ಗೀ ಗೀ ಗಾರುಡಿಗ ಕಡಣಿ ಕಲ್ಲಪ್ಪ

Author : ರಮೇಶ ಎಸ್.ಕತ್ತಿ

Pages 112

₹ 90.00




Year of Publication: 2018
Published by: ಬೆರಗು ಪ್ರಕಾಶನ
Address: ಡಾ.ರಮೇಶ ಎಸ್.ಕತ್ತಿ , ವಿನಾಯಕ ನಗರ, ಆಲಮೇಲ-586202, ಜಿಲ್ಲೆ ವಿಜಯಪುರ
Phone: 7795341335

Synopsys

ಲೇಖಕ ಡಾ. ರಮೇಶ್ ಎಸ್. ಕತ್ತಿ ಅವರ ಕೃತಿ-ಗೀ ಗೀ ಗಾರುಡಿಗ ದಿ. ಕಡಣಿ ಕಲ್ಲಪ್ಪ. ಸಾವಿರಾರು ಗೀ ಗೀ ಪದಗಳನ್ನು ಹಾಡುವ ಮೂಲಕ ಜನಪದ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಲೇ ಬಂದ ಅಸಂಖ್ಯ ಜನರ ಪೈಕಿ ಕಡಣಿ ಕಲ್ಲಪ್ಪ ಒಬ್ಬರು. ಉತ್ತರ ಕರ್ನಾಟಕ ಪ್ರದೇಶದಲ್ಲಿ ಗೀ ಗೀ ಗಾಯನ ಕ್ಷೇತ್ರದಲ್ಲಿ ಕಡಣಿ ಕಲ್ಲಪ್ಪ ಅವರ ಹೆಸರು ಪ್ರಸಿದ್ಧಿ. ಸ್ವತಃ ಗೀ ಗೀ ಪದಗಳನ್ನು ಕಟ್ಟಿ ಹಾಡುತ್ತಿದ್ದ ಇವರ ಕುರಿತು ಲೇಖಕರು ಬರೆದ ಕೃತಿ ಇದು. 

About the Author

ರಮೇಶ ಎಸ್.ಕತ್ತಿ
(28 August 1978)

ಡಾ. ರಮೇಶ ಎಸ್. ಕತ್ತಿ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದವರು. ಅಪ್ಪ: ಸಿದ್ದಣ್ಣ ಅವ್ವ:  ಮಹಾದೇವಿ. (ಜನನ: 28.08.1978 ). ಕಡಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಸಿಂದಗಿಯಲ್ಲಿ ಬಿ.ಎ. ಪದವಿ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿ.ವಿ.ಯಿಂದ ಎಂ.ಎ, ಹಾಗೂ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬಿ.ಇಡಿ, ಪದವೀಧರರು. ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಹವ್ಯಾಸಿ ಪತ್ರಕರ್ತರು. ಅವಿಭಜಿತ ಸಿಂದಗಿ ತಾಲೂಕಿನ ಆಲಮೇಲದಲ್ಲಿ (ಈಗ ತಾಲೂಕು ಕೇಂದ್ರ) ವಾಸವಾಗಿದ್ದು, ‘ವಿಜಯಪುರ ಜಿಲ್ಲೆಯ ಸಣ್ಣ ಕತೆಗಳು’ ವಿಷಯವಾಗಿ ಗುಲಬರ್ಗಾ ವಿ.ವಿ. ಯಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ದೊರೆತಿದೆ.   ಕೃತಿಗಳು : ಕಾಮಸ್ವರ್ಗದ ಹಾದಿ ಹಿಡಿದು, ಏನನ್ನೂ ಹೇಳುವುದಿಲ್ಲ (ಕವನ ಸಂಕಲನಗಳು),, ...

READ MORE

Related Books