ಎಂಥದೊ ತುಂತುರು

Author : ನಾಗೇಶ ಹೆಗಡೆ

Pages 110

₹ 85.00




Year of Publication: 2003
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

ನಾಗೇಶ್ ಹೆಗಡೆಯವರ ಅಂಕಣ ಬರಹಗಳ ಸಂಕಲನ ‘ಎಂಥದೊ ತುಂತುರು’ ಒಂದೆಡೆ ವಿಜ್ಞಾನ- ತಂತ್ರಜ್ಞಾನಗಳ ಊರ್ಧ್ವಮುಖಿ ಒತ್ತಡ, ಇನ್ನೊಂದೆಡೆ ಪರಿಸರ ಪರಿಸ್ಥಿತಿಯ ಅಧೋಗತಿ ಒತ್ತಡ ನಡುವಣ ವಿಕ್ಷಿಪ್ತ ಕಾಲಘಟ್ಟದಲ್ಲಿ ಈ ಸಂಕಲನ ಪ್ರಕಟಿಸಿದ್ದಾರೆ. ಇಲ್ಲಿನ ಕೆಲವು ಲೇಖನಗಳು ವಿಜ್ಞಾನ ಸಂಗಾತಿ ಮಾಸಪತ್ರಿಕೆಯ ಸಂಪಾದಕರಾಗಿದ್ದ ಶ್ರೀ ಟಿ.ಆರ್.ಅನಂತರಾಮು ಅವರ ಪಾರ್ಶ್ವಮುಖಿ ಒತ್ತಡದಿಂದ ಸೃಷಿಯಾಗಿ. ಅದೇ ಪತ್ರಿಕೆಯಲ್ಲಿ 2002ರಲ್ಲಿ ಪ್ರಕಟವಾದವು ಎನ್ನುತ್ತಾರೆ ಲೇಖಕ ನಾಗೇಶ ಹೆಗಡೆ. ಇಲ್ಲಿನ ಕೆಲವು ಲೇಖನಗಳು ‘ಸುಧಾ’ ಮತ್ತು ಪ್ರಜಾವಾಣಿಗಳಲ್ಲಿ ಪ್ರಕಟವಾಗಿದ್ದ ಲೇಖನಗಳಿವೆ. 

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Related Books