ಇಎಂಎಸ್ ಎಂಬ ದಟ್ಟದರಿದ್ರರ ಪುತ್ರ

Author : ವಿಶ್ವ ಕುಂದಾಪುರ

Pages 1

₹ 20.00




Year of Publication: 2011
Published by: ಕ್ರಿಯಾ ಪ್ರಕಾಶನ
Address: ಸಂ. 40, ಸುರಿಭವನ, 16ನೇ ಅಡ್ಡರಸ್ತೆ, 2ನೇ ಬಿ ಮುಖ್ಯರಸ್ತೆ, ಸಂಪಂಗಿ ರಾಮನಗರ, ಬೆಂಗಳೂರು-560027
Phone: 080-22234369/9448578021

Synopsys

ಕೇರಳದ ಬಹುದೊಡ್ಡ ರಾಜಕೀಯ ನಾಯಕ ಇಎಂಎಸ್‌ ನಂಬೂದರಿಪಾಡ್‌ ಅವರ ಬದುಕಿನ ಚಿತ್ರಣ ಒದಗಿಸುವ ಕೃತಿ ಇದು. 

ಕೇರಳದ ಮತ್ತೊಬ್ಬ ಹಿರಿಯ ಚಿಂತಕ ವಿಜಿಕೆ ನಾಯರ್‌ ಅವರಿ ನಂಬೂದರಿಪಾಡ್ ಅವರನ್ನು ಕೃತಿಯ ಬೆನ್ನುಡಿಯಲ್ಲಿ ಹೀಗೆ ಸ್ಮರಿಸಿದ್ದಾರೆ: ಎಳಂಕುಳಂ ಮನಕ್ಕಳ್ ಶಂಕರನ್ ನಂಬೂದಿರಿಪಾಡ್ ಸುಮಾರಾಗಿ ಸಮಸ್ತ ಇಪ್ಪತ್ತನೇ ಶತಮಾನವನ್ನು ಆವರಿಸಿದ ತನ್ನ ಬದುಕಿನ ಅವಧಿಯಲ್ಲಿಯೇ ದಂತಕಥೆಯಾದವರು. ಅವರೊಬ್ಬ ಸಾಮಾಜಿಕ ಸುಧಾರಕರು ಕೂಡಾ- ಮೊದಲು ತಾನು ಹುಟ್ಟಿದ ಸಮುದಾಯದ ಸವಾಲುಗಳನ್ನು ಎದುರಿಸಿ ಅದನ್ನು ಒಳಗಿನಿಂದಲೇ ರೂಪಿಸಿದವರು, ನಂತರ ಅದರಿಂದ ಪ್ರಯೋಜನ ಪಡೆದು ಸಾಮಾಜಿಕ ಸುಧಾರಣೆಯ ಓಘವನ್ನು ಮತ್ತಷ್ಟು ಮುಂದೆ ಒಯ್ದವರು. ಅವರು ಇಪ್ಪತ್ತನೇ ಶತಮಾನದ ಸಾಮಾಜಿಕ ಬದಲಾವಣೆಯ (ಲೆನಿನ್ ನಿರೂಪಿಸಿದ) ಎರಡು ಧಾರೆಗಳಾದ ರಾಷ್ಟ್ರೀಯ ವಿಮೋಚನಾ ಆಂದೋಲನ ಮತ್ತು ಸಮಾಜವಾದಿ ಆಂದೋಲನವನ್ನು ಬೆಸೆದವರಷ್ಟೇ ಅಲ್ಲ, ಸಾಮಾಜಿಕ ಸುಧಾರಣೆಯನ್ನೂ ಅದರೊಂದಿಗೆ ಬೆಸೆದವರು, ಜತೆಗೆ ತಾನು ಬದುಕಿದ್ದ ಸಮಾಜದ ಸಾಮಾಜಿಕ-ಆರ್ಥಿಕ ವಿಶ್ಲೇಷಣೆಯನ್ನು ಮಾಡಿದವರು. ಇವೆಲ್ಲಾ ಪರಸ್ಪರ ಸಂಬಂಧಿಸಿದವುಗಳು, ಅದಕ್ಕಿಂತಲೂ ಹೆಚ್ಚಾಗಿ ಪರಸ್ಪರ ಬೆಸೆದುಕೊಂಡಿರುವ ಸಂಗತಿಗಳು, ರಾಷ್ಟ್ರೀಯ ವಿಮೋಚನೆ ಮತ್ತು ಸಮಾಜವಾದೀ ಆಂದೋಲನದ ಗುರಿಸಾಧನೆಗೆ ಬೇಕಾದ ಸಂಗತಿಗಳು. ಇಎಂಎಸ್ ತನ್ನ ಪಭಾವದ ವಲಯದಲ್ಲಿ ಇವೆರಡನ್ನೂ ಸಾಧಿಸಿದರು’. 

About the Author

ವಿಶ್ವ ಕುಂದಾಪುರ

ವಿಶ್ವ ಕುಂದಾಪುರ ಅವರು ವಿದ್ಯಾರ್ಥಿ ದಿನಗಳಿಂದಲೂ ಪ್ರಗತಿಪರ ಆಂದೋಲನದಲ್ಲಿ ಗುರುತಿಸಿಕೊಂಡವರು. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಅವರು 'ದಿ ಹಿಂದೂ’ ಇಂಗ್ಲಿಷ್ ದೈನಿಕದ ಪ್ರಧಾನ ವರದಿಗಾರರಾಗಿ ಕೋಲಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ’ಸಮತೆಯ ನಾಡಿನ ಉದಯಕ್ಕಾಗಿ’ (ಹರಿಕಿಷನ್ ಸಿಂಗ್ ಸುರ್ಜಿತ್), ವಿಮೋಚನೆಯ ಸಮರದಲ್ಲಿ (ಮೇಜರ್ ಜೈಪಾಲ್ ಸಿಂಗ್), ’ಮಾವೋವಾದ: ಒಂದು ಎಡಪಂಥೀಯ ವಿಶ್ಲೇಷಣೆ' (ವಿವಿಧ ಲೇಖಕರು), `ಚಿತ್ತಗಾಂಗ್ ಶಸ್ತ್ರಾಗಾರ ದಾಳಿ' (ಸುಜೂದ್ ರಾಮ್ ) ಅವರ ಕೆಲವು ಪ್ರಮುಖ ಅನುವಾದ ಕೃತಿಗಳು. ಅವರ “ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿ’ ಪ್ರಬಂಧವು ಕನ್ನಡದಲ್ಲಿ ಅಪರೂಪದ ಕೃತಿ. `ವಿಮೋಚನೆಯ ಸಮರ’ದಲ್ಲಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2009ನೇ ಸಾಲಿನ ಅತ್ಯುತ್ತಮ ...

READ MORE

Related Books