ಫ್ಲೈಯಿಂಗ್ ಸಾಸರ್‍ಸ್ ಭಾಗ ೧

Author : ಕೆ.ಪಿ. ಪೂರ್ಣಚಂದ್ರ ತೇಜಸ್ವಿ

Pages 100

₹ 87.00




Year of Publication: 2013
Published by: ಪುಸ್ತಕ ಪ್ರಕಾಶನ
Address: 91, 9ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು-570 009
Phone: 0821-2545774, 9448203730

Synopsys

ಹಾರುವ ತಟ್ಟೆಗಳ ರೋಚಕ ಸುದ್ದಿಗಳನ್ನು ಫೈಯಿಂಗ್ ಸಾಸರ್ ಭಾಗ 1 (1993) ಕೃತಿಯಲ್ಲಿ ವಿಶ್ಲೇಷಣಾತ್ಮಕವಾಗಿ ಹೇಳುವ ವೈಜ್ಞಾನಿಕ ಬರವಣಿಗೆ. ಮೊದಲ ದರ್ಜೆಯ ಮುಖಾಮುಖಿ ಮತ್ತು ಎರಡನೆ ದರ್ಜೆಯ ಮುಖಾಮುಖಿ ಎಂದು ಹದಿಮೂರು ಅಧ್ಯಾಯಗಳಲ್ಲಿ ಆ ಕುರಿತ ಘಟನಾವಳಿ, ಸಂಶೋಧನೆ ನಿರೂಪಿಸಿದ್ದಾರೆ. ಖಗೋಳಶಾಸ್ತ್ರಜ್ಞರ ಅನ್ವೇಷಣೆಗಳು ಮತ್ತು ದಾಖಲೆಗಳ ಜೊತೆಯಲ್ಲಿಯೇ ಕಾಲ್ಪನಿಕ ಜಗತ್ತಿನ ಊಹೆಗಳಲ್ಲಿ ಫೈಯಿಂಗ್ ಸಾಸರ್‌ಗಳು ಎಬ್ಬಿಸಿರುವ ಕುತೂಹಲಗಳನ್ನು ಚಿತ್ರಗಳ ಸಮೇತ ವಿವರಿಸಲಾಗಿದೆ.

About the Author

ಕೆ.ಪಿ. ಪೂರ್ಣಚಂದ್ರ ತೇಜಸ್ವಿ
(08 September 1938 - 05 April 2007)

ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ  ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...

READ MORE

Related Books