ಗೋಕಾಕ ಶಿಕ್ಷಣ ಸಂಸ್ಥೆ

Author : ಸಿ.ಕೆ ನಾವಲಗಿ

Pages 129

₹ 150.00




Year of Publication: 2016
Published by: ಗೋಕಾಕ ಶಿಕ್ಷಣ ಸಂಸ್ಥೆ
Address: ಗೋಕಾಕ್‌, ಬೆಳಗಾವಿ ಜಿಲ್ಲೆ

Synopsys

ಗೋಕಾಕ ಶಿಕ್ಷಣ ಸಂಸ್ಥೆ ಈ ಕೃತಿಯು ಸಂಸ್ಥೆಯ ಇತಿಹಾಸ ಹಾಗೂ ಶಿಕ್ಷಣ ಸಂಸ್ಥೆಯ ಮೈಲುಗಲ್ಲುಗಳನ್ನು ದಾಖಲಿಸಿದೆ. ಡಾ. ಸಿ.ನಾವಲಗಿ ಅವರು ಕೃತಿಯ ಕರ್ತೃ. ಪ್ರಥಮ ವಿಶ್ವಸ್ಥ ಆಡಳಿತ ಮಂಡಳಿ, ಇಂದಿನ ವಿಶ್ವಸ್ಥ ಆಡಳಿತ ಮಂಡಳಿ, ಶಿಕ್ಷಣದ ಅಗತ್ಯ-ಅನಿವಾರ್ಯತೆ: ಚಾರಿತ್ರಿಕ ನಲೆ, ಸಂಸ್ಥೆ ಇಟ್ಟ ಹೆಜ್ಜೆ-ತೊಟ್ಟ ರೂಪ, ಸಂಸ್ಥಾಪಕರ ಕನಸು-ನನಸು, ಸಂಸ್ಥೆಯ ಲಾಂಛನಳ ಅರ್ಥ ವಿವರಣೆ, ಸಂಸ್ಥೆಯ ಸಂಸ್ಥಾಪಕರು/ನವರತ್ನಗಳು, ವಿಶ್ವಸ್ಥ ಮತ್ತು ಆಡಳಿತ ಮಂಡಳಿಯ ಸದಸ್ಯರು, ಇಂದಿನ ವಿಶ್ವಸ್ಥ ಮತ್ತು ಆಡಳಿತ ಮಂಡಳಿಯ ಸದಸ್ಯರು, ಸಂಸ್ಥೆಯ ಇನ್ನಷ್ಟು ಸದಸ್ಯರು, ಹೀಗೆ ಗೋಕಾಕ್‌ ಶಿಕ್ಷಣ ಸಂಸ್ಥೆಯ ಕುರಿತು ಸಮಗ್ರ ಮಾಹಿತಿಯನ್ನು ಈ ಕೃತಿ ನೀಡಿದೆ.

 

About the Author

ಸಿ.ಕೆ ನಾವಲಗಿ
(01 August 1956)

ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್‌ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.  ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...

READ MORE

Related Books