಗಳು ಸಂಕಲನಗೊಂಡಿವೆ.'ಈ ಪರಿಯ ಸೊಬಗು'. ಕೇರಳದ ಇಡುಕ್ಕಿ ಜಿಲ್ಲೆಯ ದಟ್ಟ ಕಾನನದ ಮಧ್ಯೆ ಇರುವ ಪುಸ್ತಕದ ಲೈಬ್ರರಿ, ಸ್ಥಳೀಯ ಬೀಜ ಸಂರಕ್ಷಣೆ ಮಾಡುವ ರಾಜಸ್ಥಾನದ ಚಮ್ನೀ ಮೀನಾ, ತಮಿಳುನಾಡಿನ ರೈತ ಮಹಿಳೆ.

About the Author

ಜಿ.ಎನ್. ಮೋಹನ್

ಪತ್ರಕರ್ತ, ಲೇಖಕ ಜಿ.ಎನ್. ಮೋಹನ್ ಕನ್ನಡ ಪತ್ರಿಕೋದ್ಯಮದ ಪ್ರಮುಖರಲ್ಲೊಬ್ಬರು. ಪತ್ರಿಕೆ, ಎಲೆಕ್ಟ್ರಾನಿಕ್ ಹಾಗೂ ಆನ್ ಲೈನ್ ಮೂರು ಮಾಧ್ಯಮಗಳಲ್ಲಿ ನುರಿತವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ನಾಟಕದಲ್ಲಿ ಮೊದಲ ರ್ಯಾಂಕ್ ನೊಂದಿಗೆ ಪದವಿ ಹಾಗೂ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಪ್ರಜಾವಾಣಿಯ ವರದಿಗಾರರಾಗಿ, ಈಟಿವಿ ಚಾನಲ್ ನ ಹಿರಿಯ ಸಂಪಾದಕರಾಗಿ, ಸಮಯ ಚಾನಲ್ ಹಾಗೂ ಅವಧಿಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 'ಸೋನೆಮಳೆಯ ಸಂಜೆ', 'ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ' ಕವನ ಸಂಕಲನಗಳು, 'ನನ್ನೊಳಗಿನ ಹಾಡು ಕ್ಯೂಬಾ' (ಪ್ರವಾಸ ಕಥನ), 'ಕಾಫಿ ಕಪ್ಪಿನೊಳಗೆ ಕೊಲಂಬಸ್'(ವಿಚಾರ ಕಥನ) ಇವರ ಪ್ರಮುಖ ಕೃತಿಗಳು. ಸಾಹಿತ್ಯ, ನಾಟಕ, ...

READ MORE

Related Books