ಘನವು ಎಂಬುದು ಅನುವಾದಿತ ಕಥೆಗಳು-2015

Author : ಅಬ್ಬಾಸ್ ಮೇಲಿನಮನಿ

Pages 448

₹ 200.00




Year of Publication: 2016
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560073
Phone: 97 - 23183311, 23183312

Synopsys

ಘನವು ಎಂಬುದು ಅನುವಾದಿತ ಕಥೆಗಳ ಸಂಕಲನವಾಗಿದೆ. ಇದರಲ್ಲಿ ರವೀಂದ್ರನಾಥ ಠಾಕೂರ್, ಸಾಮರ್ಸೆಟ್ ಮಾಮ್, ಟಾಲ್ ಸ್ಟಾಯ್, ಅಲ್ಬರ್ಟ್ ಕಾಮು, ಮಾರ್ಕ್ವೆಜ್ ಇನ್ನೂ ಮುಂತಾದ 35 ಜನರ ಕಥೆಗಳನ್ನು ಒಳಗೊಂಡಿರುವ ಈ ಸಂಕಲನದಲ್ಲಿನ ಕಥೆಗಳು ಸಮಾಜದ ಹಲವು ಮುಖಗಳನ್ನು ಪರಿಚಯಿಸುತ್ತದೆ. ಇಲ್ಲಿನ ಕಥೆಗಳಲ್ಲಿ ಜಮೀನ್ದಾರಿ ಪದ್ಧತಿಯ ಕರಾಳ ಮುಖದ ದರ್ಶನ, ಅನಕ್ಷರತೆಯಿಂದುಂಟಾಗುವ ಸಂಕಷ್ಟ, ಗಂಡು ಹೆಣ್ಣಿನ ಸಂಬಂಧ, ಪುರೋಹಿತಶಾಹಿ ವರ್ಗದ ಅಂಧ ಶ್ರದ್ಧೆ, ಮನುಷ್ಯ ಸಂಬಂಧ, ದಲಿತರ ನೋವು ನಲಿವು, ಒಬ್ಬ ವ್ಯಕ್ತಿಗೆ ಇರಬೇಕಾದ ನೈತಿಕ ಮತ್ತು ಸಾಮಾಜಿಕ ಬದ್ಧತೆಗಳು ಅಲ್ಲದೆ ಕಾರ್ಮಿಕರ ಸಂಕಷ್ಟಗಳು, ಕೆಳಸ್ತರದವರ ಹಸಿವಿನ ಹೋರಾಟಗಳು, ಸ್ವಾರ್ಥ, ರಾಜಕೀಯ, ಹೆಣ್ಣಿನ ಮೇಲಾಗುವ ದೌರ್ಜನ್ಯಗಳು, ಮತ್ತು ಆಕೆಯ ಹಕ್ಕಿನ ಬಗೆಗೆ ತಿಳುವಳಿಕೆ ಮೂಡಿಸುವ, ಕಲಾವಿದರ ದಾರುಣ ಸ್ಥಿತಿ ಇವೆಲ್ಲವುಗಳನ್ನು ಒಳಗೊಂಡಿರುವ ಇಲ್ಲಿನ ಕಥೆಗಳು ಪ್ರಸ್ತುತ ಸಮಾಜ, ರಾಜಕೀಯಕ್ಕೆ ಹಿಡಿದ ಕೈಗನ್ನಡಿಗಳಾಗಿವೆ.

About the Author

ಅಬ್ಬಾಸ್ ಮೇಲಿನಮನಿ
(05 March 1954 - 21 September 2020)

ಕನ್ನಡದ ಜನಪ್ರಿಯ ಕಥೆಗಾರರಾದ ಅಬ್ಬಾಸ್ ಮೇಲಿನಮನಿ ಹುಟ್ಟೂರು ಬಾಗಲಕೋಟೆ. 1954 ಮಾರ್ಚ್ 05ರಂದು ಜನಸಿದ ಇವರು ಪದವಿ ಶಿಕ್ಷಣದವರೆಗಿನ ಬಾಗಲಕೋಟೆಯ ನಾನಾ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆದ ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಇವರು ಬರೆದಿರುವ ಕವನ ಸಂಕಲನಗಳು: ಕಥೆಯಾದಳು ಹುಡುಗಿ, ಭಾವೈಕ್ಯ ಬಂಧ, ಪ್ರೀತಿ ಬದುಕಿನ ಹಾಡು. ಕಥಾ ಸಂಕಲನಗಳು: ಪ್ರೀತಿಸಿದವರು, ಕಣ್ಣ ಮುಂದಿನ ಕಥೆ, ಅರ್ಧಸತ್ಯಗಳು ಇತ್ಯಾದಿ. ಕಾದಂಬರಿಗಳು: ಜನ್ನತ್ ಮೊಹಲ್ಲ. ಲೇಖನ: ಸೌಹಾರ್ದ ಸಂಸ್ಕೃತಿ, ಸಂಪಾದಿತ: ಸಣ್ಣಕತೆ, ಕ್ಯಾದಗಿ ಪ್ರಜ್ಞೆ ಮುಳುಗದ ಕಥೆಗಳು. ಇವರಿಗೆ ಮಂಗಳೂರಿನ ಮಹ್ಯುದ್ದೀನ ಸಾಹಿತ್ಯ ಪ್ರತಿಷ್ಠಾನ ...

READ MORE

Related Books