ಗಿಳಿ ಪದ್ಮ

Author : ಭಾಗೀರಥಿ ಹೆಗಡೆ

Pages 112

₹ 50.00




Year of Publication: 2006
Published by: ಸುಮುಖ ಬುಕ್ ಹೌಸ್
Address: 174ಇ/28, 1ನೇ ಮಹಡಿ, 1ನೇ ಮುಖ್ಯ ರಸ್ತೆ, ವಿದ್ಯಾರಣ್ಯನಗರ, ಮಾಗಡಿ ರಸ್ತೆ ಟೋಲ್ ಗೇಟ್, ಬೆಂಗಳೂರು-5600023
Phone: 9844278792

Synopsys

ಭಾಗೀರಥಿಯವರ “ಗಿಳಿ ಪದ್ಮ” ತಾಯಿ ಮಗಳ ಸಂಬಂಧದ ಗಾಡತೆಯನ್ನು ಕುರಿತ ಮಕ್ಕಳ ಕಥಾ ಸಂಕಲನವಾಗಿದ್ದು, ಪದ್ಯವು ಮಿಳಿತವಾಗಿ ಭಾವಸಂಗಮಗಳ ನೆಲೆಯಲ್ಲಿ ಪಸರಿಸಿದೆ. ತಾಯಿ ಮಗಳ ನಡುವಿನ ಕೇವಲ ಸಂಭಾಷಣೆಯಾಗಿರದೆ ಎರಡು ಜೀವಗಳ ಒಳದನಿ, ಕನಸಿನ ಗೂಡು ಇದಾಗಿದೆ. ಕಥೆಯ ಕೇಂದ್ರ ಪಾತ್ರವಾದ ಕಲ್ಯಾಣಿಯ ಒಳ ಮನಸ್ಸಿನ ತುಡಿತವಾಗಿ ಅನುಭಾವದ ಪರಿಧಿಯನ್ನು ದಾಟಿ ನಮ್ಮೊಳಗೆ ಚಿಂತನಾ ತರಂಗಗಳನ್ನು ಪಸರಿಸುತ್ತದೆ. ಅವಳ ಸ್ವಗತಕ್ಕೆ ಮರುದನಿಯಾಗಿ ನುಡಿಯುತ್ತದೆ ಗಿಳಿಪದ್ಯಗಳು.

ಇಲ್ಲಿನ ಪದ್ಯಗಳು ಹೆಣ್ಣಿನ ಕನಸಿನನ ಪ್ರತೀಕಗಳು. ಪ್ರತಿ ಹೆಣ್ಣುಗಳು ಬಿಡುಗಡೆಗಾಗಿ ಬಯಸುವ, ಅಜ್ಜಿ ಕತೆಯಲ್ಲಿ ಬರುವ ಏಳು ಸಮುದ್ರದಾಚೆ ಕೀಳು ಸಮುದ್ರ, ಅಲ್ಲೊಬ್ಬ ರಾಕ್ಷಸ, ಆ ರಾಕ್ಷಸ ರಾಜಕುಮಾರಿಯನ್ನು ಕದ್ದೊಯುತ್ತಾನೆ, ಅಲ್ಲಿಗೆ ಬರುವ ರಾಜಕುಮಾರ ಅವಳನ್ನು ಬಿಡುಗಡೆಗೊಳಿಸಿ ತನ್ನೊಂದಿಗೆ ಕರೆದೊಯ್ಯುತ್ತಾನೆ". ಇಂತಹ ಕಥೆಗಳನ್ನು ನಾವು ಕೇಳಿರುತ್ತೇವೆ. ಇಂತಹ ಸ್ತ್ರೀ ಸ್ವಾತಂತ್ಯ್ರ ಬಯಕೆ, ಸಂಬಂಧಗಳ ಹಂಬಲಿಕೆ ಇಲ್ಲಿಯ ಪ್ರಧಾನ ಚಿತ್ರಣಗಳಾಗಿವೆ.

About the Author

ಭಾಗೀರಥಿ ಹೆಗಡೆ
(23 July 1948)

ಲೇಖಕಿ ಭಾಗೀರಥಿ ಹೆಗಡೆ ಅವರು ಜನಿಸಿದ್ದು, 1948 ಜುಲೈ 23ರಂದು. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ತಟ್ಟಿಕೈ ಗ್ರಾಮದವರು. ತಾಯಿ ಗಣಪಿ ಭಟ್ಟ. ತಂದೆ ವೆಂಕಟ್ರಮಣ ಭಟ್ಟ. ಹುಟ್ಟೂರು ಹಾಗೂ ಸಿದ್ದಾಪುರದಲ್ಲಿ ಎಸ್.ಎಸ್.ಎಲ್.ಸಿ ಶಿಕ್ಷಣ ಪಡೆದಿದ್ದಾರೆ. ಶಾಲಾ ದಿನಗಳಿಂದಲೇ ಸಾಹಿತ್ಯದಲ್ಲಿ ಆಸಕ್ತಿಯಿದ್ದ ಭಾಗೀರಥಿ ಅವರು ಹಲವಾರು ಕಥೆ, ಕವನಗಳನ್ನು ಬರೆದಿದ್ದಾರೆ. ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಇವರು ಬರೆದ ಲೇಖನಗಳು ಪ್ರಕಟವಾಗಿವೆ. ಭಾಗೀರಥಿ ಅವರ ಪ್ರಮುಖ ಕೃತಿಗಳೆಂದರೆ ಸ್ವೀಕಾರ, ಅರ್ಥ, ಪ್ರವಾಹ, ಗಿಳಿಪದ್ಮ, ಬೇಟೆ, ಪ್ರತಿಮೆ, ಆಳ, ಹಿಮನದಿ (ಕಥಾ ಸಂಕಲನ), ಚಂದ್ರಗಾವಿ, ಒಂದು ದಿನ (ಕವನ ...

READ MORE

Related Books