ಎದೆಗೆ ಬಿದ್ದ ಅಕ್ಷರ

Author : ದೇವನೂರ ಮಹಾದೇವ

Pages 336

₹ 350.00




Year of Publication: 2013
Published by: ಅಭಿನವ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ದೇವನೂರು ಮಹಾದೇವ ಕನ್ನಡ ಸಾಹಿತ್ಯ ಲೋಕದಲ್ಲಿನ ಸೂಕ್ಷ್ಮ ಬರಹಗಾರ, ಹೋರಾಟಗಾರ. ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯಲ್ಲಿ ಕೆಲಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ವ್ಯವಸಾಯದಲ್ಲಿ ತೊಡಗಿ ಮೈಸೂರಿನಲ್ಲಿ ನೆಲೆಗೊಂಡಿರುವ ಇವರು ’ಎದೆಗೆ ಬಿದ್ದ ಅಕ್ಷರ’ ಪುಸ್ತಕದ ಕರ್ತೃ. ನಿರಂತರ ಓದು, ಕ್ರಿಯೆಗಳ ಮೂಲಕ ಅರಿವನ್ನು ಬೆಳೆಸಿಕೊಳ್ಳಲು ಪೂರಕವಾಗಿರುವ ,ಸಮಾಜವಾದಿ ಚಿಂತನೆಯ ಈ ಕಾಲದ ಹೊಸ ಮಾದರಿಯಂತೆ ಮಹತ್ವದ ಸಾಂಸ್ಕೃತಿಕ ಪಠ್ಯವಾಗಿದೆ. ದೇವನೂರರ ಪ್ರತಿಕ್ರಿಯೆಗಳು, ಭಾಷಣಗಳು, ಸಾಹಿತ್ಯಕ ನಿಲುವುಗಳು, ಚಳುವಳಿಗಳಿಗೆ ಸಲಹೆಗಳು, ಮಾನವ ವರ್ತನೆಯ ವಿಶ್ಲೇಷಣೆ, ವಿಕೇಂದ್ರೀಕರಣ, ಅಂತರಾಷ್ಟ್ರೀಯ  ಘಟನೆಗಳು, ಕೃಷಿ, ಹೆಣ್ಣು, ಜಾತಿ, ಕಥನದ ಚಿಂತನೆಗಳು, ರಾಜಕೀಯ ನಿಲುವು, ಅರಿವಿನ ನುಡಿ, ಇವೆಲ್ಲವನ್ನೂ ಒಳಗೊಂಡ ಬರಹಗಳು ,ಪ್ರಗತಿಪರ ಚಿಂತನೆಗಳು ನಿರಂತರವಾಗಿ ಕಂಡುಕೊಳ್ಳಬೇಕಾದ  ಅರಿವಿನ ದಾರಿ ಎದೆಗೆ ಬಿದ್ದ ಅಕ್ಷರದಲ್ಲಿ ಸಿಗುವ ಮುಖ್ಯ ಅಧ್ಯಯನದ ವಸ್ತುಗಳು.’ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ, ಇಂದಲ್ಲ ನಾಳೆ ಫಲ ಕೊಡುವುದು’ ಎನ್ನುವ ದೇವನೂರು ಮಹಾದೇವರ ಮನೋಧೋರಣೆ ಪಠ್ಯದುದ್ದಕ್ಕೂ ಇರುವಂತದ್ದು.

ಅನೇಕ ಸಂದರ್ಭದಲ್ಲಿನ  ಮಾತುಕತೆಗಳು, ಚರ್ಚೆಗಳು, ಭಾರತೀಯ ಸಮಾಜವನ್ನು ಅರಿಯಲು ಪೂರಕವಾದ ಅಂಶಗಳನ್ನುಈ ಪುಸ್ತಕ ಒಳಗೊಂಡಿದೆ.’ಒಂದು ಸಮುದಾಯದ ಬದುಕನ್ನು ಬಂಡೆಗಳಿಗೆ ಹೋಲಿಸುತ್ತಲೇ ಮೂರ್ಛಾವಸ್ಥೆಯಲ್ಲಿರುವ ನಮ್ಮೊಳಗಿನ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ  ಎಂದು ಇನ್ನೊಂದು ಸಮುದಾಯಕ್ಕೆ ಕರೆ ಕೊಡುತ್ತಾರೆ. ಕೆಲವರಲ್ಲಿನ ಕಾರುಣ್ಯ ಎಚ್ಚರಗೊಳ್ಳದೆ ಇದ್ದಲ್ಲಿ ಹಲವರ ಬದುಕು ಬಂಡೆಗಳ ಮೇಲೆಯೇ ಚಿಗುರೊಡೆಯಬೇಕಾಗಬಹುದು’ ಎನ್ನುವ ದೇವನೂರರ ಎಚ್ಚರಿಕೆ ನೀಡುವ ಇಂತಹ ಮಾತುಗಳನ್ನೊಳಗೊಂಡ ತೊಂಭತ್ತು ಲೇಖನಗಳು ಎದೆಗೆ ಬಿದ್ದ ಅಕ್ಷರದಲ್ಲಿದೆ. 

About the Author

ದೇವನೂರ ಮಹಾದೇವ
(10 June 1948)

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ದೇವನೂರು ಗ್ರಾಮದಲ್ಲಿ ಜನಿಸಿದ ಮಹಾದೇವ (ಶಾಲಾ ದಾಖಲಾತಿಗಳ ಪ್ರಕಾರ 1948ರ ಜೂನ್ 10) ಅವರ ತಂದೆ ನಂಜಯ್ಯ ಮತ್ತು ತಾಯಿ ನಂಜಮ್ಮ. ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಬರವಣಿಗೆ ಆರಂಭಿಸಿದ ಮಹಾದೇವ ಅವರ ಮೊದಲಕತೆ “ಕತ್ತಲ ತಿರುವು” (1967) ಪ್ರಕಟವಾದದ್ದು ಕನ್ನಡಪ್ರಭ ದಿನಪತ್ರಿಕೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ  ಸ್ನಾತಕೋತ್ತರ ಪದವಿ (ಎಂ.ಎ 1973-74) ಪಡೆದ ಮಹಾದೇವ ಅವರು ವಿಶ್ವವಿದ್ಯಾಲಯದಲ್ಲಿ ಇದ್ದ ದಿನಗಳಲ್ಲಿಯೇ ಕಥಾಸಂಕಲನ ’ದ್ಯಾವನೂರು’ (1973) ಪ್ರಕಟಿಸಿದ್ದರು. ಒಡಲಾಳ (1979), ಕುಸುಮಬಾಲೆ (1984), ಸಮಗ್ರ (1992), ಎದೆಗೆ ಬಿದ್ದ ಅಕ್ಷರ (2012) ಕೃತಿಗಳನ್ನು ...

READ MORE

Conversation

Related Books