ದಿ ಗಾಡ್ ಫಾದರ್

Author : ರವಿ ಬೆಳಗೆರೆ

Pages 348

₹ 200.00




Published by: ಭಾವನಾ ಪ್ರಕಾಶನ
Address: ನಂ. 2, 80 ಫೀಟ್ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಪಂಪ್ ಹತ್ತಿರ, ಬನಶಂಕರಿ 2ನೇ ಹಂತ ಬೆಂಗಳೂರು-560070
Phone: 080- 2679 0804

Synopsys

ಭೂಗತ ಲೋಕವೆಂದರೆ ಕೇವಲ ಹೊಡೆದಾಟ, ಕೊಲೆ ಮತ್ತು ರಕ್ತಪಾತಗಳ ಅಧ್ಯಾಯ ಮಾತ್ರ ಕಾಣಲು ಸಿಗುತ್ತದೆ ಎಂಬ ಕಲ್ಪನೆಯನ್ನು ಹೋಗಲಾಡಿಸುವ ಕೃತಿ ದಿ ಗಾಡ್ ಫಾದರ್. ಮೇಲ್ನೋಟಕ್ಕೆ ಭೂಗತ ಲೋಕದ ಕಥೆಯನ್ನು ಕಥಾವಸ್ತುವಾಗಿ ಇಟ್ಟುಕೊಂಡಂತೆ ಭಾಸವಾಗುವ ಕಾದಂಬರಿ ಇದಾದರು, ಪುಸ್ತಕದ ಒಳ ಹೊಕ್ಕಂತೆ ಓದುರನ್ನು ಬೆಸೆದುಕೊಳ್ಳುವ ಸಂಬಂಧಗಳು ಪುಸ್ತಕವನ್ನು ಪತ್ತಷ್ಟು ಅಪ್ಯಾಯಮಾನವಾಗಿಸುತ್ತದೆ. ಕಥೆಯ ಪ್ರಮುಖ ಪಾತ್ರವಾಗಿ ಬರುವ ಚಿನ್ನಮಾದ ರೆಡ್ಡಿ ಕುಟುಂಬದೊಂದಿಗೆ ನೀವು ಒಬ್ಬರಾಗಿ ಬಿಡುತ್ತೀರಿ ಎಂದು ಪುಸ್ತಕದ ಬೆನ್ನುಡಿಯಲ್ಲಿ ಬರೆಯಲಾಗಿದೆ. ಕೇವಲ ರಕ್ತಪಾತಗಳ ಅಧ್ಯಾಯವಲ್ಲದೇ, ಸಂಬಂಧಗಳನ್ನು ಬೆಸೆಯುವಂತಹ ಪ್ರೀತಿ ವಿಶ್ವಾಸ ಮತ್ತು ನಂಬಿಕೆಗಳು ಯಾವ ರೀತಿ ಸಂಬಂಧವನ್ನು ಜೀವಂತವಾಗಿಡುತ್ತವೆ ಎಂಬುದರ ಕುರಿತಾಗಿ ಕೂಡ ಈ ಪುಸ್ತಕದಲ್ಲಿ ರವಿ ಬೆಳಗೆರೆಯವರು ಬರೆದಿದ್ದಾರೆ.

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Related Books