ಗಾಂಧೀಜಿ: ವ್ಯಕ್ತಿತ್ವ ಮತ್ತು ಜೀವನಧ್ಯೇಯ

Author : ನೀಲತ್ತಹಳ್ಳಿ ಕಸ್ತೂರಿ

Pages 60

₹ 10.00




Year of Publication: 2010
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು

Synopsys

ಗಾಂಧೀಜಿಯವರ ಗಗನಸದೃಶವಾದ ವ್ಯಕ್ತಿತ್ವವನ್ನು ಅವರನ್ನು ಹತ್ತಿರದಿಂದ ಬಲ್ಲ ನಿರ್ಮಲ್ ಕುಮಾರ್ ಬೋಸ್ ಅವರು ಸಂಕ್ಷೇಪವಾಗಿ ಆದರೆ ಪೂರ್ಣವಾಗಿ ಗಾಂಧೀಜಿಯವರ ವ್ಯಕ್ತಿತ್ವ, ಸತ್ಯಾಗ್ರಹ ಮತ್ತು ಯುದ್ಧ, ಹಾಗೂ ಭಾರತದಲ್ಲಿನ ಅವರ ಕಾರ್ಯಗಳು ಎಂಬ ತಮ್ಮ ಮೂರು ಭಾಷಣಗಳಲ್ಲಿ ನಮಗೆ ಸ್ಪಷ್ಟವಾಗಿ ಕಟ್ಟಿಕೊಟ್ಟಿದ್ದಾರೆ. ಗಾಂಧಿಜೀಯವರ ವಿಚಾರಧಾರೆಯನ್ನು ಸಂಪೂರ್ಣವಾಗಿ ಒಪ್ಪದವರೂ ಅವರ ವ್ಯಕ್ತಿತ್ವಕ್ಕೆ ಹೇಗೆ ಶರಣಾಗಿ ದೇಶದ ಕೆಲಸದಲ್ಲಿ ಹೇಗೆ ತೊಡಗಿಕೊಂಡರು, ಗಾಂಧಿಯವರು ಹೇಗೆ ಜನರನ್ನು ದೇಶದ ಹಿತಕ್ಕಾಗಿ ಪಾಲ್ಗೊಳ್ಳುವಂತೆ ಮಾಡುತ್ತಿದ್ದರು, ಅವರ ಶಿಸ್ತು, ವಯಸ್ಸನ್ನೂ ಮರೆತು ಅವರು ಕೆಲಸಮಾಡುತ್ತಿದ್ದರು ಈ ಸಂಗತಿಗಳು ಕುರಿತ ಮಾಹಿತಿಗಳು ಈ ಕೃತಿಯಲ್ಲಿ ಲಭ್ಯವಾಗಲಿದೆ.ಈ ಕೃತಿಯನ್ನು ನೀಲತ್ತಹಳ್ಳಿ ಕಸ್ತೂರಿ ಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

About the Author

ನೀಲತ್ತಹಳ್ಳಿ ಕಸ್ತೂರಿ
(29 September 1931)

ನೀಲತ್ತಹಳ್ಳಿ ಕಸ್ತೂರಿಯವರು ಮಾಗಡಿಯಲ್ಲಿ ಸೆಪ್ಟೆಂಬರ್ 29, 1931ರಂದು ಜನಿಸಿದರು. ತಂದೆ ವೆಂಕಟಾಚಾರ್ಯ, ತಾಯಿ ಸೀತಮ್ಮ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಅವರೊಬ್ಬ ಉತ್ತಮ ಅನುವಾದಕರು. ಚೀನಾ ಜಪಾನ್ ಕತೆಗಳು (ಅನುವಾದ) (ಕಾದಂಬರಿ), ಇದು ಭಾರತದ ದಾರಿ (ನಾಟಕ) ರಾಜೇಂದ್ರ ಪ್ರಸಾದ್, ಡಿ.ವಿ. ಗುಂಡಪ್ಪ ಜೀವನ ಮತ್ತು ಸಾಧನೆ, ಸಿದ್ಧವನಹಳ್ಳಿ ಕೃಷ್ಣಶರ್ಮ - ವ್ಯಕ್ತಿ ಮತ್ತು ಶಕ್ತಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. ...

READ MORE

Related Books