ಎರಡು ಮಹಾಕಾವ್ಯಗಳು

Author : ಎಚ್.ಎಸ್. ಹರಿಶಂಕರ್

Pages 101

₹ 50.00




Year of Publication: 2013

Synopsys

ಡಾ. ಪಾಂಡುರಂಗ ವಾಮನಕಾಣೆ ಧರ್ಮಶಾಸ್ತ್ರದ ಇತಿಹಾಸದಂತಹ ಅತ್ಯುತ್ಕೃಷ್ಟವಾದ ಗ್ರಂಥಗಳನ್ನು ನೀಡಿ ಭಾರತೀಯ ವಿದ್ವಾಂಸರಲ್ಲಿ ರತ್ನಪ್ರಾಯವಾಗಿದ್ದವರು. ಮಹಾಭಾರತ ಮತ್ತು ರಾಮಾಯಣ ಮಹಾ ಕಾವ್ಯಗಳನ್ನು ಕುರಿತು ಪ್ರಬಂಧವನ್ನು ಮಂಡಿಸಿದ್ದಾರೆ.

ಎರಡೂ ಕಾವ್ಯಗಳನ್ನು ಉತ್ತಮ ಮಾನದಂಡದಿಂದ ತೂಗಿದ್ದಾರೆ. ಅವುಗಳಲ್ಲಿ ಪ್ರಾಚೀನವಾದುದು ಯಾವುದು, ಅವುಗಳ ಕರ್ತೃವಿನ ವಿಚಾರ, ಅವುಗಳ ಕಾಲ, ಆ ಕಾಲದ ಸಮಾಜದ ಪರಿಸರ, ಯಾವುದರಿಂದ ಯಾವುದು ಉಪಕೃತವಾಗಿದೆ, ಅವುಗಳ ಬಗೆಗೆ ಬಂದಿರುವ ದೇಶೀಯರ ಹಾಗೂ ವಿದೇಶೀಯರ ಟೀಕೆಗಳನ್ನು ಶಿಸ್ತುಬದ್ಧವಾಗಿ ಪರಿಶೀಲಿಸಿ, ಈ ಎಲ್ಲಾ ಸಂಗತಿಗಳ ಕುರಿತು ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಎಚ್.ಎಸ್. ಹರಿಶಂಕರ್
(08 December 1940)

ಲೇಖಕರಾಗಿ, ಉತ್ತಮ ಭಾಷಾಂತರಕಾರರಾಗಿ ಅದರಲ್ಲೂ ರಷ್ಯನ್ ಭಾಷೆಯಲ್ಲಿ ಪ್ರಭುತ್ವಸಾಧಿಸಿ, ನೇರವಾಗಿ ರಷ್ಯನ್ ಭಾಷೆಯಿಂದಲೇ ಹಲವಾರು ರಷ್ಯನ್ ಕೃತಿಗಳನ್ನು ಅನುವಾದಿಸಿ ಕನ್ನಡಿಗರಿಗೆ ನೀಡಿರುವ ಹರಿಶಂಕರರು ಹುಟ್ಟಿದ್ದು ಹರಿಹರದಲ್ಲಿ. ತಂದೆ ಪ್ರಸಿದ್ಧ ಸಾಹಿತಿಗಳು, ಶಾರದಾಮಂದಿರದ ಪ್ರಕಾಶಕರೂ ಆದ ಎಚ್.ಎಂ. ಶಂಕರನಾರಾಯಣ ರಾಯರು, ತಾಯಿ ಲಕ್ಷ್ಮೀ ದೇವಮ್ಮ. ಹರಿಹರದಲ್ಲಿ ಪ್ರಾರಂಭಿಕ ಶಿಕ್ಷಣ, ದಾವಣಗೆರೆಯ ಡಿ.ಆರ್.ಎಂ ಕಾಲೇಜಿನಲ್ಲಿ. ಇಂಟರ್‌ಮೀಡಿಯಟ್, ಸೀನಿಯರ್ ಇಂಟರ್‌ಮೀಡಿಯಟ್ ಹಾಗೂ ಪದವಿಗಾಗಿ ಓದಿದ್ದು ಮೈಸೂರಿನ ಯುವರಾಜ ಕಾಲೇಜು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಕನ್ನಡ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ರಷ್ಯನ್ ಭಾಷೆ, ಎಂ.ಎ.ಪದವಿಗಳು ಮತ್ತು ಎಂ.ಫಿಲ್ (ಭಾಷಾಂತರ) ಮೈಸೂರು ವಿಶ್ವವಿದ್ಯಾಲಯ; ಡಿಪ್ಲೊಮ ...

READ MORE

Related Books