ಗಯ್ಯಾಳಿಯನ್ನು ಪಳಗಿಸುವುದು

Author : ಜಿ.ಎಂ. ಕೃಷ್ಣಮೂರ್ತಿ

₹ 55.00




Year of Publication: 2017
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-560001
Phone: 08040114455

Synopsys

`The taming of the shrew' ಶೇಕ್ಸ್ ಪಿಯರ್ ನ ಈ ನಾಟಕವನ್ನು ಮಕ್ಕಳಿಗೆ ತಿಳಿಯುವ ಹಾಗೆ ಸಣ್ಣ ವೃತ್ತಾಂತ ರೂಪದಲ್ಲಿ ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರ ರಚಿಸಿದ ನಾಟಕವಿದು. ಶೆಕ್ಸ್ ಪಿಯರ್ ಮಕ್ಕಳ ಕಥಾಲೋಕ ಸರಣಿಯಡಿ ಈ ಕೃತಿ ಪ್ರಕಟಿಸಿದೆ. ಶೆಕ್ಸ್ ಪಿಯರ್ ನ ಅತ್ಯಂತ ಪ್ರಸಿದ್ಧಿಯ ವೈನೋದಿಕ ನಾಟಕವಿದು. ಶ್ರೀಮಂತನ ಮಗಳು ಅತ್ಯಂತ ಸಿಡುಕಿನ ಸ್ವಭಾವದವಳು. ಆಕೆಯೇ ನಾಟಕದ ಕೇಂದ್ರ. ಈಕೆಯ ಸಿಡಿಮಿಡಿಯ ಸ್ವಭಾವದಿಂದ ಯಾರೂ ಮದುವೆಯಾಗುವುದಿಲ್ಲ ಎಂದು ಸ್ವತಃ ತಂದೆಯೇ ತಿಳಿದುಕೊಂಡಿರುತ್ತಾನೆ. ಆದರೆ, ಮತ್ತೊಬ್ಬ ಶ್ರೀಮಂತ ಈಕೆಯನ್ನು ಮದುವೆಯಾಗುತ್ತಾನೆ. ಅಲ್ಲದೇ, ಆಕೆಯ ವರ್ತನೆಗಳಲ್ಲೂ ಬದಲಾವಣೆ ತರುತ್ತಾನೆ ಎಂಬುದು ಈ ನಾಟಕದ ವಸ್ತು. ಮಕ್ಕಳು ತಾವೇ ಓದಿಕೊಳ್ಳಬಹುದಾದಷ್ಟು ಸರಳ ಭಾಷೆಯ ಈ ನಾಟಕವನ್ನು ಪಾಲಕರೂ-ಶಿಕ್ಷಕರೂ ಓದಿ, ಮಕ್ಕಳಿಗೆ ಒಟ್ಟು ನಾಟಕದ ಸಾರವನ್ನು ಮನದಟ್ಟಾಗುವಂತೆ ಮಾಡಬಹುದು.

About the Author

ಜಿ.ಎಂ. ಕೃಷ್ಣಮೂರ್ತಿ

ಜಿ.ಎಂ. ಕೃಷ್ಣಮೂರ್ತಿ ಅವರು ಹಿರಿಯ ಲೇಖಕರು, ಅನುವಾದಕರು ಹಾಗೂ ವಿಮರ್ಶಕರು ಆಗಿದ್ದಾರೆ. ಮಹಾಭಾರತದ ಪ್ರಸಿದ್ಧ ಪಾತ್ರಗಳಾದ, ಪಿತಾಮಹ ಭೀಷ್ಮ, ಬಲ ಭೀಮಸೇನ, ಛಲಗಾರ ದುರ್‍ಯೋಧನ, ವೀರ ಅರ್ಜುನ, ಪಾಂಡವ ಪಟ್ಟಮಹಿಷಿ ದ್ರೌಪದಿ, ದಾನಶೂರ ಕರ್ಣ, ಸೂತ್ರಧಾರ ಶ್ರೀ ಕೃಷ್ಣ, ಶೋಕತಪ್ತ ತಾಯಿಕುಂತಿ, ಕುರುಡುದೊರೆ ಧೃತರಾಷ್ಟ್ರ, ಹಿರಿಯಪಾಂಡವ ಧರ್ಮರಾಯರ ಕುರಿತು ಸಾಹಿತ್ಯವನ್ನು ರಚಿಸಿದ್ದಾರೆ. ವಿಜ್ಞಾನ ವಿಚಾರಗಳ ಕುರಿತು ಲೇಖನಗಳನ್ನು ಬರೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದಾರೆ. ಕೃತಿಗಳು: ಸ್ವಂತ ಉದ್ಯಮ ಆರಂಭಿಸುವುದು ಹೇಗೆ? ಭಗವಾನ ಬುದ್ಧ, ವಿಜ್ಞಾನ ವಿಶ್ವಕೋಶ, ಮಕ್ಕಳ ವಿಶ್ವ ಜ್ಞಾನ ಕೋಶ (ಸರಣಿಗಳು),  ಜನಪದ ಸಂಸ್ಕೃತಿಯ ಮಹಾ ...

READ MORE

Related Books