ಜಿ.ಎಚ್. ನಾಯಕ

Author : ವಿಷ್ಣು ನಾಯ್ಕ

Pages 88

₹ 80.00

Buy Now


Year of Publication: 2017
Published by: ನವಕರ್ನಾಟಕ ಪ್ರಕಾಶನ
Address: 15 ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, , ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 2216911

Synopsys

ಈ ಹಿಂದೆಲ್ಲ ಯಾವುದು ಉತ್ತಮ ಬರಹ, ಯಾವುದು ಕೆಟ್ಟ ಬರಹ ಎನ್ನುವುದನ್ನು  ಪತ್ರಿಕೆಯೊಳಗಿನ ಸಂಪಾದಕ ನಿರ್ಧರಿಸುತ್ತಿದ್ದ ಆತ ಪ್ರಬುದ್ದನಲ್ಲದೇ ಇದ್ದರೆ ಕೆಟ್ಟ ಬರಹಗಳು ಆದ್ಯತೆಯನ್ನು ಪಡೆದು, ಒಳ್ಳೆಯ ಬರಹಗಳು ಮೂಲೆಗುಂಪಾಗುತ್ತಿತ್ತು. ಬರಹಗಾರರಿಗೆ ಸಂಪಾದಕನೆಂಬ ದೊಣ್ಣೆನಾಯಕ ಅನಿವಾರ್ಯವಾಗಿತ್ತು. ಇಂದು ಹಾಗಲ್ಲ. ಎಲ್ಲ ಬರಹಗಾರರಿಗೂ ಸಾಮಾಜಿಕ ತಾಣಗಳು ಮುಕ್ತವಾಗಿ ತೆರೆದುಕೊಂಡಿದೆ. ಯಾವ ಬರಹ ಉತ್ತಮ ಎನ್ನುವುದನ್ನು ನೇರವಾಗಿ ಓದುಗನೇ ನಿರ್ಣಯಿಸುತ್ತಿದ್ದಾನೆ. ಇದರಿಂದ ಹೊಸ ಪ್ರತಿಭಾವಂತ ಬರಹಗಾರರು ಹೊರಹೊಮ್ಮುತ್ತಿದ್ದಾರೆ ಮತ್ತು ಓದುಗರಿಗೆ ನೇರವಾಗಿ ಲಭ್ಯವಾಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಾಮಾಜಿಕ ತಾಣದಲ್ಲಿ ಬರೆದದ್ದೆಲ್ಲ ಕತೆ, ಕವಿತೆಗಳಾಗುತ್ತಿವೆ. ಕವಿ, ಕತೆಗಾರರ ಸಂಖ್ಯೆ ಹೆಚ್ಚುತ್ತಿದೆ. ಆದರೆ ವಿಮರ್ಶೆಗಳು ಮೂಲೆಗುಂಪಾಗುತ್ತಿವೆ. ಲೈಕ್‌ಗಳು, ಅನ್‌ಲೈಕ್‌ಗಳು ವಿಮರ್ಶೆಯ ಸ್ಥಾನವನ್ನು ತುಂಬಿಕೊಂಡಿದೆ. ಇಂತಹ ಹೊತ್ತಿನಲ್ಲಿ ಕನ್ನಡದಲ್ಲಿ ಆಗಿ ಹೋಗಿರುವ ಉತ್ತಮ ವಿಮರ್ಶಕರ ಬಗ್ಗೆ ಹೊಸ ತಲೆಮಾರಿನ ಬರಹಗಾರರು ತಿಳಿದುಕೊಳ್ಳುವುದು ಅತ್ಯಗತ್ಯ. ಈ ಉದ್ಧೇಶದಿಂದ  ಹಿರಿಯ ವಿಮರ್ಶಕ ಜಿ. ಎಚ್. ನಾಯಕ ಅವರ ಕುರಿತ ಈ ಕೃತಿ ಮುಖ್ಯವಾಗುತ್ತದೆ.

About the Author

ವಿಷ್ಣು ನಾಯ್ಕ
(01 July 1944)

ವಿಷ್ಣು ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಅಂಬಾರಕೊಡ್ಲದಲ್ಲಿ 1944 ಜುಲೈ 1ರಂದು ಜನಿಸಿದರು. ತಾಯಿ ಬುದವಂತಿ, ತಂದೆ ನಾಗಪ್ಪ. ಅಂಬಾರಕೊಡ್ಲ ಹಾಗೂ ಅಂಕೋಲಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಜಾನಪದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಾಹಿತಿ, ಸಂಪಾದಕ, ಪ್ರಕಾಶಕ, ಸಂಘಟಕ ಹೀಗೆ ಅನೇಕ ಕ್ಷೇತ್ರದಲ್ಲಿ ಕೃಷಿ ಸಾಧಿಸಿದ್ದಾರೆ. ರಾಘವೇಂದ್ರ ಪ್ರಕಾಶನದ ಮಾಲೀಕರು ಆಗಿದ್ದ ಇವರು ಬರೆದ ಪ್ರಮುಖ ಕೃತಿಗಳೆಂದರೆ ಸುಮನ, ಆ ರೀತಿ ಈ ರೀತಿ, ನನ್ನ ಅಂಬಾರಕೊಡಲು, ವಾಸ್ತವ, ಹೊಸಭತ್ತ ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ, ನೋವು ...

READ MORE

Related Books