ಎಪಿಕ್ ರಂಗಭೂಮಿ

Author : ಕೆ.ವಿ. ಅಕ್ಷರ

Pages 92

₹ 100.00




Year of Publication: 2020
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು- 560040
Phone: 9448804905

Synopsys

ಕನ್ನಡದಲ್ಲಿ ಈಚೆಗೆ ಬಳಕೆಯಾಗುತ್ತಿರುವ  ’ಎಪಿಕ್ ರಂಗಭೂಮಿ’  ಎನ್ನುವ ಪಾರಿಭಾಷಿಕ ಶಬ್ದವು 1920ರ ದಶಕದ ಜರ್ಮನಿಯಲ್ಲಿ, ಆ ಕಾಲದ ಸಮಾಜ – ರಾಜಕೀಯಗಳ ಹಾಗೂ ರಂಗಭೂಮಿ ಮತ್ತಿತರ ಕಲೆಗಳ ವಿಶಿಷ್ಟ ಸನ್ನಿವೇಶದಲ್ಲಿ  ರೂಪುತಳೆದ ಒಂದು ತಾತ್ವಿಕ ಪರಿಕಲ್ಪನೆಯಾಗಿದೆ.

ಎಪಿಕ್ ರಂಗಭೂಮಿ ಎಂಬ ಶಬ್ದವನ್ನು ಜನಪ್ರಿಯಗೊಳಿಸಿದ ಪ್ರಖ್ಯಾತ ರಂಗಕರ್ಮಿ ಬರ್ಟೋಲ್ಟ್ ಬ್ರೆಕ್ಟ್ ತನ್ನ ಬರಹಗಳನ್ನು ಬರೆದದ್ದು ಜರ್ಮನ್ ಭಾಷೆಯಲ್ಲಿ.  ಇವನು ನೆಲೆಸಿದ್ದ ಅಂದಿನ ಪೂರ್ವ ಜರ್ಮನಿಯ ಸರ್ಕಾರವು ಆತನ ಬರಹಗಳ ಪ್ರಕಟಣೆಯನ್ನು ಕುರಿತಂತೆ ಸೂಕ್ಷ್ಮವಾದ ನಿಯಂತ್ರಣವನ್ನು ಇಟ್ಟುಕೊಂಡಿತ್ತು. ಈ ಎಲ್ಲಾ ಹಿನ್ನೆಲೆಗಳಿಂದಾಗಿ ಎಪಿಕ್ ರಂಗಭೂಮಿಗೆ ಸಂಬಂಧಿಸಿದ ತಾತ್ವಿಕ ಪರಿಕಲ್ಪನೆಗಳ ಬಗ್ಗೆ ಪಶ್ಚಿಮದಲ್ಲೇ ಹಲವು ಬಾರು ಜಿಜ್ಞಾಸೆಗಳೂ ಪುನರ್‍ ವ್ಯಾಖ್ಯಾನಗಳೂ ನಡೆಯುತ್ತ ಬಂದಿವೆ.

ಇವುಗಳ ಹಿನ್ನಲೆಯಲ್ಲಿ ಎಪಿಕ್ ಪರಿಕಲ್ಪನೆಯ ಬೆಳವಣಿಗೆ, ಎಪಿಕ್ ರಂಗಭೂಮಿಯ ತಾತ್ಚಿಕ ಮುಖಗಳು, ಎಪಿಕ್ ನಾಟಕ ಮತ್ತು ರಂಗಪ್ರಯೋಗ, ಎಪಿಕ್ ರಂಗಕಲ್ಪನೆಯ ವ್ಯಾಪ್ತಿ ಮತ್ತು ವಿಸ್ತರಣೆ, ಎಪಿಕ್ ರಂಗಭೂಮಿ ಕಾಲದೇಶಗಳಲ್ಲಿ ಅನುಭವಿಸಿದ ಸಮಸ್ಯೆಗಳು, ಟೀಕೆ-ವಿಮರ್ಶಾ ಧೋರಣೆಗಳು, ಎಪಿಕ್ ನಾಟಕ ಮತ್ತು ರಂಗಭೂಮಿಯ ಭವಿಷ್ಯದ ಸಾಧ್ಯತೆಗಳ ಸ್ವರೂಪವನ್ನು ವಿವರಿಸುವ ’ ಎಪಿಕ್ ರಂಗಭೂಮಿ’ ಪುಸ್ತಕದ  ರಚನೆ ಖ್ಯಾತ ರಂಗಕರ್ಮಿ, ಲೇಖಕ, ಚಿಂತಕರಾದ ಕೆ. ವಿ ಅಕ್ಷರ ಅವರ ರಚನೆಯಲ್ಲಿ ಕಾಣಬಹುದು. ಸಾಹಿತಿ, ವಿಮರ್ಶಕ ಗಿರಡ್ಡಿ ಗೋವಿಂದರಾಜರ ಸಂಪಾದಕತ್ವದಲ್ಲಿ ಸಾಹಿತ್ಯ ಪಾರಿಭಾಷಿಕ ಮಾಲೆ ಸರಣಿ ಪ್ರಕಟಣೆಯಲ್ಲಿ ಈ ಪುಸ್ತಕವನ್ನು ಪ್ರಕಟಗೊಳಿಸಲಾಗಿದೆ.

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books