ಈಜಿಪ್ಟ್ ಪ್ರವಾಸದ ಕೆಲವು ಟಿಪ್ಪಣಿಗಳು

Author : ವಿಶ್ವೇಶ್ವರ ಭಟ್

Pages 112

₹ 203.00




Year of Publication: 2022
Published by: ವಿಶ್ವವಾಣಿ ಪುಸ್ತಕ

Synopsys

ಈಜಿಪ್ಟ್ ಪ್ರವಾಸದ ಕೆಲವು ಟಿಪ್ಪಣಿಗಳು ವಿಶ್ವೇಶರ ಭಟ್‌ ಅವರ ಅನುಭವಕಥನವಾಗಿದೆ. ಅನೇಕ ಸಲ ಅಲ್ಲಿಗೆ ಹೋಗಬೇಕು ಎಂದು ನಿರ್ಧರಿಸಿದ್ದರೂ ಏನೇನೋ ಕಾರಣಗಳಿಂದ ಹೋಗಲು ಆಗಿರಲಿಲ್ಲ. ಅಲ್ಲಿನ ಪಿರಮಿಡ್ದುಗಳು ಮತ್ತು ನೈಲ್ ನದಿ ಪ್ರೇಯಸಿಯಂತೆ ನನ್ನನ್ನು ಕಾಡಿದ್ದವು. ಯಾವುದೇ ದೇಶಕ್ಕೆ ಹೋಗಿ ಬಂದಾಗಿ, ಹೋಗಿ ಬಂದ ತೃಪ್ತಿಯ ಜತೆಗೆ, ಈಜಿಪ್ಟ್ ಗೆ ಹೋಗಿಲ್ಲವಲ್ಲ ಎಂಬ ಕೊರಗು ಕಾಡುತ್ತಿತ್ತು. ಒಂದು ದಿನ ಅಲ್ಲಿಗೆ ಹೋಗಲೇಬೇಕೆಂದು ನಿರ್ಧರಿಸಿದೆ. ಅದಾಗಿ ಹದಿನಾಲ್ಕು ದಿನಗಳಲ್ಲಿ ಪಿರಮಿಡ್ಡು ಮುಂದೆ ನಿಂತಿದ್ದೆ.ಮೊದಲ ಬಾರಿಗೆ ನಾನು ಇರುವೆಯಷ್ಟು ಚಿಕ್ಕವನು ಎಂದು ಅನಿಸಿದ್ದು ಆಗ ಮತ್ತು ಅಲ್ಲೇ ಎಂದು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ವಿಶ್ವೇಶ್ವರ ಭಟ್

ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ  ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ,  “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...

READ MORE

Related Books