ಈ ಜನಗಳು ಈ ನರಕ ಈ ಪುಳಕ

Author : ವಾಸುದೇವ ನಾಡಿಗ್

Pages 130

₹ 130.00




Year of Publication: 2023
Published by: ಸಾಹಿತ್ಯ ಲೋಕ ಪಬ್ಲಿಕೇಷನ್ಸ್
Address: #725, 12ನೇ ಮುಖ್ಯ ರಸ್ತೆ, 3ನೇ ಬ್ಲಾಕ್‌, ರಾಜಾಜಿನಗರ, ಬೆಂಗಳೂರು- 560 010
Phone: 9945939436

Synopsys

ಲೇಖಕ ವಾಸುದೇವ ನಾಡಿಗ್‌ ಅವರ ಕಥಾಸಂಕಲನ ಕೃತಿ ʻಈ ಜನಗಳು ಈ ನರಕ ಈ ಪುಳಕʼ. ಇಲ್ಲಿನ ಕತೆಗಳಲ್ಲಿ ಸಂಬಂಧಗಳು, ಅದನ್ನು ಕಾಪಾಡಿಕೊಳ್ಳಲು ಜನ ಪಡುತ್ತಿರುವ ಪಾಡುಗಳು, ಸೂಕ್ಷ್ಮ ಭಾವಗಳು, ಏಕಾಂಗಿತನ, ಪ್ರಾಮಾಣಿಕತೆ, ಹತಾಶೆ ಎಂಬಂತೆ ಎಲ್ಲಾ ಭಾವೆನಗಳನ್ನು ಕಾಣಬಹುದು. ಈ ಎಲ್ಲಾ ನೋವುಗಳು ಪುರುಷ ಪಾತ್ರಗಳಲ್ಲಿ ಹೆಚ್ಚಾಗಿ ಗೋಚರಿಸುತ್ತಾ ಹೋಗುತ್ತದೆ. ಇದಕ್ಕೆ ಮುಖಾಮುಖಿಯಾಗುವಂತೆ ಸುನಂದ, ಭೈರವಿ, ಅಶ್ವಿನಿ, ಪೃಥಾ ಹೆಣ್ಣು ಜೀವಗಳು ಗಟ್ಟಿದನಿಯಲ್ಲಿ ಒಪ್ಪಿತ ಬದುಕಿಗೆ ಸಂವಾದಿಯಾಗುತ್ತಾ, ಭ್ರಾಮಕ ಜಗತ್ತಿನಿಂದ ಕೊಂಚ ಆಚೆಗೆ ಸರಿದು ನಿಂತು ಜೀವನವನ್ನು ನೋಡುತ್ತವೆ. ಹೀಗೆ ಪುಸ್ತಕದುದ್ದಕ್ಕೂ ಒಂದೊಂದು ಕತೆಗಳು ಎಲ್ಲ ಹೇಳಿಯೂ ಏನೂ ಹೇಳದಂತೆ ಬದುಕಿನ ಸಂಕೀರ್ಣತೆಯನ್ನು ಓದುಗರ ಮುಂದಿಡುತ್ತಾ ಹೋಗುತ್ತದೆ.

About the Author

ವಾಸುದೇವ ನಾಡಿಗ್

ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. 20 ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ...

READ MORE

Related Books