ಗಾಂಧಿ

Author : ರಾಜಶೇಖರ ಮಠಪತಿ (ರಾಗಂ)

Pages 492

₹ 350.00




Year of Publication: 2015
Published by: ಕಣ್ವ ಪ್ರಕಾಶನ
Address: #.777, ನೆಲಮಹಡಿ, 7 ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಎಂ.ಸಿ. ಬಡಾವಣೆ, ವಿಜಯನಗರ, ಬೆಂಗಳೂರು-560040
Phone: 080 2342 6778

Synopsys

ಗಾಂಧಿ- ಲೇಖಕ ರಾಜಶೇಖರ ಮಠಪತಿ (ರಾಗಂ) ಅವರ ಬರಹಗಳ ಕೃತಿ. ಯಾರ ವಿರುದ್ಧ ನಾನು ಹೋರಾಡಲಿ ? ಎಂಬ ಉಪಶೀರ್ಷಿಕೆಯೊಂದಿಗೆ ಮಹಾತ್ಮ ಗಾಂಧೀಜಿಯವರ ನಾಯಕತ್ವದ ಮೇರು ಎತ್ತರವನ್ನು, ಸಂಘಟನಾತ್ಮಕ ಶಕ್ತಿಯನ್ನು, ಮಾತಿನ ಮೋಹಕತೆಯನ್ನು, ದೇಶಾಭಿಮಾನವನ್ನು, ಸರ್ವಧರ್ಮ ಪ್ರೀತಿಯನ್ನು ತೋರುವುದು ಈ ಕೃತಿಯ ಉದ್ದೇಶ. ಮಹಾತ್ಮ ಗಾಂಧೀಜಿ ಅವರೊಂದಿಗೆ ಜಗಳವಾಡಲು ಅಸಾಧ್ಯ. ಅವರ ನಡೆ ಮಾದರಿ, ಅನುಕರಣೀಯ. ಅಂತಹ ವ್ಯಕ್ತಿತ್ವ ಅವರದು ಎಂಬ ಅರ್ಥದಲ್ಲಿ ಈ ಕೃತಿಯು ಭಾವವನ್ನು ಒಳಗೊಂಡಿದೆ.

About the Author

ರಾಜಶೇಖರ ಮಠಪತಿ (ರಾಗಂ)

ಸಾಹಿತಿ, ಚಿಂತಕ, ಕನ್ನಡ ಸಾಹಿತ್ಯ ಆಕಾಡೆಮಿ ಸದಸ್ಯರಾದ  ರಾಜಶೇಖರ ಮಠಪತಿ (ರಾಗಂ) ಅವರು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ತೆಲಸಂಗದಲ್ಲಿ. ಕರ್ನಾಟಕದ ಗಡಿಯ ಊರಾದ ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವದ ಶಿಕ್ಷಣ, ನಂತರ ಬಿಜಾಪೂರ ಮತ್ತು ಸೊಲ್ಲಾಪುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ಕ.ವಿ.ವಿ ಧಾರವಾಡದಿಂದ ಆಂಗ್ಲ ಸಾಹಿತಿ, ಸಿನಿಮಾ ನಿರ್ದೇಶಕ,ಪತ್ರಕರ್ತ, ಕೆ.ಎ.ಅಬ್ಬಾಸರನ್ನು ಕುರಿತು ಪಿ.ಹೆಚ್.ಡಿ - ಹೀಗೆ ಶೈಕ್ಷಣಿಕ ಬದುಕಿನ ಹಲವು ಹಂತಗಳನ್ನು ಗಳಿಸಿದ್ದಾರೆ. ಇದುವರೆಗೆ ಅವರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಕೃತಿಗಳ ಸಂಖ್ಯೆ ಅರವತ್ತು ಅಂಕಿಯನ್ನು ದಾಟುತ್ತದೆ. ಕಾವ್ಯ, ಕತೆ, ನಾಟಕ, ಪ್ರಬಂಧ, ಅಂಕಣ, ಸಂಶೋಧನೆ, ...

READ MORE

Related Books