ಇಂಗ್ಲಿಷ್ ಗೀತಗಳು

Author : ರಹಮತ್ ತರೀಕೆರೆ

₹ 80.00




Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ 583278

Synopsys

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ನಡೆಸಿದ ಬಿ.ಎಂ. ಶ್ರೀಕಂಠಯ್ಯನವರ ‘ಇಂಗ್ಲಿಷ್ ಗೀತಗಳು’ ಕುರಿತಾದ ಚರ್ಚೆ- ಸಂವಾದವನ್ನು ಈ ಗ್ರಂಥವು ಒಳಗೊಂಡಿದೆ. ಸಾಂಸ್ಕೃತಿಕ ಮುಖಾಮುಖಿ ಸರಣಿಯಲ್ಲಿ ಪ್ರಕಟವಾದ ಗ್ರಂಥವಿದು. ಪುಸ್ತಕದ ಸಂಪಾದಕರಾಗಿರುವ ರಹಮತ್ ತರೀಕೆರೆಯವರ ಆಶಯ ಭಾಷಣದ ಪಠ್ಯದ ಮೂಲಕ ಪುಸ್ತಕ -ಚರ್ಚೆ ತೆರೆದುಕೊಳ್ಳುತ್ತದೆ. ಯು.ಆರ್. ಅನಂತಮೂರ್ತಿ ಅವರ ಉದ್ಘಾಟನಾ ಮಾತುಗಳು ಇಂಗ್ಲಿಷ್ ಗೀತಗಳ ಮೇಲೆ ಒಳನೋಟ ನೀಡುವಂತಿವೆ. ಸಾಂಸ್ಕೃತಿಕ ಪಠ್ಯವಾಗಿ ಇಂಗ್ಲಿಷ್ ಗೀತಗಳು ಕುರಿತು ರಾಮಚಂದ್ರದೇವ, ವಸಾಹತುಶಾಹಿ ಆಧುನಿಕತೆ ಹಾಗೂ ಇಂಗ್ಲಿಷ್ ಗೀತಗಳು ಕುರಿತು ಶಿವರಾಮ ಪಡಿಕ್ಕಲ್, ಬಿಎಂಶ್ರೀ ಮತ್ತು ವಸಾಹತುಶಾಹಿ ಕುರಿತು ವಿಎಸ್ ಶ್ರೀಧರ, ಇಂಗ್ಲಿಷ್ ಗೀತಗಳು ರೂಪುಗೊಂಡ ಚಾರಿತ್ರಿಕ ಸಂದರ್ಭ ಕುರಿತು ವಿಬಿ ತಾರಕೇಶ್ವರ, ಶ್ರೀಯವರ ಭಾಷಾಂತರದ ರಾಜಕಾರಣ ಕುರಿತು ನಟರಾಜ ಹುಳಿಯಾರ್, ಇಂಗ್ಲಿಷ್ ಗೀತಗಳು ಮತ್ತ ಕನ್ನಡ ಕಾವ್ಯ ಪರಂಪರೆ ಕುರಿತು ಬಿಯು ಸುಮಾ, ಮಹಿಳಾದೃಷ್ಟಿಕೋನದಲ್ಲಿ ಇಂಗ್ಲಿಷ್ ಗೀತಗಳು ಕುರಿತು ಮಮತಾ ಜಿ. ಸಾಗರ,ಸಮಕಾಲೀನ ಅನುವಾದಗಳ ಜೊತೆಯಲ್ಲಿಟ್ಟು ಕವಿತಾ ರೈ ಅವರು ಬರೆದ- ಆಡಿದ ಮಾತುಗಳನ್ನು ಈ ಗ್ರಂಥದಲ್ಲಿ ಸಂಕಲಿಸಲಾಗಿದೆ. ಕೆಪಿ. ಸುರೇಶ್ ಅವರು ಇಂಗ್ಲಿಷ್ ಗೀತಗಳ ಬಗ್ಗೆ ನೀಡಿದ ಟಿಪ್ಪಣಿಗಳು ಕೂಡ .

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Related Books