ಎಲ್ಲಿಂದ ಬಂತು ಬೂಸ್ಟ್?

Author : ಎಲ್.ಎಸ್. ಶ್ಯಾಮಸುಂದರ ಶರ್ಮಾ

Pages 64

₹ 59.00




Year of Publication: 2010
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ ಪೂರ್ವ, ಬೆಂಗಳೂರು
Phone: 08026617100

Synopsys

ಎಲ್.ಎಸ್. ಶಾಮಸುಂದರ ಶರ್ಮ ಅವರು ಮಕ್ಕಳಿಗಾಗಿ ಬರೆದ ಕೃತಿ-ಎಲ್ಲಿಂದ ಬಂತು ಬೂಸ್ಟ್?. ಜೀವವಿಜ್ಞಾನದ ವೈಚಿತ್ಯ್ರವನ್ನು ಮಕ್ಕಳ ಶೈಲಿಯ ಸರಳ ಬರವಣಿಗೆಯಲ್ಲಿ ವಿವರಿಸಲಾಗಿದೆ. ಬೂಷ್ಟು ಸಾಮಾನ್ಯವಾಗಿ ಬದುಕಿರುವ ಅಥವಾ ಸತ್ತಿರುವ ಸಜೀವ ಅಂಗಾಂಶಗಳ ಮೇಲೆ ಬೆಳೆಯುತ್ತವೆ. ಆ ಪದಾರ್ಥಗಳನ್ನು ವಿಭಜಿಸಿ ತಾವು ಬದುಕುತ್ತವೆ. ಅದರಲ್ಲೂ ಸತ್ತ ಪದಾರ್ಥಗಳನ್ನು ಇವು ಒಡೆದು, ಸರಳ ರಾಸಾಯನಿಕಗಳಾಗಿ ಮಾರ್ಪಡಿಸಿ ಮಣ್ಣಿಗೆ ಸೇರಿಸುವುದರಿಂದ ಪ್ರಕೃತಿಗೆ ಉಪಕಾರವಾಗುತ್ತದೆ. ವೈರಸ್ ಬ್ಯಾಕ್ಟೀರಿಯಾ, ಜೀವಕೋಶ, ಬೂಸ್ಟ್, ಸಸ್ಯ ಸಾಮ್ರಾಜ್ಯ, ಕಾಡಿನ ಬದುಕು ಬಣೆ, ಔಷಧಿಯಾಗಿ ಸಸ್ಯಗಳು ಸುಗಂಧ ದ್ರವ್ಯ, ಸಾಂಬಾರ್ ಪದಾರ್ಥಗಳು ಹೀಗೆ ಒಟ್ಟು 27 ವಿಷಯಗಳ ಮಾಹಿತಿಯನ್ನು ನೀಡಿದ್ದು, ಮಕ್ಕಳಲ್ಲಿ ಜೀವ ವಿಜ್ಞಾನ ಕುರಿತು ಕುತೂಹಲ ಮೂಡಿಸುತ್ತದೆ.

About the Author

ಎಲ್.ಎಸ್. ಶ್ಯಾಮಸುಂದರ ಶರ್ಮಾ

ಎಲ್.ಎಸ್. ಶ್ಯಾಮಸುಂದರ ಶರ್ಮಾ ಅವರು ವಿಜ್ಞಾನ ಲೇಖಕರು. ಮಕ್ಕಳಿಗಾಗಿ ಬರೆದ ‘ನಮ್ಮ ಪುಟ್ಟ ಪ್ರಯೋಗಾಲಯ’ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು’ ಪ್ರಶಸ್ತಿ (2007) ಲಭಿಸಿದೆ. ಕೃತಿಗಳು: ಎಲ್ಲಿಂದ ಬಂತು ಬೂಸ್ಟ್?, ಸುಣ್ಣದಿಂದ ಅಮೃತಶಿಲೆ,  ನಮ್ಮ ಪುಟ್ಟ ಪ್ರಯೋಗಶಾಲೆ ಇತ್ಯಾದಿ  ...

READ MORE

Related Books