ಗಿರಿನಾಡು

Author : ಸಿ.ಆರ್‌. ಕಂಬಾರ ಶೆಟ್ಟಿಕೇರಾ

Pages 114

₹ 125.00




Year of Publication: 2018
Published by: ಗಾಯತ್ರಿ ಪ್ರಕಾಶನ
Address: #193/1, 29ನೇ ವಾರ್ಡ್‌, ಚರ್ಚ್‌ ಹೌಸ್‌ ಹತ್ತಿರ, ಬಂಡಿಹಟ್ಟಿ, ಕೌಲ್‌ ಬಜಾರ್‌, ಬಳ್ಳಾರಿ
Phone: 9483189643

Synopsys

ಗಿರಿನಾಡು ಕೃತಿಯು ಗ್ರಾಮಾಧ್ಯಯನದ ಒಂದು ಭಾಗವಾಗಿದೆ. ಈ ಕೃತಿಯಲ್ಲಿ ಯಾದಗಿರಿ ವ್ಯಾಪ್ತಿಯಲ್ಲಿ ಸಿಗುವ ಶಾಸನಗಳು, ಕೋಟೆ ಕೊತ್ತಲಗಳು, ಗ್ರಾಮೀಣ ಆಟಗಳು, ಗಾದೆ ಇತ್ಯಾದಿ ಸಂಗ್ರಹಿಸಿ ಚರ್ಚಿಸಿದ್ದಾರೆ. ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಸಂಪ್ರದಾಯ ಆಚರಣೆಗಳ ವಿವರಣೆಯೂ ಇದೆ. ರೈಲ್ವೆ ನಿಲ್ದಾಣದಲ್ಲಿ ಬದುಕುತ್ತಿರುವ ಬೀದಿ ಮಕ್ಕಳ ಸಮಸ್ಯೆಗಳು ಹಾಗೂ ಕೋಮು ಸೌಹಾರ್ದತೆಗೆ ಕಾರಣವಾಗಿರುವ ದರ್ಗಾಗಳ ವಿವರ ಮಾಹಿತಿಯ ಲೇಖನಗಳಿವೆ. 

About the Author

ಸಿ.ಆರ್‌. ಕಂಬಾರ ಶೆಟ್ಟಿಕೇರಾ
(01 August 1985)

ಸಂಶೋಧಕ, ಬರಹಗಾರ ಸಿ.ಆರ್‌. ಕಂಬಾರ ಶೆಟ್ಟಿಕೇರಾ ಜನಿಸಿದ್ದು 1985 ಆಗಸ್ಟ್‌ 1ರಂದು ಯಾದಗಿರಿ ಜಿಲ್ಲೆಯ ಶೆಟ್ಟಿಕೇರಾದಲ್ಲಿ.  ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ.    ಶೆಟ್ಟಿಕೇರಾ ಗ್ರಾಮಾಧ್ಯಯನ, ಗಿರಿನಾಡು, ಬೀದಿ ಬದುಕು, ಸಾಮಾಜಿಕ ಬಿಕ್ಕಟ್ಟುಗಳು, ಸಮುದಾಯ ಸಂಸ್ಕೃತಿ, ಶೋಧ ಹಾಗೂ ಜಾನಪದ ಸಂಗಮ ಇವರ ಪ್ರಮುಖ ಕೃತಿಗಳು. ಶೆಟ್ಟಿಕೇರಾ ಗ್ರಾಮಾಧ್ಯಯನ ಕೃತಿಗೆ 2017ರ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಪುರಸ್ಕಾರ ದೊರೆತಿದೆ.  ...

READ MORE

Related Books