ಗರೂಡ ಸದಾಶಿವ ರಾವ್

Author : ಹ.ವೆಂ. ಸೀತಾರಾಮಯ್ಯ

Pages 102

₹ 15.00




Year of Publication: 1976
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ಗರೂಡ ಸದಾಶಿವ ರಾವ್ ಅವರ ಜೀವನಚರಿತ್ರೆಯ ಪುಸ್ತಕವಿದು. ಲೇಖಕ ಹ.ವೆಂ. ಸೀತಾರಾಮಯ್ಯ ಅವರು ರಚಿಸಿದ್ದಾರೆ. ಕನ್ನಡನಾಡಿನ ಶ್ರೇಷ್ಠ ನಟರು. ರಂಗಭೂಮಿ ಎಂದರೆ ದೇವಾಲಯ ಎಂಬ ಭಾವನೆಯಿಂದ ಸೇವೆ ಸಲ್ಲಿಸಿದರು. ಸಂಗೀತ, ಹಾಸ್ಯಗಳಿಗಾಗಿಯೇ ನಾಟಕ ಎಂಬ ಭಾವನೆ ಇದ್ದ ಕಾಲದಲ್ಲಿ ನಾಟಕಕ್ಕೆ ಕಲಾತ್ಮಕ ರೂಪಕೊಟ್ಟರು. ದೇಶ ಗುಲಾಮಗಿರಿಯಲ್ಲಿದ್ದಾಗ ಜನರಲ್ಲಿ ಸ್ವಾತಂತ್ರ್ಯ ಪ್ರೇಮವನ್ನು ಎಚ್ಚರಿಸಲು ನಾಟಕವನ್ನು ಬಳಸಿದರು. ಎಂದು ಗರೂಡ ಸದಾಶಿವ ರಾವ್ ಅವರ ಬಗೆಗೆ ಈ ಕೃತಿಯಲ್ಲಿ ವಿವರಿಸಲಾಗಿದೆ. ನಾಟಕಕ್ಕಾಗಿ ದುಡಿದ ಬಗೆ, ಜೀವನದ ತಿರುವುಗಳು, ನಾಟಕಗಳಲ್ಲಿ ಸ್ವಾತಂತ್ಯ ಪ್ರೇಮವನ್ನು ತಂದ ಬಗೆ ...ಹೀಗೆ ಅವರ ಜೀವನದ ಪ್ರಮುಖ ಘಟ್ಟಗಳನ್ನು ಲೇಖಕರು ಈ ಕೃತಿಯಲ್ಲಿ ವಿವಿಧ ಆಯಾಮಗಳಿಂದ ಹೊರತಂದಿದ್ದಾರೆ.

About the Author

ಹ.ವೆಂ. ಸೀತಾರಾಮಯ್ಯ

ಪತ್ರಕರ್ತ, ಸಾಹಿತಿ ಹ.ವೆಂ. ಸೀತಾರಾಮಯ್ಯ ಅವರು ಕಾದಂಬರಿಗಳು ಹೆಚ್ಚು ಜನಪ್ರಿಯವಾಗಿದ್ದ ಕಾಲದಲ್ಲಿ ಜೀವನ ಚರಿತ್ರೆಗಳನ್ನು ಓದುಗರಿಗೆ ಪರಿಚಯಿಸಿದವರು. ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ ಕುರಿತು ಕೆಲಸ ಮಾಡಿದ ಸಾಧಕರ ಜೀವನ ಚರಿತ್ರೆಗಳ ರಚನೆಯ ಮೂಲಕ ವಿಶಿಷ್ಠ ವ್ಯಕ್ತಿಗಳ ಬದುಕು-ಸಾಧನೆಗಳನ್ನು ಪರಿಚಯಿಸಿದವರು. ಇವರು ಕರ್ನಾಟಕ ರಂಗಭೂಮಿ ಎಂಬ ಉದ್ಗ್ರಂಥವನ್ನೂ, ಇದು ನನ್ನ ಕಥೆ, ಅಭಿನಯ ಶಾರದೆ, ಪ್ರತಿಭಾನ್ವಿತರು ಎಂಬ ಕಿರುಕೃತಿಗಳನ್ನೂ ರಚಿಸಿದ್ದಾರೆ.. ...

READ MORE

Related Books