ಎಲ್ಲಮ್ಮನ ಕಥನ ಕಾವ್ಯ

Author : ಕೆ.ಎಂ. ಮೇತ್ರಿ

Pages 150

₹ 150.00




Year of Publication: 2005
Published by: ವಿದ್ಯಾನಿಧಿ ಪ್ರಕಾಶನ
Phone: 9886407011

Synopsys

ಲೇಖಕ ಕೆ.ಎಂ. ಮೇತ್ರಿ ಅವರ ಜಾನಪದ ಕೃತಿ ಎಲ್ಲಮ್ಮನ ಕಥನ ಕಾವ್ಯ. ನಿರಕ್ಷರಿ ಅಲೆಮಾರಿ ಬುಡ್ಗ ಜಂಗಮರ ಬುರ್ರಕಥಾ ಈರಮ್ಮ ಕನ್ನಡ ನಾಡಿನ ಅದ್ವಿತೀಯ ಅಪರೂಪದ ಪ್ರತಿಬೆ.ತನ್ನ ಇಡೀ ಬದುಕನ್ನು ಜನಪದ ಕಥನಕಾವ್ಯಗಳ ಗಾಯನಕ್ಕಾಗಿಯೇ ಮುಡಿಪಿಟ್ಟವರು.ಇವರ ಅಪಾರ ಕಥನಗೀತೆಗಳಲ್ಲಿ ಈ ಪುಸ್ತಕವು ಪ್ರಸ್ತುತ ಏಲ್ಲಮ್ಮನ ಕಥನ ಕಾವ್ಯ ಮತ್ತು ಬುರ್ರಮ್ಮನ ಆತ್ಮಕತನವನ್ನು ಈ ಪುಸ್ತಕದ ಮೂಲಕ ತಿಳಿದುಕೊಳ್ಳಬಹುದು. ಕೃತಿಯ ಪರಿವಿಡಿಯಲ್ಲಿ ಮಾಋಷಿ ಮತ್ತು ಎಲ್ಲಮ್ಮನ ಜನನ, ಜಮ್ಮಿಗಿರಿ ಪಟ್ನದಲ್ಲಿ ಎಲ್ಲಮ್ಮನ ಬೆಳವಣಿಗೆ, ಎಲ್ಲಮ್ಮನ ಮದುವೆ, ಎಲ್ಲಮ್ಮನ ಪತಿಭಕ್ತಿ, ಮಾಋಷಿಯ ತಪಸ್ಸು, ಹಿರೆಬ್ಯಾನೆ, ಎಲ್ಲಮ್ಮನ ಸತ್ವ ಪರೀಕ್ಷೆ ಮತ್ತು ಪರಶುರಾಮನ ಜನನ, ಪರಶುರಾಮನ ಬಾಲ್ಯ ಜೀವನ ಇಂತಹ 23 ಶೀರ್ಷಿಕೆಗಳ ಬರಹಗಳಿವೆ.

About the Author

ಕೆ.ಎಂ. ಮೇತ್ರಿ
(01 August 1962)

ಡಾ. ಕೆ. ಎಂ ಮೇತ್ರಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.  ಸಮಾಜಶಾಸ್ತ್ರ, ಮಾನವಶಾಶ್ತ್ರ, ಶಿಕ್ಷಣಶಾಸ್ತ್ರ, ಬುಡಕಟ್ಟು ಅಧ್ಯಯನ ಅವರ ಆಸಕ್ತಿಯ ಅಧ್ಯಯನ ಕ್ಷೇತ್ರಗಳು. ಕರ್ನಾಟಕ ಅಲೆಮಾರಿ ಸಮುದಾಯಗಳ 22 ಕೃತಿಗಳು, ಬುಡಕಟ್ಟು ಕುಲ ಕಸುಬುಗಳು, ಕೃಷ್ಣಗೊಲ್ಲರ್ ಕಥನಕಾವ್ಯಗಳು, ಕುಮಾರರಾಮ ಮತ್ತು ಕೃಷ್ಣಗೊಲ್ಲರ ಮಹಾಕಾವ್ಯ ಪ್ರಮುಖ ಪುಸ್ತಕಗಳು ಪ್ರಕಟನೆಯಾಗಿವೆ. ಸಾಹಿತ್ಯ ಔರ್ ಮಿಥಕೋಮೆ ಆದಿವಾಸಿ : ದಕ್ಷಿಣ ರಾಜ್ಯೋಕೆ ಸಂದರ್ಭ ಮೆ ಬುಡಕಟ್ಟು ಅಭಿವೃದ್ದಿ : ಸುವರ್ಣ ಕರ್ನಾಟಕ ಅಭಿವೃದ್ಧಿ ಪಥ ಪ್ರಮುಖ ಸಂಶೋಧನೆ ಲೇಖನಗಳಾಗಿವೆ. ಶ್ರೇಷ್ಠ ಶಿಕ್ಷಣ ತಜ್ಞ ಡಾ. ಎಚ್. ನರಸಿಂಹಯ್ಯ ಪ್ರಶಸ್ತಿ, ...

READ MORE

Related Books