ಗಂಗವ್ವ ಮತ್ತು ಗಂಗಾಮಾಯಿ

Author : ಶಂಕರ್ ಮೊಕಾಶಿ ಪುಣೇಕರ್

Pages 327

₹ 3.00
Year of Publication: 1956
Published by: ಮನೋಹರ ಗ್ರಂಥ ಪ್ರಕಾಶನ ಸಮಿತಿ
Address: ಧಾರವಾಡ

Synopsys

ಲೇಖಕ ಶಂಕರ ಮೊಕಾಶಿ ಪುಣೇಕರ್ ಅವರ ಕಾದಂಬರಿ-ಗಂಗವ್ವ ಮತ್ತು ಗಂಗಾಮಾಯಿ. ಇದರ ಮೊದಲ ಅಧ್ಯಾಯವು ಕರ್ನಾಟಕದ ಕಾಲೇಜಿನ ಮಿಸಲೆನಿಯಲ್ಲಿ ಕಥಾರೂಪವಾಗಿ (1948) ಪ್ರಕಟವಾಯಿತು. ನಂತರ ಮುಂದಿನ -3-4 ಅಧ್ಯಾಯಗಳನ್ನು ಬರೆದಿದ್ದಾಗಿ ಲೇಖಕರು ಸ್ಪಷ್ಟಪಡಿಸಿದ್ದಾರೆ.

ಮುನ್ನುಡಿ ಬರೆದ ವಿಮರ್ಶಕ ಕೆ.ಡಿ.ಕುರ್ತಕೋಟಿ ‘ ಕಾದಂಬರಿಯ ಶೈಲಿಯು ವೈವಿಧ್ಯಮಯವಾಗಿದೆ. ಶ್ರೇಷ್ಠ ಸಂಭಾಷಣೆಗಳಿವೆ. ಎಲ್ಲಿಯೂ ಭಾಷೆ ಅನಗತ್ಯವಾಗಿ ಅಲಂಕಾರಿಕವಾಗಿಲ್ಲ. ಇಡೀ ಕಾದಂಬರಿಯಲ್ಲಿ ಪ್ರಕೃತಿ ವರ್ಣನೆಗಾಗಲಿ, ವಿಷಯಾಂತರದ ಜಾದೂಗಾರಿಕೆಗಾಗಲಿ ಅವಕಾಶವಿಲ್ಲ. ಉತ್ತರ ಕರ್ನಾಟಕದ ಮಾತಿನ ಬಳಕೆಯೇ ಹೆಚ್ಚಾಗಿದೆ. ನಯ-ನಾಜೂಕು ಕುಸುರಿನ ಕೆಲಸ, ಭಾಷೆಯ ಇಂಪು-ಸೊಂಪು ಹೆಚ್ಚಾಗಿ ಕಾಣುವುದಿಲ್ಲ. ಆದರೆ, ಉತ್ಕಟ ಸನ್ನಿವೇಶದಲ್ಲಿ ಶೈಲಿ ಕಾವ್ಯದ ಕಾವಿನಿಂದ ಆವೇಶಗೊಳ್ಳುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಕನ್ನಡ ಸಮ್ಮೇಳನದ ಸಾಹಿತ್ಯ ಮಾಲೆಯಡಿ 2018ರಲ್ಲಿ ಈ ಕಾದಂಬರಿಯನ್ನು ಕರ್ನಾಟಕ ಸರ್ಕಾರ ಪ್ರಕಟಿಸಿದೆ.

About the Author

ಶಂಕರ್ ಮೊಕಾಶಿ ಪುಣೇಕರ್
(08 May 1928 - 11 August 2004)

ಶಂಕರ ಮೊಕಾಶಿ ಪುಣೇಕರ ಅವರು ಹುಟ್ಟಿದ್ದು 1928, ಧಾರವಾಡದಲ್ಲಿ. ಅಲ್ಲಿಯೇ ತಮ್ಮ ಶಿಕ್ಷಣವನ್ನು ಮುಗಿಸಿದರು. ಬಿ.ಎ.ಪದವಿ ಮುಗಿದ ನಂತರ ನಾಲ್ಕು ವರ್ಷಗಳ ಕಾಲ ವಿಜಾಪುರ, ಕಾರವಾರ, ಧಾರವಾಡಗಳಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂ.ಎ.ಪದವಿ ಮತ್ತು ಪಿಎಚ್.ಡಿ ಪದವಿಯನ್ನು ಪಡೆದರು. ಬೆಳಗಾವಿಯ ಆರ್.ಪಿ.ಡಿ.ಕಾಲೇಜು, ಲಿಂಗರಾಜ ಕಾಲೇಜು, ಮುಂಬಯಿಯ ಕೆ.ಸಿ.ಕಾಲೇಜು, ಐ.ಐ.ಟಿಗಳಲ್ಲಿ ಅಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. 1988ರಲ್ಲಿ ನಿವೃತ್ತಿಯ ನಂತರ ಮೂರು ವರ್ಷಗಳ ಕಾಲ ಶ್ರೀ ಸತ್ಯಸಾಯಿಬಾಬಾ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.  ಕನ್ನಡ ಮತ್ತು ಇಂಗ್ಲಿಷ್ ...

READ MORE

Related Books