ಗಲ್ಲು ಗಡಿಪಾರು

Author : ರಾಜಶೇಖರ ಮಠಪತಿ (ರಾಗಂ)

Pages 544

₹ 380.00




Published by: ಕಣ್ವ ಪ್ರಕಾಶನ
Phone: 9242121461

Synopsys

ಕಳೆದ ಶತಮಾನದಲ್ಲಿ ರಾಜಕೀಯ ವಿಪ್ಲವಗಳ ನಡುವೆ ಬರಹಗಾರ ಪೆನ್ನೆತ್ತಿದೆನೆಂದರೆ ಒಂದೋ ಆತ ಮರಣದಂಡನೆಯನ್ನು ಎದುರಿಸಬೇಕು. ಅಥವಾ ಗಡಿಪಾರಾಗಲು ಸಿದ್ಧನಾಗಿರಬೇಕು. ಇಂತಹ ಅಗ್ನಿದಿವ್ಯಕ್ಕೆ ತಮ್ಮನ್ನು ಒಡ್ಡಿಕೊಂಡು ದುರಂತವನ್ನಪ್ಪಿಯೂ ಶಾಶ್ವತವಾಗಿ ಉಳಿದ ನೂರು ಲೇಖಕರ ಪರಿಚಯ ಈ ಕೃತಿಯಲ್ಲಿದೆ. ಇತಿಹಾಸದಲ್ಲಿ ಆಗಿ ಹೋದ ಲೇಖಕರಿಂದ ಹಿಡಿದು, ಇತ್ತೀಚಿನ ಲೇಖಕರವರೆಗಿರುವ ಬರಹಗಾರರ ಬದುಕು, ವ್ಯಕ್ತಿತ್ವಗಳನ್ನು ಈ ಕೃತಿಯಲ್ಲಿ ಕುತೂಹಲಕರವಾಗಿ ಚರ್ಚಿಸಲಾಗಿದೆ.

About the Author

ರಾಜಶೇಖರ ಮಠಪತಿ (ರಾಗಂ)

ಸಾಹಿತಿ, ಚಿಂತಕ, ಕನ್ನಡ ಸಾಹಿತ್ಯ ಆಕಾಡೆಮಿ ಸದಸ್ಯರಾದ  ರಾಜಶೇಖರ ಮಠಪತಿ (ರಾಗಂ) ಅವರು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ತೆಲಸಂಗದಲ್ಲಿ. ಕರ್ನಾಟಕದ ಗಡಿಯ ಊರಾದ ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವದ ಶಿಕ್ಷಣ, ನಂತರ ಬಿಜಾಪೂರ ಮತ್ತು ಸೊಲ್ಲಾಪುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ಕ.ವಿ.ವಿ ಧಾರವಾಡದಿಂದ ಆಂಗ್ಲ ಸಾಹಿತಿ, ಸಿನಿಮಾ ನಿರ್ದೇಶಕ,ಪತ್ರಕರ್ತ, ಕೆ.ಎ.ಅಬ್ಬಾಸರನ್ನು ಕುರಿತು ಪಿ.ಹೆಚ್.ಡಿ - ಹೀಗೆ ಶೈಕ್ಷಣಿಕ ಬದುಕಿನ ಹಲವು ಹಂತಗಳನ್ನು ಗಳಿಸಿದ್ದಾರೆ. ಇದುವರೆಗೆ ಅವರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಕೃತಿಗಳ ಸಂಖ್ಯೆ ಅರವತ್ತು ಅಂಕಿಯನ್ನು ದಾಟುತ್ತದೆ. ಕಾವ್ಯ, ಕತೆ, ನಾಟಕ, ಪ್ರಬಂಧ, ಅಂಕಣ, ಸಂಶೋಧನೆ, ...

READ MORE

Related Books