ಎಲ್ಲರ ಗಾಂಧೀಜಿ

Author : ನಟರಾಜ ಹುಳಿಯಾರ್

₹ 300.00




Year of Publication: 2022
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ವ್ಹಯಾ ಎಮ್ಮಿಗನೂರು, ಬಳ್ಳಾರಿ - 583113
Phone: 9480353507

Synopsys

ಲೇಖಕ ನಟರಾಜ್‌ ಹುಳಿಯಾರ್‌ ಅವರು ಸಂಪಾದಿಸಿರುವ ಕೃತಿ ʻಎಲ್ಲರ ಗಾಂಧೀಜಿ: ಮಹಾತ್ಮ ಗಾಂಧೀಜಿಯವರ ಮಾತು ಬರಹ ಚಿಂತನೆʼ. ಜಾತ್ಯಾತೀಕ ನಾಯಕನಾಗಿ, ಸ್ತ್ರೀವಾದಿಯಾಗಿ, ಧಾರ್ಮಿಕ ಸಾಮರಸ್ಯದ ಪ್ರತಿಪಾದಕನಾಗಿ, ಅಹಿಂಸೆಯ ಪ್ರತಿಪಾದಕನೂ ಆಗಿ ಸರಳ ಜೀವನ ವ್ಯಕ್ತಿತ್ವದವರಾದ ಗಾಂಧಿಯವರ ವ್ಯಕ್ತಿತ್ವದ ಅನಾವರಣ ಈ ಕೃತಿ. ಎಂತಹ ಸಂದರ್ಭದಲ್ಲೂ ಸತ್ಯದ ಹಾದಿಯಲ್ಲೇ ನಡೆದು, ದೇಶದಲ್ಲಿ ಶಾಂತಿ ಸೌಹಾರ್ದತೆಗಾಗಿ ಜೀವನವನ್ನೇ ಮುಡಿಪಾಗಿಟ್ಟಂತಹ ಹಲವಾರು ವಿಸ್ಮಯಕಾರಿ ಪ್ರಸಂಗಗಳನ್ನು ಓದುಗರ ಮುಂದೆ ಇಟ್ಟಿದ್ದಾರೆ. ಜೊತೆಗೆ ಇಂಗ್ಲೀಷ್‌, ಹಿಂದಿ, ಗುಜರಾತಿ ಭಾಷೆಗಳಲ್ಲಿಯ ಇವರ ಮಾನವೀಯ ಸಂದೇಶಗಳನ್ನು ಸಾರುವ ಮಾತುಗಳು ಮತ್ತು ಬರಹಗಳನ್ನೂ ನಟರಾಜ್‌ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಒಟ್ಟು ಪ್ರಸ್ತುತ ಗಾಂಧಿಯ ಕುರಿತು ಚಾಲ್ತಿಯಲ್ಲಿರುವ ಹಲವು ವಾದ ವಿವಾದಗಳಿಗೆ, ಅಪವಾದಗಳಿಗೆ, ದ್ವೇಷಗಳಿಗೆ ಉತ್ತರವನ್ನು ನೀಡುವ ಪ್ರಯತ್ನ ಈ ಕೃತಿ.

About the Author

ನಟರಾಜ ಹುಳಿಯಾರ್

ಕತೆಗಾರ-ಲೇಖಕ ನಟರಾಜ ಹುಳಿಯಾರ್ ಅವರು ತುಮಕೂರು ಜಿಲ್ಲೆಯ ಹುಳಿಯಾರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಅವರು'ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ. ಮತ್ತೊಬ್ಬ ಸರ್ವಾಧಿಕಾರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು, ಮಾಯಾಕಿನ್ನರಿ (ಕಥಾಸಂಕಲನಗಳು), ರೂಪಕಗಳ ಸಾವು (ಕವಿತೆಗಳು), ಗಾಳಿಬೆಳಕು (ಸಾಂಸ್ಕತಿಕ ಬರಹಗಳು), ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ (ತೌಲನಿಕ ಅಧ್ಯಯನ), ಇಂತಿ ನಮಸ್ಕಾರಗಳು (ಲಂಕೇಶ್‌-ಡಿ.ಆರ್. ನಾಗರಾಜ್ ಕುರಿತ ...

READ MORE

Related Books