ಗಗನ ಸಖಿಯರ ಸೆರಗ ಹಿಡಿದು

Author : ನಾಗೇಶ ಹೆಗಡೆ

Pages 124

₹ 95.00




Year of Publication: 2015
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

.`ಗಗನ ಸಖಿಯರ ಸೆರಗ ಹಿಡಿದು’ ಎಂಬುದು ನಾಗೇಶ್ ಹೆಗಡೆ ಅವರ ಪುಸ್ತಕ. ಅದು `ಗಗನ ಸಖಿಯರ’ ಅಲ್ಲ `ಗಗನ ಸಖಿಯ’ ಅಂತ ಬದಲಾಗಬೇಕಿತ್ತು ಎಂದು ಆಕ್ಷೇಪಿಸುತ್ತಾರೆ ನಾಗೇಶ್ ಪತ್ನಿ ರೇಖಾ.

ಪತ್ರಕರ್ತರಾಗಿ ಮಧ್ಯಪ್ರದೇಶ ಮೂಲದ ಹಾಗೂ ಏರ್ ಇಂಡಿಯಾದಲ್ಲಿ ಗಗನಸಖಿಯಾಗಿದ್ದ ರೇಖಾ ಅವರನ್ನು ಬೆಂಗಳೂರಿನಲ್ಲಿ (1983)ಕೇವಲ 8 ಜನ ಪತ್ರಕರ್ತರೆದುರು, 80 ರೂ. ಮೌಲ್ಯದ ತಾಳಿ ಕಟ್ಟಿ ಮದುವೆ ಮಾಡಿಕೊಂಡ ಹಾಗೂ ನಂತರದ ವೃತ್ತಿ ಜೀವನದಲ್ಲಿ ಅನುಭವಿಸಿದ ಸಂಸಾರಿಕ ಯಾನ, ಗಗನಯಾತ್ರಿ ಕೋಟಾದಲ್ಲಿ ಲೇಖಕರು ವಿವಿಧ ದೇಶಗಳನ್ನು ಸುತ್ತುವ ಅವಕಾಶವನ್ನು ಬಳಸಿಕೊಂಡಿದ್ದು ಹೀಗೆ ತಮ್ಮ ವ್ಯಕ್ತಿಗತ ಜೀವನಕ್ಕೆ ಸಾಹಿತ್ಯಕ ಸ್ಪಂದನ ನೀಡಿ ಉತ್ತಮ ಕೃತಿಯಾಗಿಸಿದ್ದು ಈ ಕೃತಿಯ ಹೆಗ್ಗಳಿಕೆ.

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Related Books