ಗಡಿಪಾರು

Author : ಚಂದ್ರಕಾಂತ ಪೋಕಳೆ

Pages 224

₹ 150.00




Year of Publication: 2011
Published by: ಸೃಷ್ಟಿ ಪಬ್ಲಿಕೇಷನ್ಸ್
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

‘ಗಡಿಪಾರು’  ಕಾದಂಬರಿಯ ಮೂಲ ಮರಾಠಿ ಹೆಸರು ’ರಿಬೋಟ’. ‘Rebound’ ಎಂಬುದಕ್ಕೆ ಮುಂಬೈನ ’ಚಾಳ ಸಂಸ್ಕೃತಿ’ಯು ನೀಡಿದ  ಆಡು ಮಾತಿನ ರೂಪ. ಲೇಖಕರಾದ ಜಿ. ಕೆ. ಐನಾಪುರೆಯವರು ಸಂಕಟ, ದುಃಖದಾಯಕ ಎಂಬ ಉದ್ದೇಶದಿಂದಲೇ ಬಳಸಿದ್ದಾರೆ. ಇದನ್ನು ಕನ್ನಡಕ್ಕೆ ತಂದವರು ಚಂದ್ರಕಾಂತ ಪೋಕಳೆ.

’ಜವಳಿ ಗಿರಣಿಯ ಸಂಪಿನಿಂದಾಗಿ ಗಿರಣಗಾಂವಿನ, ವಿಶೇಷವಾಗಿ ಬಿ.ಡಿ.ಡಿ ಚಾಳಿನ ಸಂಸ್ಕೃತಿಯ ವಿನಾಶ’ ವನ್ನು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ. ಗಿರಣಿ ಕಾರ್ಮಿಕರ  ಬದುಕಿನ ಚಿತ್ರಗಳನ್ನು , ಮಾನವೀಯ ಸಂಬಂಧಗಳ ಕಥೆಯನ್ನೂ ಬಿತ್ತಲಾಗಿದೆ.

ಹಸಿವು ಮತ್ತು ಕಾಮದ ನಿಗೂಢ ಸಂಬಂಧಗಳ ಸೂಕ್ಷ್ಮ ಹುಡುಕಾಟದ ಪ್ರಯತ್ನವನ್ನೂ ಇಲ್ಲಿ ಕಾಣಬಹುದು.  ಈ ಕಾದಂಬರಿಯಲ್ಲಿ ಬರುವ ಸ್ತ್ರೀ ಪಾತ್ರಗಳು ಬದುಕನ್ನು ಎದುರಿಸುವ ರೀತಿ ವಿಭಿನ್ನವಾದುದು.

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books