ಗಾಲಿಬ್ ಸ್ಮೃತಿ

Author : ಮಲ್ಲಿನಾಥ ಶಿ. ತಳವಾರ

Pages 191

₹ 90.00




Year of Publication: 2020
Published by: ಚಿರುಶ್ರೀ ಪ್ರಕಾಶನ
Address: ಗದಗ

Synopsys

ಕವಿ ಡಾ. ಮಲ್ಲಿನಾಥ ಎಸ್. ತಳವಾರ ಅವರು ಗಾಲಿಬ್ ನ ಪರಿಚಯಾತ್ಮಕ ಬರಹವನ್ನು ಒಳಗೊಂಡಂತೆ ಗಾಲಿಬ್ ನನ್ನು ಉದ್ದೇಶಿಸಿ, ಸಂವಾದ ನಡೆಸಿದಂತೆ ಬರೆದ ಗಜಲ್ ಗಳ ಸಂಕಲನವಿದು. ತಮ್ಮ ಸಂಶಯ, ಅನುಭವ, ಅಭಿಪ್ರಾಯಗಳನ್ನು ಗಾಲಿಬ್ ನೊಂದಿಗೆ ಸಂವಾದಿಸಿ ಪರಿಹರಿಸಿಕೊಳ್ಳುವ ತವಕ-ತುಡಿತ ಕಾಣಬಹುದು. ಆ ಮೂಲಕ, ಗಾಲಿಬ್ ಕಂಡ ಬದುಕು ಹಾಗೂ ಪಡೆದ ಅನುಭವಗಳನ್ನು ಮೆಲುಕು ಹಾಕುವುದು ಇಲ್ಲವೇ ವ್ಯತ್ಯಾಸ ಕಾಣಿಸುವುದು ಇಲ್ಲವೇ ವಿಚಾರಗಳಲ್ಲಿ ವಿಭಿನ್ನತೆಯನ್ನು, ಔನ್ನತ್ಯವನ್ನು ಓದುಗರಿಗೆ ತೋರಿಸುವುದು ಇಲ್ಲಿಯ ಗಜಲ್ ಗಳ ಉದ್ದೇಶ ಎಂಬಂತೆ ಕವಿತೆಗಳ ಧಾಟಿ ಇದೆ. ಕವಿಗಳು ಗಾಲಿಬ್ ನನ್ನು ಒಬ್ಬ ವ್ಯಕ್ತಿಯಾಗಿ, ಕವಿಯಾಗಿ, ಚಿಂತಕರಾಗಿ ಸ್ವೀಕರಿಸಿದ ಮನೋಭಾವದ ಪರಾಕಾಷ್ಠೆಗೆ ಇಲ್ಲಿಯ ಕವನಗಳು ಕನ್ನಡಿ ಹಿಡಿಯುತ್ತವೆ. ಮಾತ್ರವಲ್ಲ; ಗಾಲಿಬ್ ನ ಬದುಕು, ಸಾಹಿತ್ಯಕ ಸಾಧನೆ ಕುರಿತು ಬರೆದ ಸುದೀರ್ಘ ಪ್ರಸ್ತಾವನೆಯೂ ಈ ಕೃತಿಯ ಮೌಲ್ಯ ಹೆಚ್ಚಿಸಿದೆ. ಸಂಕಲನದಲ್ಲಿ 101 ಗಜಲ್ ಗಳಿವೆ. ‘ರತ್ನರಾಯ ಮಲ್ಲ’ ಅಥವಾ ‘ಮಲ್ಲಿ’ ಎಂಬ ಕಾವ್ಯನಾಮದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಗಜಲ್ ಗಳನ್ನು ಬರೆಯುತ್ತಿದ್ದ ಮಲ್ಲಿನಾಥ ಎಸ್. ತಳವಾರ, ಆ ಗಜಲ್ ಗಳನ್ನು ಸಂಕಲಿಸಿದ್ದೇ ಈ ಕೃತಿ. 

ಸಾಹಿತಿ ಪ್ರೊ. ಡಿ. ವಿ ಪರಮಶಿವಮೂರ್ತಿ ಅವರು ಕೃತಿಗೆ ಬೆನ್ನುಡಿ ಬರೆದು ‘ಇಲ್ಲಿಯ ಎಲ್ಲ ಗಜಲ್ ಗಳು ತಮ್ಮ ಮುಗ್ಧತೆಯಿಂದ, ಹರಳುಗಟ್ಟಿದ ಭಾಷೆಯ ಶೈಲಿಯಿಂದ ಮತ್ತು ಲೋಕಾನುಭವದ ಅಭಿವ್ಯಕ್ತಿಯ ರೂಪದಿಂದ ಓದುಗರ ಮನ ಸೆಳೆಯುತ್ತವೆ’ ಎಂದು ಶ್ಲಾಘಿಸಿದ್ದಾರೆ. 

About the Author

ಮಲ್ಲಿನಾಥ ಶಿ. ತಳವಾರ
(11 July 1979)

ಲೇಖಕ ಮಲ್ಲಿನಾಥ ಶಿ. ತಳವಾರ ಅವರು ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರು (ಜನನ: 11-07-1979)  ಗ್ರಾಮದವರು. ಗುಲಬರ್ಗಾ ವಿ.ವಿ.ಯಿಂದ ಎಂ.ಎ. ಬಿ.ಇಡಿ, ಹಾಗೂ  ಹಂಪಿಯ ಕನ್ನಡ ವಿ.ವಿ.ಯಿಂದ ಪಿಎಚ್ ಡಿ (ಕಾರಂತರ ಕಾದಂಬರಿಗಳ ಸ್ತ್ರೀಪ್ರಪಂಚ) ಪದವೀಧರರು.  ಚಿತ್ತಾಪುರದ ಶ್ರೀ ಗಂಗಾ ಪರಮೇಶ್ವರಿ ಡಿ.ಎಡ್ ವಿದ್ಯಾಲಯದಲ್ಲಿ ಉಪನ್ಯಾಸಕರು. ನಂತರ 2009 ರಿಂದ ಕಲಬುರಗಿಯ ನೂತನ ಪದವಿ ವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರು. ರಾವೂರು ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಚಿತ್ತಾಪುರ ತಾಲೂಕು ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಚಿತ್ತಾಪುರ ತಾಲೂಕು ಘಟಕ ಅಧ್ಯಕ್ಷರು, ಕನ್ನಡ ...

READ MORE

Related Books