ಗಾನವಿಹಾರ

Author : ಎ.ಎನ್. ಮೂರ್ತಿರಾವ್

Pages 112

₹ 18.00




Year of Publication: ಡಿ.ವಿ.ಕೆ. ಮೂರ್ತಿ
Published by: 1995
Address: ಕೃಷ್ಣಮೂರ್ತಿಪುರಂ, ಮೈಸೂರು-570004

Synopsys

ಹಿರಿಯ ಲೇಖಕ ಎ.ಎನ್‌. ಮೂರ್ತಿರಾವ್ ಅವರು ಸಂಗೀತದ ಕುರಿತು ಬರೆದ ಲೇಖನಗಳ ಸಂಗ್ರಹ. ಈ ಕೃತಿಯಲ್ಲಿ ಒಟ್ಟು ಎಂಟು ಬರೆಹಗಳಿವೆ. ಅದರಲ್ಲಿ ನಾಲ್ಕು ಬರೆಹಗಳು ವೀಣೆ ಶೇಷಣ್ಣ, ಮೈಸೂರು ವಾಸುದೇವಾಚಾರ್ಯರು, ರಾಳ್ಳಪಲ್ಲಿ ಅನಂತಕೃಷ್ನ ಹಾಗೂ ವೀಣೆ ದೊರೆಸ್ವಾಮಿ ಅಯ್ಯಂಗಾರ್ಯರು ಅವರನ್ನು ಕುರಿತವುಗಳಾಗಿವೆ.

ಸಂಗೀತಜ್ಞಾನಮು ಅರ್ಥವಿನಾ, ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ನಾವು ನಿರೀಕ್ಷಿಸುವುದೇನು?, ಸಂಗೀತದಲ್ಲಿ ಸ್ವಾತಂತ್ರ, ಬಂಧನ ಮತ್ತು ಟೆಂಪೊ, ಗಮಕಕಲೆ ಎಂಬ ಲೇಖನಗಳನ್ನು ಸಂಕಲಿಸಲಾಗಿದೆ.

ಪುಸ್ತಕದ ಕುರಿತು ಲೇಖಕ ಮೂರ್ತಿರಾವ್‌ ಅವರು ’ಸಂಗೀತ ನನಗೆ ಕೊಟ್ಟಿರುವ ಆನಂದ, 'ಮನಃಪ್ರಸಾದ', ಅಳತೆಗೆ ಮೀರಿದ್ದು, ಸುಮಾರು ಎಂಟು ದಶಕಗಳ ಕಾಲ ಶಾಸ್ತ್ರೀಯ ಸಂಗೀತವನ್ನು ಕೇಳುತ್ತ ಬಂದಿದ್ದೇನೆ ; ಆದರೂ ಆ ಲಲಿತತಮ ಕಲೆಯನ್ನು ಕುರಿತಂತೆ , * 'ಶಾಸ್ತ್ರೀಯ' ಎನ್ನಬಹುದಾದ ಜ್ಞಾನವನ್ನು ಸಂಪಾದಿಸಿದ್ದೇನೆಂದು ಹೇಳಲಾರೆ. ಅದಕ್ಕಾಗೆ ಮತ್ತೊಂದು ಜನ್ಮ ಎತ್ತಬೇಕು ಎನ್ನಿಸುತ್ತಿದೆ-ನನಗೆ , ಪುನರ್ಜನ್ಮದಲ್ಲಿ ನಂಬಿಕೆಯಿಲ್ಲವಾದರೂ !

ಒಳ್ಳೆಯ ಸಂಗೀತ ಕಚೇರಿಗಳನ್ನು ಕೇಳಿದಾಗ ನನ್ನ ಮನಸ್ಸಿನಲ್ಲಿ ಸುಳಿದು ಹೋದ ಯೋಚನೆ ಭಾವನೆಗಳನ್ನು ಒಳಗೊಂಡಿವೆ ಈ ಪುಟ್ಟ ಪುಸ್ತಕ ದಲ್ಲಿ ಇರುವ ಲೇಖನಗಳು’ ಎಂದು ಬರೆದಿದ್ದಾರೆ.

About the Author

ಎ.ಎನ್. ಮೂರ್ತಿರಾವ್
(18 June 1900 - 23 August 2003)

ಲಲಿತ ಪ್ರಬಂಧ ಪ್ರಕಾರಕ್ಕೆ ವಿಶೇಷ ಕೊಡುಗೆ ನೀಡಿದ್ದ ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿರಾವ್  ವಿಮರ್ಶಕರೂ ಆಗಿದ್ದರು. ವೈಚಾರಿಕ ಗ್ರಂಥ ‘ದೇವರು’ ಮೂಲಕ ಜನಪ್ರಿಯರಾದ ಮೂರ್ತಿರಾವ್ ಅವರು 1900ರ ಜೂನ್ 18ರಂದು ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳಿನಲ್ಲಿ ಜನಿಸಿದರು. ತಂದೆ ಎಂ.ಸುಬ್ಬರಾವ್ ಮತ್ತು ತಾಯಿ ಪುಟ್ಟಮ್ಮ. ಬಾಲ್ಯದ ದಿನಗಳನ್ನು ಮೇಲುಕೋಟೆ, ನಾಗಮಂಗಲಗಳಲ್ಲಿ ಕಳೆದ ಮೇಲೆ 1913ರಲ್ಲಿ ಮೈಸೂರಲ್ಲಿ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಶಾಲಾ ಶಿಕ್ಷಣ ಮುಗಿಸಿ ಮೈಸೂರು ಮಹಾರಾಜ ಕಾಲೇಜನ್ನು ಸೇರಿದರು. ಬಿ.ಎ. ಪದವಿ (1922), ಎಂ.ಎ. ಪದವಿ (1924) ಪಡೆದರು. ಮಹಾರಾಜ ಕಾಲೇಜಿನಲ್ಲಿ ಟ್ಯೂಟರ್ (1924), ಮೈಸೂರು ವಿಶ್ವವಿದ್ಯಾಲಯದಲ್ಲಿ ...

READ MORE

Related Books