ಗಳಗನಾಥ ಮಾಸ್ತರರು

Author : ಶ್ರೀನಿವಾಸ ಹಾವನೂರ

Pages 126

₹ 2.00




Year of Publication: 1971
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 18

Synopsys

‘ಗಳಗನಾಥ ಮಾಸ್ತರರು’ ಕನ್ನಡ ಸಾರ್ವಭೌಮರೆಂದೇ ಪ್ರಸಿದ್ಧರಾದ ಗಳಗನಾಥರ ಜೀವನ ಚರಿತ್ರೆ. ಲೇಖಕ ಶ್ರೀನಿವಾಸ ಹಾವನೂರು ಕೃತಿ ರಚಿಸಿದ್ದಾರೆ. ಗಳಗನಾಥರು ಪರಹಿತ ದೃಷ್ಟಿಯಿಂದ ಕನ್ನಡಕ್ಕಾಗಿ ದುಡಿದು, ನಿರ್ವಾಹವಿಲ್ಲದೆ ಕಾದಂಬರಿ ರಚನೆಗೆ ಕೈಹಾಕಿ, ಅದರಲ್ಲಿ ಸಿದ್ಧಿ ಪಡೆದರು ಎಂಬುದನ್ನು ಈ ಪುಸ್ತಕ ವಿವರವಾಗಿ ತೋರಿಸುತ್ತದೆ.

ನಿಷ್ಠಾವಂತ ಜೀವನವನ್ನು ನಡೆಸಿ, ಪರಮಾರ್ಥ ದೃಷ್ಟಿಯಿಂದ ಕನ್ನಡದ ಸೇವೆ ಸಲ್ಲಿಸಿದ, ಅಗಡಿಯ ಶೇಷಾಚಲ ಸಾಧುಗಳ ಸತ್ ಶಿಷ್ಯರಾದ ಗಳಗನಾಥರು, ಕನ್ನಡಿಗರಿಗೆ ಆದರ್ಶ ಪುರುಷರಾಗಿದ್ದಾರೆ. ಸಾಹಿತ್ಯ ಸೃಷ್ಟಿ ಮತ್ತು ಪ್ರಚಾರದಲ್ಲಿ ಸ್ವಯಂಸೇವಕರಾಗಿ ದುಡಿದು ಸಾಹಿತಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಅವರ ಜೀವನ ಚಿತ್ರಣವೇ ಈ ಕೃತಿ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books