ಫ್ರಮ್ ಪುಲ್ವಾಮಾ

Author : ರವಿ ಬೆಳಗೆರೆ

Pages 98

₹ 99.00




Year of Publication: 2019
Published by: ಭಾವನಾ ಪ್ರಕಾಶನ
Address: #2 ಪೆಟ್ರೋಲ್ ಬಂಕ್ ಬಳಿ ಬನಶಂಕರಿ 2ನೇ ಹಂತ,80 ಅಡಿ ರಸ್ತೆ, ಕದಿರೇನಹಳ್ಳಿ, ಪದ್ಮನಾಭನಗರ
Phone: 9448094321

Synopsys

2019ರ ಫೆಬ್ರವರಿ 14ರಂದು ಪುಲ್ವಾಮದಲ್ಲಿ ಉಗ್ರರು ನಡೆಸಿದ ಭಯೋತ್ಪಾದನಾ ದಾಳಿಯಲ್ಲಿ ಕೃತ್ಯಕ್ಕೆ ಅರೆಸೇನಾ ಪಡೆಯ ಯೋಧರು ಹುತಾತ್ಮರಾದರು. ಈ ಘಟನೆಯು ದೇಶ ವಿದೇಶಗಳಲ್ಲಿ ಭಾರಿ ಚರ್ಚೆಗೆ ಗ್ರಾಸ ಒದಗಿಸಿತು. ಪುಲ್ವಾಮ ದಾಳಿಯ ನಂತರ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅಲ್ಲಿಗೆ ನೇರವಾಗಿ ಭೇಟಿ ನೀಡಿ ಘಟನೆಯ ವರದಿ ಮಾಡಿದರು. ಸ್ಥಳಕ್ಕೆ ಹೋಗಿ ವರದಿ ಮಾಡುವುದರ ಜೊತೆಗೆ ಕಾಶ್ಮೀರ ಸಮಸ್ಯೆಯ ಹಿನ್ನೆಲೆಯನ್ನೂ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಭಾರತದ ಉತ್ತರ ತುದಿಯ ಕಾಶ್ಮೀರದಲ್ಲಿನ ತೀವ್ರಗಾಮಿತನ, ಅದಕ್ಕೆ ಕಾರಣವಾದ ರಾಜಕೀಯ ವ್ಯವಸ್ಥೆ, ಅಲ್ಲಿನ ಜನರ ಪ್ರತಿಕ್ರಿಯೆಗಳನ್ನು ದಾಖಲಿಸಿದ್ದಾರೆ.

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Conversation

Related Books