ಗಾಲಿಬ್

Author : ಪಂಚಾಕ್ಷರಿ ಹಿರೇಮಠ

Pages 92

₹ 15.00




Year of Publication: 1990
Published by: ಸಾಹಿತ್ಯ ಅಕಾಡೆಮಿ
Address: ರವೀಂದ್ರ ಭವನ, 35, ಫಿರೋಜ ಶಾ ರಸ್ತೆ, ನವದೆಹಲಿ-110001

Synopsys

ಕವಿ ಮಿರ್ಜಾ ಅಸದುಲ್ಲಾಖಾನ್ ಗಾಲಿಬ್ ಕುರಿತು ಎಂ. ಮುಜೀರ್ ಅವರು ಇಂಗ್ಲಿಷಿನಲ್ಲಿ ಬರೆದ (1974ರಲ್ಲಿ) ಕೃತಿಯನ್ನು ಡಾ. ಪಂಚಾಕ್ಷರಿ ಹಿರೇಮಠ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಗಾಲಿಬ್ ನ ಕಾಲ, ವ್ಯಕ್ತಿ, ಕಾವ್ಯ ಸಂಪ್ರದಾಯ, ಕವಿ ಗಾಲಿಬ್, ರೂಪಾಂತರಗಳು -ಹೀಗೆ ವಿವಿಧ ಅಧ್ಯಾಯಗಳಡಿ ಗಾಲಿಬ್ ನ ಬದುಕು-ಬರೆಹ ಒಳಗೊಂಡಂತೆ ಒಟ್ಟು ಜೀವನ ಚಿತ್ರವನ್ನು ಕಟ್ಟಿಕೊಡುವ ಕೃತಿ ಇದು.

ಪಂಚಾಕ್ಷರಿ ಹಿರೇಮಠ ಅವರು ಬಹುಭಾಷಾ ಪಂಡಿತರು. ಅದರಲ್ಲೂ, ಉರ್ದು ಕಲಿತವರು. ಹೀಗಾಗಿ, ಅವರಿಗೆ ಇಂಗ್ಲಿಷಿನ ಈ ಕೃತಿಯ ಅನುವಾದದಲ್ಲಿ ಕಷ್ಟವಾಗಿಲ್ಲ ಮಾತ್ರವಲ್ಲ; ಗಾಲಿಬ್ ನ ಇಡೀ ವ್ಯಕ್ತಿತ್ವದ ಎತ್ತರವನ್ನು, ಕಾವ್ಯದ ತಾತ್ವಿಕ ಸೌಂದರ್ಯವನ್ನು ವಿವರಿಸಲು ಸಾಧ್ಯವಾಯಿತು ಎಂಬುದಕ್ಕೆ ಈ ಕೃತಿಯೇ ಸಾಕ್ಷಿ -ಅಷ್ಟೊಂದು ಸುಂದರ ಅನುವಾದದ ಕೃತಿ ಇದು.

About the Author

ಪಂಚಾಕ್ಷರಿ ಹಿರೇಮಠ
(06 January 1933)

ಪಂಚಾಕ್ಷರಿ ಹಿರೇಮಠ ಅವರು 1933ರ ಜನೆವರಿ 6 ರಂದು ರಾಯಚೂರು ಜಿಲ್ಲೆಯ ಕೊಪ್ಪಳ ತಾಲೂಕಿನ ಬಿಸರಹಳ್ಳಿಯಲ್ಲಿ ಜನಿಸಿದರು. ತಾಯಿ ಬಸಮ್ಮ; ತಂದೆ ವೇದಮೂರ್ತಿ ಮಲಕಯ್ಯ. 2 ವರ್ಷದವರಿದ್ದಾಗ ಪಂಚಾಕ್ಷರಿ ತಮ್ಮ ತಂದೆಯನ್ನು ಕಳೆದುಕೊಂಡರು.  ಬಿಸರಹಳ್ಳಿಯಲ್ಲಿ ಆರಂಭಿಕ ಶಿಕ್ಷಣ, ನಂತರ ಕೊಪ್ಪಳಕ್ಕೆ ಬಂದರು. ಭಾರತ ಸ್ವತಂತ್ರವಾದರೂ ಸಹ ನಿಜಾಮಶಾಹಿ ಆಳ್ವಿಕೆಯಲ್ಲಿದ್ದ ಕೊಪ್ಪಳದಲ್ಲಿ ದಬ್ಬಾಳಿಕೆ ನಡೆದಿತ್ತು. ಸ್ವಾಮಿ ರಮಾನಂದ ತೀರ್ಥರ ಮುಂದಾಳುತ್ವದಲ್ಲಿ  ಹೈ-ಕ ವಿಮೋಚನಾ ಚಳವಳಿ ಆರಂಭವಾಗಿತ್ತು. ವಿಮೋಚನೆಯಾದ ಬಳಿಕ ಬಿಸರಹಳ್ಳಿಗೆ ಮರಳಿದ ಪಂಚಾಕ್ಷರಿ ಅವರು ಕೊಪ್ಪಳ, ಕಲಬುರಗಿ ಸುತ್ತಾಡಿ ಕೊನೆಗೆ ಧಾರವಾಡಕ್ಕೆ ಬಂದರು. ಅವರು ಸ್ವಾಧ್ಯಾಯ ಬಲದಿಂದಲೇ ಸ್ನಾತಕೋತ್ತರ ಪದವಿ ಪಡೆದರು. 1985ರಲ್ಲಿ ಅಮೆರಿಕೆಯ ಅರಿಝೋನಾ ಜಾಗತಿಕ ...

READ MORE

Related Books