ಗಮಕ ಸಂಗತಿ

Author : ಸವಿತಾ ಸಿರಗೋಜಿ

Pages 120

₹ 100.00




Year of Publication: 2019
Published by: ಬಸವ ಪ್ರಕಾಶನ
Address: ಮುಖ್ಯಬೀದಿ, ಕಲಬುರಗಿ- 585101

Synopsys

‘ಗಮಕ ಸಂಗತಿ’ ಸವಿತಾ ಸಿರಗೋಜಿ ಅವರ ಸಂಶೋಧನಾತ್ಮಕ ಕೃತಿ. ಗಮಕ ಕಲೆಯ ಬಗ್ಗೆ ಸಂಶೋಧನಾತ್ಮಕ ಲೇಖನಗಳು ಕೃತಿಯಲ್ಲಿವೆ. ಗಮಕಕಲೆಯ ಉಗಮ ಸ್ಥಾನದಲ್ಲಿ ಸ್ಫೂರ್ತಿ ಉಕ್ಕೇರಬೇಕು, ಗಮಕ ಸಾಹಿತ್ಯ ಕುರಿತು ಒಂದಿಷ್ಟು, ಶಾಸನಗಳಲ್ಲಿ ಗಮಕ ವಿಚಾರ, ಗಮಕದ ವಿಧಗಳು, ಗಮಕಿ, ವ್ಯಾಖ್ಯಾನ, ಸಾಮಾಜಿಕ ಜೀವನ:ಗಮಕಕಲೆ, ಗಮಕದ ಮಹತ್ತ್ವ ಮತ್ತು ಪರಿಣಾಮ, ಗಮಕದಿಂದಲೇ ಕಾವ್ಯಾರ್ಥ ಸಿದ್ದಿ, ಗಮಕ ಹಬ್ಬಗಳ ಸಾಂಸ್ಕೃತಿಕ ಹಿನ್ನೆಲೆ, ಗಮಕದ ಝಲಕು : ಜೀವನೋಲ್ಲಾಸ, ಹೈಮವತಮ್ಮನವರ ಶಬರಿ ಕಾವ್ಯ, ಗಮಕ ಶಾರದೆ, ಅಖಿಲ ಕರ್ನಾಟಕ ಮಕ್ಕಳ ತೃತೀಯ ಗಮಕ ಸಮ್ಮೇಳನ: ಒಂದು ನೋಟ, ಸಗರನಾಡಿನಲ್ಲಿ ಗಮಕ ಕಲೆ, ಕಲಬುರಗಿ ಜಿಲ್ಲೆಯ ಗಮಕವಾಹಿನಿ - ಒಂದು ವರದಿ ಸೇರಿದಂತೆ ಹಲವು ಸಂಶೋಧನಾತ್ಮಕ ಲೇಖನಗಳಿವೆ.

About the Author

ಸವಿತಾ ಸಿರಗೋಜಿ
(05 September 1968)

ಸವಿತಾ ಸಿರಗೋಜಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಸುರಪುರದವರು. ತಂದೆ- ವೀರಣ್ಣ, ತಾಯಿ- ಮಾಣಿಕ್ಯಬಾಯಿ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು ಶೃಂಗಾರ ಶಾಯಿರಿಗಳು (ಕವನ ಸಂಕಲನ), ಮಹಾವೀರ(ಜೀವನ ಚರಿತ್ರೆ), ಎಂ.ಪಿ.ಜಾಲಿ (ವ್ಯಕ್ತಿ ಚಿತ್ರಣ), ಕುಂಭಕರ್ಣನ ಒಕ್ಕಲು(ಲಲಿತ ಪ್ರಬಂಧ) ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.  ...

READ MORE

Related Books