ಈ ಕಣ್ಣುಗಳಿಗೆ ಸದಾ ನೀರಡಿಕೆ

Author : ಸುಮಿತ್ ಮೇತ್ರಿ

Pages 100

₹ 125.00




Year of Publication: 2023
Published by: ಸುಗಮ ಪುಸ್ತಕ
Address: ಹಲಸಂಗಿ ತಾ.ಚಡಚಣ ಜಿ.ವಿಜಯಪುರ
Phone: 9980845630

Synopsys

ಒಂದು ಕಡೆ ನಿರ್ಣಾಮವನ್ನು ಧ್ಯಾನಿಸುತ್ತಾ ಇನ್ನೊಂದು ಕಡೆ ನಿರ್ಮಾಣದ ಕಡೆಗೆ ತುಡಿಯುತ್ತಿರುವ ಸುಮಿತ್ ಮೇತ್ರಿ, ಈ ಸಂಕಲನದ ಕವಿತೆಗಳು ಹೊಸ ಹಾದಿಗಳನ್ನು ತುಳಿಯುತ್ತಿರುವುದು ಸ್ಪಷ್ಟವಾಗಿದೆ. ತನ್ನ ಮೊದಲ ಸಂಕಲನದ ಉಕ್ತಿಕ್ರಮವನ್ನು ಈ ಸಂಕಲನದಲ್ಲಿ ಇನ್ನೂ ವಿಸ್ತರಿಸಿಕೊಂಡಿದ್ದಾನೆ. ಸ್ಪಷ್ಟಗೊಳಿಸಿ ಕೊಂಡಿದ್ದಾನೆ. ಮೇಲುನೋಟಕ್ಕೆ ವಿಷಯಾಂತರದಂತೆ ಒಂದು ಪ್ರತಿಮೆಯಿಂದ ಇನ್ನೊಂದು ಪ್ರತಿಮೆಗೆ, ಒಂದು ಸನ್ನಿವೇಶದಿಂದ ಇನ್ನೊಂದು ಸನ್ನಿವೇಶಕ್ಕೆ ಹಾರುವ ಇವರ ಕವಿತೆಯ ಸಾಲುಗಳು ಆಳದಲ್ಲಿ ಒಂದು ಸುಸಂಬದ್ಧತೆಯನ್ನು ಹೊಂದಿರುವುದು ಸಹೃದಯರು ಗುರುತಿಸಬಲ್ಲರು. ಇಂದಿನ ಬಹುತೇಕ ಕನ್ನಡ ಕಾವ್ಯ ಆತ್ಮವೃತ್ತಾಂತದ ಗುಂಗಿನಲ್ಲಿ ಸಿಲುಕಿದೆ. ಆದರೆ ಇಲ್ಲಿ ಈ ಕವಿಯ ಆತ್ಮವೂ ಜಗತ್ತಿನ ಚಕ್ರತೀರ್ಥದಲ್ಲಿ ಸಿಲುಕಿ ಶಾಂತಿಗೆ ತಹತಹಿಸುವ ಒಂದು ಅಭಿವ್ಯಕ್ತಿ ಕ್ರಮ, ಈ ಒಂದು ಅಭಿವ್ಯಕ್ತಿಯನ್ನು ಮಾಡುವಲ್ಲಿ ಅತ್ಯಂತ ವಿಭಿನ್ನವಾದ ಮತ್ತು ಪರಸ್ಪರ ದೂರವಾದ ವಿವರಗಳನ್ನು ಒಂದು ಚಮತ್ಕಾರದ ಬೆಸುಗೆಯಲ್ಲಿ ತಂದಿರಿಸಲಾಗಿದೆ. ಹೀಗೆ ಈ ಸಂಕಲನ, ನಮ್ಮನ್ನು ಮತ್ತು ಪ್ರಸ್ತುತ ಕನ್ನಡ ಕಾವ್ಯ ಓದುಗ ವಲಯವನ್ನು ಒಂದು ವಿಸ್ಮಯಗಳ ಲೋಕಕ್ಕೆ ಕರೆದೊಯ್ಯುತ್ತದೆ. ಆ ವಿಸ್ಮಯಗಳ ನಡುವೆ ನಮ್ಮೆಲ್ಲರ ಗೊತ್ತು ಗುರಿಗಳನ್ನು ಹುಡುಕುವ ಒಂದು ಸ್ತುತ್ಯ ಪ್ರಯತ್ನ ಇಲ್ಲಿದೆ ಎಂದು ಎಚ್.ಎಸ್. ಶಿವಪ್ರಕಾಶ ಅವರು ಬೆನ್ನುಡಿಯಲ್ಲಿ ಬರೆದಿದ್ದಾರೆ.

About the Author

ಸುಮಿತ್ ಮೇತ್ರಿ
(14 September 1986)

ಸುಮಿತ್ ಮೇತ್ರಿ- ವಿಜಯಪುರ ಜಿಲ್ಲೆಯ ಹಲಸಂಗಿಯಲ್ಲಿ 1986ರಲ್ಲಿ ಜನಿಸಿದರು. ತಂದೆ ಗಣಪತಿ, ತಾಯಿ ಗಂಗಾಬಾಯಿ ವಿಜ್ಞಾನ ಶಿಕ್ಷಕರಾದ ಇವರು ಪ್ರಸ್ತುತ ರಾಯಚೂರು ಜಿಲ್ಲೆ ದೇವದುರ್ಗದ ಕಜ್ಜಿಬಂಡಿ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲಸಂಗಿ, ವಿಜಯಪುರ ಮತ್ತು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ. ಓದು-ಬರಹ, ಕಾವ್ಯ, ಕಾಡು, ಸುತ್ತಾಟ ಇವರ ಅಭಿರುಚಿ. ಮೌನ, ಧ್ಯಾನ ಅಂದರೆ ಬಲು ಇಷ್ಟ ಎನ್ನುವ ಇವರು ಏಕಾಂತ ಅವರ ಪಾಲಿನ ಸ್ವರ್ಗ ಎನ್ನುತ್ತಾರೆ. ಓದು, ಬರಹದ ಜೊತೆಗೆ ಪೋಟೋಗ್ರಫಿ ಸುಮಿತ್ ಅವರ ಮೆಚ್ಚಿನ ಹವ್ಯಾಸಗಳನ್ನೊಂದು. ರಾಜ್ಯ ಮಟ್ಟದ ವಿಜ್ಞಾನ ಆವಿಷ್ಕಾರಗಳಲ್ಲಿ ತೊಡಗಿಕೊಂಡಿದ್ದು, ಅನೇಕ ಇಲಾಖಾ ...

READ MORE

Related Books