ಫಾಲೋಯಿಂಗ್ ಫಿಶ್‌

Author : ಸಹನಾ ಹೆಗಡೆ

Pages 240

₹ 220.00




Year of Publication: 2020
Published by: ಛಂದ ಪುಸ್ತಕ
Address: ಐ-004, ಮಂತ್ರಿಪ್ಯಾರಡೈಸ್‌ ಬನ್ನೇರುಘಟ್ಟ ರಸ್ತೆ, ಬೆಂಗಳೂರು-560076
Phone: 9844422782

Synopsys

ಸಮಂತ್ ಸುಬ್ರಮಣಿಯನ್ ಅವರ ಪ್ರವಾಸ ಕಥನ ‘ಫಾಲೋಯಿಂಗ್ ಫಿಶ್’ ಆಂಗ್ಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ -ಲೇಖಕಿ ಸಹನಾ ಹೆಗಡೆ. ಕೃತಿಗೆ ಬೆನ್ನುಡಿ ಬರೆದಿರುವ ರಾಮಚಂದ್ರ ಗುಹಾ  “ಈ ಅನನ್ಯ ಪ್ರವಾಸ ಕಥನವು, ಸೃಜನಶೀಲ ಪರಿಕಲ್ಪನೆ ಮತ್ತು ಕೌಶಲ್ಯಪೂರ್ಣ ನಿರ್ವಹಣೆಯನ್ನು ಹೊಂದಿದೆ. ಭಾರತ ಭೂಖಂಡದಲ್ಲಿ ಮೀನುಗಾರಿಕೆ ಮತ್ತು ಮೀನು ಊಟದ ಕ್ರಮವು ಹೇಗೆ ತನ್ನದೇ ಆದ ಸಂಸ್ಕೃತಿ ಮತ್ತು ಪರಿಸರಗಳನ್ನು ರೂಪಿಸಿದೆ ಎಂಬುದನ್ನು ಈ ಅದ್ಭುತ ಒಳನೋಟಗಳನ್ನುಳ್ಳ ಲೇಖನಗಳ ಮೂಲಕ ಸಮಂತ್ - ಸುಬ್ರಮಣಿಯನ್ ಕಟ್ಟಿ ಕೊಟ್ಟಿದ್ದಾರೆ. ಹಲವಾರು ಭೂಪ್ರದೇಶ ಮತ್ತು ಕರಾವಳಿಗಳ ವೈವಿಧ್ಯಮಯ ಚಿತ್ರಣವನ್ನು ಹೊಂದಿರುವ ಈ ಕೃತಿಯು ಸಮೃದ್ದ ಪಾತ್ರಪ್ರಪಂಚವನ್ನೂ ಒಳಗೊಂಡಿದೆ. ಹದಮೀರದ ಇಲ್ಲಿಯ ಅಭಿರುಚಿಪೂರ್ಣ ಭಾಷೆ ಮತ್ತು ನುಡಿಗಟ್ಟುಗಳು ಘನತೆಯಿಂದ ಕೂಡಿವೆ. ಆಪ್ತ ಭಾವದ ಈ ಬರೆವಣಿಗೆಗೆ ಸಾಕಷ್ಟು ಕೋಮಲತೆಯೂ ಇದೆ” ಎಂದಿದ್ದಾರೆ.

About the Author

ಸಹನಾ ಹೆಗಡೆ

ಸಹನಾ ಹೆಗಡೆ- ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಬಳಿಯ ಕಿಲಾರದವರು. 1967ರಲ್ಲಿ ಜನಿಸಿದ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮ್ಮ ಹಳ್ಳಿಯಲ್ಲಿಯೇ ಮುಗಿಸಿ, ಎಮ್.ಜಿ.ಸಿ ಕಾಲೇಜ್ ಸಿದ್ಧಾಪುರದಿಂದ ಬಿ.ಎ.ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ದೂರಶಿಕ್ಷಣದ ಮೂಲಕ ಕೌನ್ಸೆಲಿಂಗ್ ಮತ್ತು ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಕೆಲವು ಲೇಖನಗಳು, ಕವನಗಳು, ಅನುವಾದಿತ ಕಥೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ...

READ MORE

Conversation

Related Books