ಗಾಳಿ ಬೆಳಕು

Author : ನಟರಾಜ ಹುಳಿಯಾರ್

Pages 328

₹ 200.00




Year of Publication: 2019
Published by: ಪಲ್ಲವ ಪ್ರಕಾಶನ
Address: ಪಲ್ಲವ ಪ್ರಕಾಶನ, ಚನ್ನಪಟ್ಟಣ ಪೋಸ್ಟ್, ವಯಾ- ಎಮ್ಮಿಗನೂರು, ಬಳ್ಳಾರಿ-583113
Phone: 9840354507

Synopsys

'ಗಾಳಿ ಬೆಳಕು' - ಓದು ಬರಹ ಸೃಜನಶೀಲತೆ ಜನಪ್ರಿಯ ಸಂಸ್ಕೃತಿ, ರಾಜಕಾರಣ ಕುರಿತ ಕಥನ. ಇದು ನಟರಾಜ್ ಹುಳಿಯಾರ್ ಅವರ ಅಂಕಣಬರಹಗಳ ಸಂಕಲನ. ಈ ಕೃತಿ ಮೊದಲ ಮುದ್ರಣ ಕಂಡಿದ್ದು 2002ರಲ್ಲಿ ಈಗ 2019ರಲ್ಲಿ ಮೂರನೇ ಮುದ್ರಣ ಪ್ರಕಟಗೊಂಡಿದೆ. ನಟರಾಜ್ ಹುಳಿಯಾರ್ ಅವರ ಬರಹಗಳ ಕುರಿತಾಗಿ ಪಿ.ಲಂಕೇಶ್ ಬರೆದಿದ್ದ ಬರಹವನ್ನೇ ಈ ಕೃತಿಯ ಮೊದಲ ಮುದ್ರಣಕ್ಕೆ ಬೆನ್ನುಡಿಯಾಗಿ ಬಳಸಿಕೊಳ್ಳಲಾಗಿತ್ತು. ಮತ್ತೀಗ ಮೂರನೇ ಮುದ್ರಣದಲ್ಲೂ ಅದೇ ಬೆನ್ನುಡಿ ಇದೆ. 

ನಟರಾಜ್ ಹುಳಿಯಾರ್ ಅವರ ಬರಹದ ಒಳನೋಟಗಳನ್ನು ತಮ್ಮದೇ ಸೂಕ್ಷ್ಮ ಗ್ರಹಿಕೆಯಲ್ಲಿ ವಿವರಿಸಿದ್ದ ಲಂಕೇಶ್ ‘ನಟರಾಜ್ ಹುಳಿಯಾರ್ ಈ ಸಲದಿಂದ ತನ್ನ ಗಾಳಿ ಬೆಳಕು ಕಾಲಂ ಶುರು ಮಾಡುತ್ತಿದ್ದಾನೆ, ನಟರಾಜ್ ತುಂಬಾ ಜಾಣ, ನ್ಯಾಯವಂತ, ಸೂಕ್ಷ್ಮ ಬುದ್ಧಿಯವನು ಈ ಅಂಕಣದ ಸವಾಲಿನಲ್ಲಿ ಆತ ಗೆಲ್ಲುತ್ತಾನೆ’ ಎಂದಿದ್ದರು. 

ನಟರಾಜ್ ಅನೇಕ ಕಾರಣಕ್ಕೆ ಎಲ್ಲರ ಕುತೂಹಲ ಕೆರಳಿಸಿರುವ ವ್ಯಕ್ತಿ..ಪುಸ್ತಕದ ಸಂವೇದನೆಯನ್ನು ಪರೀಕ್ಷಿಸಿ ಬೆಲೆ ಕಟ್ಟಬಲ್ಲ ಈತ ಮಹಾ ನಿಷ್ಠುರ ವ್ಯಕ್ತಿ. ಸಾಹಿತಿ ತನ್ನ ಅನುಭವ ನಿಷ್ಠೆ ಮತ್ತು ವಿಪರ್ಯಾಸ ಪ್ರಜ್ಞೆಯನ್ನು ಕಳೆದುಕೊಂಡರೆ ಎಲ್ಲವೂ ಚೀತ್ಕಾರ ಮತ್ತು ಕಾಡುಹರಟೆಯಲ್ಲಿ ಪರ್ಯಾವಸಾನಗೊಳ್ಳುತ್ತದೆ ಎಂಬುದನ್ನು ನಟರಾಜ್ ಅರಿತಿದ್ದಾರೆ. ನಟರಾಜ್ ಎಂಥವನೆಂದು ನೀವೆಲ್ಲ ಬಲ್ಲಿರಿ, ಮಹಾ ಪ್ರೀತಿಯ, ತಮಾಷೆಯ ಈತ ಉಗ್ರ ಪ್ರಾಮಾಣಿಕ ಎಂದಿದ್ದರು ಲಂಕೇಶ್. ಗತದ ಆಳ ಅರಿವಿನೊಂದಿಗೆ ವಾಸ್ತವದ ಕುರಿತು ಸೂಕ್ಷ್ಮವಾಗಿ ಬರೆಯಬಲ್ಲ, ಬದುಕಬಲ್ಲ ನಟರಾಜ್ ಹುಳಿಯಾರ್ ಅವರ ಅನಂತ ನೋಟ ಈ ಕೃತಿಯಲ್ಲಿ ದಕ್ಕಬಹುದು. 

About the Author

ನಟರಾಜ ಹುಳಿಯಾರ್

ಕತೆಗಾರ-ಲೇಖಕ ನಟರಾಜ ಹುಳಿಯಾರ್ ಅವರು ತುಮಕೂರು ಜಿಲ್ಲೆಯ ಹುಳಿಯಾರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಅವರು'ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ. ಮತ್ತೊಬ್ಬ ಸರ್ವಾಧಿಕಾರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು, ಮಾಯಾಕಿನ್ನರಿ (ಕಥಾಸಂಕಲನಗಳು), ರೂಪಕಗಳ ಸಾವು (ಕವಿತೆಗಳು), ಗಾಳಿಬೆಳಕು (ಸಾಂಸ್ಕತಿಕ ಬರಹಗಳು), ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ (ತೌಲನಿಕ ಅಧ್ಯಯನ), ಇಂತಿ ನಮಸ್ಕಾರಗಳು (ಲಂಕೇಶ್‌-ಡಿ.ಆರ್. ನಾಗರಾಜ್ ಕುರಿತ ...

READ MORE

Related Books